ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಗುರುಬಸಪ್ಪ ಮಾತನಾಡಿ, ತಾಲೂಕಿನಲ್ಲಿ ಶಾಸಕ ಶರತ್ ಬಚ್ಚೇಗೌಡರು ಮಹಿಳೆಯರನ್ನು ಪ್ರೋತ್ಸಾಹಿಸಿ ಸಮಾಜದ ವಿವಿಧ ರಂಗಗಳಿಗೆ ಕರೆ ತರಲು ಹಾಗೂ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಮಹಿಳಾ ಗ್ರಾಮ ಸಭೆಗಳ ಜೊತೆ ಜೊತೆಗೆ ಮಹಿಳಾ ಕ್ರೀಡಾಕೂಟವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಿ ಮಹಿಳೆಯರಿಗೆ ಸೂಕ್ತ ವೇದಿಕೆ ನಿರ್ಮಿಸುವ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಸಮಾಜದಲ್ಲಿ ಮಹಿಳೆಯರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವವರಿಗಿಂತ ಟೀಕೆ ಮಾಡುವವರೇ ಹೆಚ್ಚು. ಅಂತಹ ಟೀಕಾಕಾರರನ್ನು ಬದಿಗಿಟ್ಟು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಟೀಮ್ ಎಸ್‌ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ತಿಳಿಸಿದರು.ತಾಲೂಕಿನ ಮುಗಬಾಳ ಗ್ರಾಪಂ ವತಿಯಿಂದ ನಡೆದ ಮಹಿಳಾ ಕ್ರೀಡಾಕೂಟ ಉದ್ಘಾಟಿಸಿ, ವಿಜೇತ ಮಹಿಳೆಯರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ ಅನೇಕ ಏಳು- ಬೀಳುಗಳ ನಡುವೆ ಕುಟುಂಬದ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾಳೆ. ಜೊತೆಗೆ ಕೌಟುಂಬಿಕ ಕಲಹ, ಏರುಪೇರಾಗುವ ದೈಹಿಕ ನೋವು ಇವೆಲ್ಲವುಗಳಿಂದ ಮಾನಸಿಕವಾಗಿ ಕುಗ್ಗುವ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವುದು ಅನಿವಾರ್ಯವಾಗಿದೆ. ಮುಖ್ಯವಾಗಿ ಸಮಾಜದಲ್ಲಿ ಹೆಣ್ಣನ್ನು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೆ ಪ್ರೋತ್ಸಾಹಿಸುವ ಬದಲಾಗಿ ಬೆನ್ನ ಹಿಂದೆ ನಿಂತು ಟೀಕೆ ಮಾಡುವವರೆ ಹೆಚ್ಚು. ಆದ್ದರಿಂದ ಗ್ರಾಮೀಣ ಭಾಗದ ಮಹಿಳೆಯರು ಟೀಕಕಾರರನ್ನು ಬದಿಗೊತ್ತಿ ಸಾಧನೆಯತ್ತ ದಾಪುಗಾಲಿಡಿ. ಪ್ರತಿ ಮಹಿಳೆಯರಲ್ಲಿ ತಮ್ಮದೆ ಆದ ಪ್ರತಿಭೆ ಅಡಗಿದ್ದು ಅದನ್ನು ಹೊರತರುವ ಕೆಲಸ ಆಗಬೇಕು. ಮನೋರಂಜನೆ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗಿಯಾಗಿ ಎಂದು ತಿಳಿಸಿದರು.ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಗುರುಬಸಪ್ಪ ಮಾತನಾಡಿ, ತಾಲೂಕಿನಲ್ಲಿ ಶಾಸಕ ಶರತ್ ಬಚ್ಚೇಗೌಡರು ಮಹಿಳೆಯರನ್ನು ಪ್ರೋತ್ಸಾಹಿಸಿ ಸಮಾಜದ ವಿವಿಧ ರಂಗಗಳಿಗೆ ಕರೆ ತರಲು ಹಾಗೂ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಮಹಿಳಾ ಗ್ರಾಮ ಸಭೆಗಳ ಜೊತೆ ಜೊತೆಗೆ ಮಹಿಳಾ ಕ್ರೀಡಾಕೂಟವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಿ ಮಹಿಳೆಯರಿಗೆ ಸೂಕ್ತ ವೇದಿಕೆ ನಿರ್ಮಿಸುವ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಗ್ರಾಪಂ ಆಡಳಿತಾಧಿಕಾರಿ ಡಾ. ಮಂಜುನಾಥ್, ಪಿಡಿಒ ಲೋಕೇಶ್, ಸಿಡಿಪಿಒ ಶಿವಮ್ಮ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಗುರುಬಸಪ್ಪ, ಯುವ ಮುಖಂಡ ರವಿರಾಜ್ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.