ರಾಜ್ಯದ ಆರ್ಥಿಕತೆಯನ್ನು ಗಾಲಿ ಖುರ್ಚಿಯ ಮೇಲೆ ಬಿಟ್ಟು ಹೋಗುತ್ತಿದ್ದಾರೆ

| Published : Mar 19 2025, 12:32 AM IST

ರಾಜ್ಯದ ಆರ್ಥಿಕತೆಯನ್ನು ಗಾಲಿ ಖುರ್ಚಿಯ ಮೇಲೆ ಬಿಟ್ಟು ಹೋಗುತ್ತಿದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯನವರು ಈಗ ಕಾಲಿನ ನೋವಿನಿಂದ ಗಾಲಿ ಖುರ್ಚಿ ಮೇಲೆ ಅಡ್ಡಾಡುತ್ತಿದ್ದಾರೆ. ಅವರು ಬೇಗ ಚೇತರಿಸಿಕೊಂಡು ಎಂದಿನಂತೆ ನಡೆಯುವಂತೆ ಆಗಲಿ ಎಂದು ಹಾರೈಸಿದ ಸುರೇಶ ಗೌಡರು, ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಅವುಗಳಿಂದ ಉಂಟಾದ ಆರ್ಥಿಕ ಅಶಿಸ್ತಿನಿಂದಾಗಿ ಮುಖ್ಯಮಂತ್ರಿಗಳು ಪ್ರಗತಿಪರ ರಾಜ್ಯದ ಆರ್ಥಿಕತೆಯನ್ನು ಗಾಲಿ ಖುರ್ಚಿಯ ಮೇಲೆ ಬಿಟ್ಟು ಹೋಗುತ್ತಿದ್ದಾರೆ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎತ್ತಿನಹೊಳೆ ಯೋಜನೆಯಡಿ 241 ಕಿ ಮೀ ವರೆಗೆ ನೀರು ಹರಿಸುವುದಾಗಿ ಹೇಳಿದ್ದಾರೆ. ಇದರ ಅರ್ಥ ತುಮಕೂರು ಕೊನೆಯ ಭಾಗದ ವರೆಗೆ ನೀರು ಬರುತ್ತದೆ ಮತ್ತು ಜಿಲ್ಲೆಯ ಎಲ್ಲ ಬರಪೀಡಿತ ಪ್ರದೇಶಗಳ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು ಎಂದು ಅರ್ಥ. ಇದು ಆದರೆ ನಾನೇ ತುಮಕೂರಿನಲ್ಲಿ 50 ಸಾವಿರ ಜನರನ್ನು ಸೇರಿಸಿ ಸಿದ್ದರಾಮಯ್ಯನವರಿಗೆ ಬೆಳ್ಳಿ ಗದೆ ಕೊಟ್ಟು ಸನ್ಮಾನ ಮಾಡುತ್ತೇನೆ ಎಂದು ಶಾಸಕ ಸುರೇಶಗೌಡ ಪಂಥಾಹ್ವಾನ ನೀಡಿದ್ದಾರೆ.ಕಳೆದ ಸಾರಿ ನೀರಾವರಿಗಾಗಿ 16 ಕೋಟಿ ರೂಪಾಯಿ ಮೀಸಲು ಇರಿಸಿದ್ದ ಈ ಸರ್ಕಾರ ಈ ಸಾರಿ 22 ಸಾವಿರ ಕೋಟಿ ರೂಪಾಯಿ ನಿಗದಿ ಮಾಡಿದೆ. ಅದರಲ್ಲಿ ಎತ್ತಿನಹೊಳೆ ಯೋಜನೆಯನ್ನೂ ಪೂರ್ಣಗೊಳಿಸುತ್ತೇವೆ ಎನ್ನುತ್ತಾರೆ. ಆಲಮಟ್ಟಿ ಮೂರನೇ ಹಂತದ ಯೋಜನೆಯನ್ನೂ ಪೂರ್ಣ ಮಾಡುತ್ತೇವೆ ಎನ್ನುತ್ತಾರೆ. ಇದು ಸಾದ್ಯವೇ ಎಂದು ಅವರು ಕೇಳಿದರು. ಕಾವೇರಿ ನೀರಾವರಿ ನಿಗಮದ ಸಭೆಯಾಗಿದೆ. ಮೀಟಿಂಗ್‌ ಮಿನಿಟ್‌ಗೆ ಇನ್ನೂ ರುಜು ಕೂಡ ಆಗಿಲ್ಲ. ಇನ್ನು ರುಜು ಆಗುವುದು ಯಾವಾಗ, ಹಣ ಬರುವುದು ಯಾವಾಗ ಎಂದು ಕಾಂಗ್ರೆಸ್‌ ಶಾಸಕರೇ ಚಿಂತಿಸುತ್ತಿದ್ದಾರೆ ಎಂದು ಅವರು ಸದನದ ಗಮನ ಸೆಳೆದರು.ಸಿದ್ದರಾಮಯ್ಯನವರು ಈಗ ಕಾಲಿನ ನೋವಿನಿಂದ ಗಾಲಿ ಖುರ್ಚಿ ಮೇಲೆ ಅಡ್ಡಾಡುತ್ತಿದ್ದಾರೆ. ಅವರು ಬೇಗ ಚೇತರಿಸಿಕೊಂಡು ಎಂದಿನಂತೆ ನಡೆಯುವಂತೆ ಆಗಲಿ ಎಂದು ಹಾರೈಸಿದ ಸುರೇಶ ಗೌಡರು, ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಅವುಗಳಿಂದ ಉಂಟಾದ ಆರ್ಥಿಕ ಅಶಿಸ್ತಿನಿಂದಾಗಿ ಮುಖ್ಯಮಂತ್ರಿಗಳು ಪ್ರಗತಿಪರ ರಾಜ್ಯದ ಆರ್ಥಿಕತೆಯನ್ನು ಗಾಲಿ ಖುರ್ಚಿಯ ಮೇಲೆ ಬಿಟ್ಟು ಹೋಗುತ್ತಿದ್ದಾರೆ ಎಂದು ಟೀಕಿಸಿದರು.