ಸಾರಾಂಶ
ವೆಂಕಟಗಿರಿಯಲ್ಲಿ ನಡೆದ 105ನೇ ಕವಿಗೋಷ್ಠಿಯಲ್ಲಿ ಸಾಹಿತಿ
ಕನ್ನಡಪ್ರಭ ವಾರ್ತೆ ಗಂಗಾವತಿ
ಕಾವ್ಯ ರಚನೆಯು ನಯ, ವಿನಯ, ಕಲಿಸುತ್ತದೆ. ಭಾವ ಉದ್ವೇಗವೇ ಕಾವ್ಯ ಎಂದು ಹಿರಿಯ ಸಾಹಿತಿ ನಿಜಲಿಂಗಪ್ಪ ಮೆಣಸಗಿ ಹೇಳಿದರು.ತಾಲೂಕಿನ ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಗಾವತಿಯ ಕಾವ್ಯಲೋಕ ಸಂಘಟನೆಯು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಸ್.ಬಿ.ಗೊಂಡಬಾಳ ಸ್ಮರಣಾರ್ಥ ಆಯೋಜಿಸಿದ್ದ 105ನೇ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯದಿಂದ ಎಲ್ಲರೂ ಸುಸಂಸ್ಕತರಾಗುತ್ತಾರೆ. ಸಾಹಿತ್ಯದ ಕುರಿತು ಇಂದಿನ ಮಕ್ಕಳಿಗೆ ಆಸಕ್ತಿ ಮೂಡಿಸಬೇಕು. ಕಾವ್ಯ ರಚನೆ ಬಗ್ಗೆ ತಿಳಿಸಬೇಕು ಎಂದರು.ಹಿರಿಯ ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ, ರಾಜ್ಯ ಹಾಗೂ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇಂತಹ ಸಂದರ್ಭದಲ್ಲಿ ಕಾವ್ಯಲೋಕ ಸಂಘಟನೆ ಗ್ರಾಮೀಣ ಭಾಗದಲ್ಲಿ ಕವಿಗೋಷ್ಠಿ ನಡೆಸುತ್ತಿರುವುದು ಸಂತಸ ತಂದಿದೆ. ಗೋಷ್ಠಿಗಳು ಗ್ರಾಮೀಣ ಪ್ರತಿಭೆಗಳು ಬೆಳೆಯಲು ಸಹಾಯಕವಾಗಲಿದೆ ಎಂದು ಹೇಳಿದರು.
ಗಂಗಾವತಿ ಕರುಣಾ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷೆ ಡಾ. ಸಿ. ಮಹಾಲಕ್ಷ್ಮಿ, ನಾಟಕಕಾರ ಕೆ. ಪಂಪಣ್ಣ, ತಾಲೂಕು ಕಸಾಪ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಕೊಪ್ಪಳ ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರ ಗೊಂಡಬಾಳ ಮಾತನಾಡಿದರು.ವೆಂಕಟಗಿರಿ ಬ್ರಹ್ಮನಮಠದ ವೀರಯ್ಯಶಾಸ್ತ್ರಿ ಸಾನಿಧ್ಯ ವಹಿಸಿದ್ದರು. ಎಸ್‍ಡಿಎಂಸಿ ಅಧ್ಯಕ್ಷ ಪಂಪಣ್ಣ ಕರಡಿ, ಸಂಘಟಕ ವೆಂಕಟೇಶ, ನಿವೃತ್ತ ಶಿಕ್ಷಕ ಮಹಮದ್ ಮೀಯಾ ಮತ್ತಿತರರು ಪಾಲ್ಗೊಂಡಿದ್ದರು.
ಶಾಮೀದ್ ಲಾಠಿ, ಅಜ್ಜಯ್ಯಸ್ವಾಮಿ ಹಿರೇಮಠ, ಜಡೆಯಪ್ಪ ಮೆಟ್ರಿ, ತಾರಾ ಸಂತೋಷ, ಚಿದಂಬರ ಬಡಿಗೇರ, ಬಸವರಾಜ ಹೇರೂರು, ವಿರುಪಣ್ಣ ಢಣಾಪುರ, ಕನಕಪ್ಪ ದಂಡಿನ್, ಶಿವನಗೌಡ ತೆಗ್ಗಿ, ಸೋಮಶೇಖರ್ ಕಂಚಿ, ಶರಣಪ್ಪ ವಿದ್ಯಾನಗರ, ಬಸವರಾಜ ಯತ್ನಟ್ಟಿ, ರೇಣುಕಾ ಮರಕುಂಬಿ ಸೇರಿದಂತೆ ಅನೇಕರು ಕಾವ್ಯ ವಾಚಿಸಿದರು.ಉತ್ತಮವಾಗಿ ಕಾವ್ಯ ವಾಚಿಸಿದ ಶಕುಂತಲಾ ನಾಯಕ ಹೊಸ್ಕೆರಾ(ಪ್ರಥಮ), ಭೀಮನಗೌಡ ಕೆಸರಟ್ಟಿ(ದ್ವಿತೀಯ), ಶಾರದಾ (ತೃತೀಯ) ಬಹುಮಾನ ಪಡೆದರು. ಕಾವ್ಯಲೋಕ ಅಧ್ಯಕ್ಷ ಎಂ. ಪರಶುರಾಮ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ ಸ್ವಾಗತಿಸಿ ನಿರ್ವಹಿಸಿದರು.