ದುಶ್ಚಟ ಬಿಡಿ ನೆಮ್ಮದಿಯಿಂದ ಇರಿ

| Published : Nov 25 2024, 01:03 AM IST

ಸಾರಾಂಶ

ತಾಲೂಕಿನ ಗುತ್ತಿಕಟ್ಟೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನೂತನ ವಿಗ್ರಹ ಪ್ರತಿಷ್ಠಾಪನೆ, ವಾಲ್ಮೀಕಿ ಜಯಂತಿ ಹಾಗೂ ಶ್ರೀ ಕರಿಯಮ್ಮ ದೇವಿ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಾತಾ ಪಿತೃಗಳ ಸಹೋದರರ ಪ್ರೇಮ, ಗಂಡ ಹೆಂಡತಿಯ ಆದರ್ಶ ಬದುಕನ್ನು ಮಹರ್ಷಿ ವಾಲ್ಮೀಕಿಯವರ ರಾಮಾಯಣದಲ್ಲಿ ಕಾಣಬಹುದಾಗಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.

ತಾಲೂಕಿನ ಗುತ್ತಿಕಟ್ಟೆ ಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ನೂತನ ವಿಗ್ರಹ ಪ್ರತಿಷ್ಠಾಪನೆ, ವಾಲ್ಮೀಕಿ ಜಯಂತಿ ಹಾಗೂ ಶ್ರೀ ಕರಿಯಮ್ಮ ದೇವಿ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದುಶ್ಚಟ ಮುಕ್ತ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ. ತಂದೆ ತಾಯಿ ಮಾತನ್ನು ಗೌರವಿಸಿದವರು ಎಲ್ಲಾ ಹಂತದಲ್ಲಿಯೂ ಅಭಿವೃದ್ಧಿಯಾಗಿದ್ದಾರೆ ಎಂದರು.ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಪಾರ ಜ್ಞಾನವನ್ನು ಪಡೆದು ಮನುಕುಲಕ್ಜೆ ಆದರ್ಶವಾಗಿದ್ದಾರೆ. ವಾಲ್ಮೀಕಿ ಆದರ್ಶಗಳನ್ನು ನಾವು ಪಾಲಿಸಿದಾಗ ಈ ಜಯಂತಿಗೆ ಅರ್ಥ ಬರುತ್ತದೆ, ವಾಲ್ಮೀಕಿ ಒಂದು ಜ್ಞಾನದ ಸಂಕೇತ, ಇವರ ಸಂದೇಶ ಕೇವಲ ಮಾತಿಗೆ ಸೀಮಿತಗೊಳಿಸದೇ ಅನುಷ್ಠಾನಗೊಳಿಸಬೇಕು. ಕೇವಲ ಕಥೆಗಳನ್ನು ಹೇಳುವುದೇ ಆಗಬಾರದು, ಆದರ್ಶ ಪುರುಷರ ಕಥೆಗಳನ್ನು ಕೇಳಿ ನಮ್ಮ ಜ್ಞಾನ ವೃದ್ಧಿಯಾಗಬೇಕು ಎಂದರು.ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಕರಿಯಪ್ಪ ಮಾತನಾಡಿ, ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಮಹರ್ಷಿ ವಾಲ್ಮೀಕಿ ರಾಮಾಯಣ ರಚಿಸುವುದರ ಮೂಲಕ ಜಗತ್ತಿನಲ್ಲಿ ಶ್ರೇಷ್ಠ ಜ್ಞಾನಿಯಾಗಿ ಹೊರಹೊಮ್ಮಿದ್ದಾರೆ. ಕೆಲ ಮತಿಯವಾದಿಗಳು ವಾಲ್ಮೀಕಿಯನ್ನು ಬ್ರಾಹ್ಮಣ ಸಮುದಾಯದವರು ಎಂದು ಹೇಳುತ್ತಿದ್ದಾರೆ. ಇದನ್ನು ನಿರೂಪಿಸಲು ಅವರ ಬಳಿ ನಿಖರವಾದ ಯಾವುದೇ ದಾಖಲೆಗಳಿಲ್ಲ, ಇಂತಹ ವಿರೋಧಿ ಹೇಳಿಕೆಗಳನ್ನು ಹೀಗೆ ಬಿಟ್ಟರೆ ಮುಂದೆ ನಮ್ಮ ವಾಲ್ಮೀಕಿ ಅವರನ್ನು ಅಪಹರಿಸುವ ಜನ ಇದ್ದಾರೆ. ಇದರಿಂದ ನಾವು ಜಾಗೃತಗೊಳ್ಳವ ಅವಶ್ಯಕತೆ ಇದೆ ಎಂದರು.ಕಾರ್ಯಕ್ರಮದಲ್ಲಿ ನಾಯಕ ಸಮಾಜದ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷ ಗೌಡ್ರ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ, ಮುಖಂಡರಾದ ಕೆ.ಸಿ. ನಿಂಗಪ್ಪ, ಅಕ್ಷರ ದಾಸೋಹ ನಿರ್ದೇಶಕ ಶಾಂತಪ್ಪ, ಜಿ.ಎಸ್ ಪ್ರಕಾಶ್ ಗುತ್ತಿಕಟ್ಟೆ, ಜಯಪ್ರಕಾಶ್, ಲೊಕೇಶಪ್ಪ, ಮಧುರೆ ನಟರಾಜ್, ಶಿಲ್ಪಿ ಬಾಬು ಚರಣ್, ಗ್ರಾಪಂ ಸದಸ್ಯ ಮಂಜುನಾಥ್, ದಿವಾಕರ್, ನಿವೃತ್ತ ಇಂಜಿನಿಯರ್ ಚಂದ್ರಪ್ಪ, ಹೊನ್ನೇನಹಳ್ಳಿ ರಂಗಪ್ಪ, ನಾಯಕ ಸಮಾಜದ ಮಾಜಿ ಅಧ್ಯಕ್ಷರಾದ ಗುತ್ತಿಕಟ್ಟೆ ಕೆಂಚಪ್ಪ, ತುಂಬಿನಕೆರೆ ಬಸವರಾಜ್ ಯುವ ಮುಖಂಡ ಶರತ್ ದುಷ್ಯಂತ್, ಜಿ.ಕೆ. ರಂಗನಾಥ್, ಕುಮಾರ್, ನಿವೃತ್ತ ಸೈನಿಕ ದೇವೇಂದ್ರಪ್ಪ, ಯುವರಾಜ್, ಜಿ.ಕೆ. ರವಿ, ಚಿದಾನಂದ್ ಹನುಮಂತಪ್ಪ, ಗುಡಿ ಗೌಡ ತಿಪ್ಪೇಶ್ ಇದ್ದರು.