ಸಾರಾಂಶ
ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ತಮ್ಮದೇ ಪಕ್ಷದ ಸಚಿವ ರಾಜಣ್ಣನವರ ವಿರುದ್ಧ ವಿಧಾನಸಭೆಯಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಮಾತನಾಡಿರುವುದನ್ನು ನೋಡಿದರೆ ಸ್ವಪಕ್ಷದವರಿಗೆ ಅವರು ತೊಂದರೆ ನೀಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಣಿಗಲ್
ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ತಮ್ಮದೇ ಪಕ್ಷದ ಸಚಿವ ರಾಜಣ್ಣನವರ ವಿರುದ್ಧ ವಿಧಾನಸಭೆಯಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಮಾತನಾಡಿರುವುದನ್ನು ನೋಡಿದರೆ ಸ್ವಪಕ್ಷದವರಿಗೆ ಅವರು ತೊಂದರೆ ನೀಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್ ಟೀಕಿಸಿದ್ದಾರೆ.ಕುಣಿಗಲ್ ಪಟ್ಟಣದ ಪಿಎಲ್ ಡಿ ಬ್ಯಾಂಕ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಪಕ್ಷದವರ ಮೇಲೆ ರಾಜಕೀಯ ಮಾಡುವ ಕುಣಿಗಲ್ ಶಾಸಕರು ಡಿಕೆ ಶಿವಕುಮಾರ್ ರನ್ನು ಯಾವ ರೀತಿ ಮುಖ್ಯಮಂತ್ರಿ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸಚಿವ ಕೆ. ಎನ್. ರಾಜಣ್ಣ ಸಹಕಾರ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ, ಕರ್ನಾಟಕ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಕ್ಕೆ ಕುಣಿಗಲ್ ನಲ್ಲಿ ಹಲವಾರು ಉದಾಹರಣೆಗಳಿವೆ. ಅಂತಹ ತಮ್ಮ ಪಕ್ಷದ ಉತ್ತಮ ಸಚಿವರ ವಿರುದ್ಧ ವಾಗ್ದಾಳಿ ಮಾಡಿದ್ದು ಖಂಡನೀಯ ಎಂದರು.
ರಾಜಕೀಯ ಮಾಡುವುದರಲ್ಲಿ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ನಿಸ್ಸೀಮರು. ಹೀಗಾಗಿ ನನ್ನ ಮೇಲೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ನಡೆಸಿದರು. ಆದರೂ ಕೂಡ ಜನಗಳ ಬೆಂಬಲದಿಂದ ಪುನಃ ಅಧಿಕಾರಕ್ಕೆ ಬಂದಿದ್ದೇನೆ. ಇಂಥ ಕುಣಿಗಲ್ ಶಾಸಕರು ಕೆ.ಎನ್ ರಾಜಣ್ಣ ಅವರ ವಿರುದ್ಧ ಮಾತನಾಡಿರುವುದು ಖಂಡನೀಯ ಎಂದರು.ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ರಂಗಸ್ವಾಮಿ , ತಿಮ್ಮೇಗೌಡ , ಮಂಜುನಾಥ್ ಇದ್ದರು .