ಭಿನ್ನಾಭಿಪ್ರಾಯ ಬಿಟ್ಟು ಪಕ್ಷದ ವರ್ಚಸ್ಸು ಹೆಚ್ಚಿಸಿ

| Published : Dec 08 2024, 01:18 AM IST

ಭಿನ್ನಾಭಿಪ್ರಾಯ ಬಿಟ್ಟು ಪಕ್ಷದ ವರ್ಚಸ್ಸು ಹೆಚ್ಚಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಕಾರ್ಯಕರ್ತರಿಗೆ ತುಂಬಾ ನೋವುಂಟು ಮಾಡಿದೆ ಎಂದು ಹಿರಿಯ ಕಾರ್ಯಕರ್ತ ಎಸ್.ಎನ್.ಬಾಲಕೃಷ್ಣ ವಿಷಾದ ವ್ಯಕ್ತಪಡಿಸಿದರು.

ಭದ್ರಾವತಿ: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಕಾರ್ಯಕರ್ತರಿಗೆ ತುಂಬಾ ನೋವುಂಟು ಮಾಡಿದೆ ಎಂದು ಹಿರಿಯ ಕಾರ್ಯಕರ್ತ ಎಸ್.ಎನ್.ಬಾಲಕೃಷ್ಣ ವಿಷಾದ ವ್ಯಕ್ತಪಡಿಸಿದರು.

ನಗರದ ಹಿರಿಯ ಕಾರ್ಯಕತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭಿನ್ನಾಭಿಪ್ರಾಯಗಳ ಮೂಲಕ ಒಬ್ಬರಿಗೊಬ್ಬರು ಕೆಸರು ಎರಚುವ ಕಾರ್ಯದಲ್ಲಿ ತೊಡಗಿರುವುದು ಭಾರತೀಯ ಜನಸಂಘದಿಂದ ಇಲ್ಲಿಯವರೆಗೂ ಬಂದಿರುವ ಹಿರಿಯ ಕಾರ್ಯಕರ್ತರಿಗೆ ಮಾತ್ರವಲ್ಲ, ಹೊಸದಾಗಿ ಬಂದಿರುವ ಕಾರ್ಯಕರ್ತರ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷವಾಗಿದೆ. ನಾಯಕರುಗಳು ಯಾವುದೇ ಬಣಗಳಲ್ಲಿ ಗುರುತಿಸಿಕೊಳ್ಳದೇ ಕೇವಲ ಸಂಘಟನೆಯ ದೃಷ್ಟಿಯಿಂದ ಒಟ್ಟಿಗೆ ಸೇರಿ ಸರ್ಕಾರದ ವಿರುದ್ಧ ಹೋರಾಡಲು ಕೋರುತ್ತೇವೆ. ಅಲ್ಲದೆ ಪಕ್ಷದಿಂದ ಯಾರನ್ನೂ ಹೊರಗೆ ಹಾಕದೆ ಎಲ್ಲರನ್ನು ಒಟ್ಟಿಗೆ ಸೇರಿಸಿ, ಸಂಘಟನಾತ್ಮಕವಾಗಿ ಕ್ರಮ ಕೈಗೊಂಡರೆ ಮುಂದೆ ರಾಜ್ಯಾದ್ಯಂತ ಇರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಸಲಹೆ ನೀಡಿದರು.

ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಕೋಠಿ, ಕೆ.ಎಸ್.ಚನ್ನಪ್ಪ, ತೋಪೇಗೌಡ, ಗಾಯತ್ರಿ, ರತ್ನಮ್ಮ, ಉಕ್ಕುಂದ ಶಾಂತಣ್ಣ, ತಳ್ಳಿಕಟ್ಟೆ ಗಂಗಪ್ಪ, ಸಿದ್ದರಾಮಣ್ಣ, ರಂಗೋಜಿ ರಾವ್, ಸುಬ್ರಹ್ಮಣ್ಯ, ಕುಮಾರಸ್ವಾಮಿ, ಜಯರಾಮ್‌ಸಿಂಗ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ವೆಂಕಟೇಶ್ ಸ್ವಾಗತಿಸಿ, ನರಸಿಂಹಚಾರ್ ನಿರೂಪಿಸಿದರು.