ಪ್ರಜಾಪ್ರಭುತ್ವದಲ್ಲಿ ರಾಜ್ಯಶಾಸ್ತ್ರ ಕಲಿಕೆ ಅನಿವಾರ್ಯ

| Published : Nov 10 2024, 01:34 AM IST

ಪ್ರಜಾಪ್ರಭುತ್ವದಲ್ಲಿ ರಾಜ್ಯಶಾಸ್ತ್ರ ಕಲಿಕೆ ಅನಿವಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಕಾಲೇಜಿನಲ್ಲಿ 30ವಿಭಿನ್ನ ಆಟಗಳ ಬಗ್ಗೆ ಮಾರ್ಗದರ್ಶನ, ನೋಡಿ ತಿಳಿ, ಖುಷಿ ಪಡಿ ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಪ್ರೊ.ಜಯಲಕ್ಷ್ಮಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪ್ರಜಾಪ್ರಭುತ್ವ ದೇಶದಲ್ಲಿ ಜೀವನ ನಡೆಸುತ್ತಿರುವ ಪ್ರತಿಯೊಬ್ಬರೂ ರಾಜ್ಯಶಾಸ್ತ್ರ ಕಲಿಯಬೇಕಿರುವುದು ಅಗತ್ಯ ಮತ್ತು ಅನಿವಾರ್ಯ ಎಂದು ಪ್ರಾಧ್ಯಾಪಕಿ ಡಾ.ಸುಧಾ ಹೇಳಿದರು.

ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ರಾಜ್ಯಶಾಸ್ತ್ರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ರಾಜ್ಯಶಾಸ್ತ್ರವನ್ನು ಎಲ್ಲರೂ ಖುಷಿಯಿಂದ ಕಲಿಯಲಿ ಎನ್ನುವ ಉದ್ದೇಶ ನಮ್ಮದು. ಇದರ ಜತೆಗೆ ನೋಡಿ ತಿಳಿ, ಮಾಡಿ ಕಲಿ ಎನ್ನುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯ ಎಂದು ರಾಜ್ಯಶಾಸ್ತ್ರದ ವಿಭಾದಿಂದ ಈ ಕಾರ್ಯಕ್ರಮ ಅಯೋಜಿಸಲಾಗಿದೆ. ಅಂತಿಮ ವರ್ಷದ ಬಿಎ ವಿದ್ಯಾರ್ಥಿಗಳು ವಿಭಿನ್ನವಾಗಿ ಈ ಕಾರ್ಯಕ್ರಮ ಅಯೋಜಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.

30 ವಿಭಿನ್ನ ಆಟಗಳ ಬಗ್ಗೆ ಮಾರ್ಗದರ್ಶನ:

ಇದೇ ವೇಳೆ ರಾಜ್ಯಶಾಸ್ತ್ರ ಮುಖ್ಯಸ್ಥೆ ಜಿ.ಸುಧಾ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸುಮಾರು 30 ವಿಭಿನ್ನ ಆಟಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸುವಂತೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಾಂಶುಪಾಲೆ ಪ್ರೊ.ಜಯಲಕ್ಷ್ಮಿ, ಗ್ರಂಥಪಾಲಕ ಡಿ.ಮಹದೇವಯ್ಯ ರಾಜ್ಯಶಾಸ್ತ್ರ ಸಂಘದ ಬ್ಯಾನರ್ ಅನ್ನು ಅನಾವರಣಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಶುಭಕೋರಿ, ಎಲ್ಲರೂ ಸಂತಸದಿಂದ ಕಲಿತು, ನಿಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಿ ಎಂದರು.

ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪ್ರೇಮಲತಾ, ಡಾ.ಅಶೋಕ್ ಪ್ಯಾಟಿ, ಪ್ರೊ.ಸುಂದರಮೂರ್ತಿ, ಪ್ರೊ.ಹರೀಶ್, ಪ್ರೊ.ಪ್ರಕಾಶ್, ಪ್ರೊ.ಪರಮೇಶ್, ಇತರರು ರಾಜ್ಯಶಾಸ್ತ್ರದ ಮಹತ್ವದ ವಿವರಣೆ ನೀಡಿದರು. ಕಲಾ ವಿಭಾಗದ ಮೂರು ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಆಟಗಳೊಂದಿಗೆ ಸಜ್ಜಾಗುವ ಮೂಲಕ ಗಮನ ಸೆಳೆದರು.

ಆಟಗಳ ಉದ್ಘಾಟನೆ:

ಕಲಾ ಮತ್ತು ಭಾಷಾ ವಿಭಾಗಗಳ ಪ್ರಾಧ್ಯಾಪಕ ಡಾ.ವೇಣುಗೋಪಾಲ್, ಪ್ರೊ.ಪ್ರೇಮಕುಮಾರಿ ಪ್ರೊ.ಸಫೀನಾ ಬಾನು, ಡಾ.ಮಾನಸ ಪ್ರಿಯದರ್ಶಿನಿ, ಕೊಠಡಿ 10 ರಲ್ಲಿನ ಆಟಗಳ ಉದ್ಘಾಟನೆಯನ್ನು ಕಾಮರ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಆನಂದ, ಪ್ರೊ. ಮಧುಸೂದನ್, ಪ್ರೊ.ಸಂತೋಷ್ ನಾಯಕ್ ಮತ್ತು ಕೊಠಡಿ 11ರಲ್ಲಿನ ಆಟಗಳ ಉದ್ಘಾಟನೆಯನ್ನು ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ.ನಂಜುಂಡಸ್ವಾಮಿ, ಡಾ.ಹೇಮಕುಮಾರ್, ಡಾ.ಗಣೇಶ್, ಡಾ.ಮಹೇಶ್ ನಡೆಸಿಕೊಟ್ಟರಲ್ಲದೆ ವಿದ್ಯಾರ್ಥಿಗಳೊಂದಿಗೆ ತಾವು ಸಹ ಆಟಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು. ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಮರಯ್ಯ, ಮಂಜುನಾಥ್ ಇತರರು ಇದ್ದರು.