ವಿದ್ಯಾರ್ಥಿಗಳ ಯಶಸ್ಸಿಗೆ ಉಪನ್ಯಾಸಕರ ಶ್ರಮವೂ ಕಾರಣ: ಬಸವರಾಜಪ್ಪ

| Published : Dec 26 2024, 01:02 AM IST

ಸಾರಾಂಶ

ಲಿಂಗೈಕ್ಯ ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ನಾವು ಮಾಡುತ್ತಿರುವ ಕೆಲಸಗಳನ್ನು ನೋಡುತ್ತಿದ್ದಾರೆ. ಅವರ ಆಶೀರ್ವಾದ ಎಲ್ಲರ ಮೇಲೆ ಇರುವುದರಿಂದ ಚೆನ್ನಾಗಿದ್ದೇವೆ ಎಂದು ನಿವೃತ್ತ ಉಪನ್ಯಾಸಕ ಎಸ್‌.ಆರ್‌.ಬಸವರಾಜಪ್ಪ ಅಭಿಪ್ರಾಯಪಟ್ಟಿದ್ದಾರೆ.

- ದಾನಿಹಳ್ಳಿಯಲ್ಲಿ ಶ್ರೀ ತರಳಬಾಳು ಜಗದ್ಗುರು ಶಾಲೆ ವಾರ್ಷಿಕೋತ್ಸವ- - - ಕನ್ನಡಪ್ರಭ ವಾರ್ತೆ ನ್ಯಾಮತಿ

ಲಿಂಗೈಕ್ಯ ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ನಾವು ಮಾಡುತ್ತಿರುವ ಕೆಲಸಗಳನ್ನು ನೋಡುತ್ತಿದ್ದಾರೆ. ಅವರ ಆಶೀರ್ವಾದ ಎಲ್ಲರ ಮೇಲೆ ಇರುವುದರಿಂದ ಚೆನ್ನಾಗಿದ್ದೇವೆ ಎಂದು ನಿವೃತ್ತ ಉಪನ್ಯಾಸಕ ಎಸ್‌.ಆರ್‌.ಬಸವರಾಜಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ದಾನಿಹಳ್ಳಿ ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿವಕುಮಾರ ಸಿರಿ ಸಂಭ್ರಮ 2024-25ನೇ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ದಾನಿಹಳ್ಳಿ ತರಳಬಾಳು ವಿದ್ಯಾಸಂಸ್ಥೆ 2006ರಲ್ಲಿ ಜನ್ಮತಾಳಿ, ಬೃಹತ್‌ ಕಟ್ಟಡ ಹೊಂದಿದೆ. ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಯಿಂದ ಪ್ರಾರಂಭಗೊಂಡು, ಈಗ ಎಸ್‌ಎಸ್‌ಎಲ್‌ಸಿವರೆಗೆ ತರಗತಿ ಹೊಂದಿದೆ. ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.

ದೇಗುಲದ ಗಂಟೆ ಬಾರಿಸುವುದಕ್ಕಿಂತ ಶಾಲೆಯ ಗಂಟೆ ಬಾರಿಸಬೇಕು. ಇಲ್ಲಿ ವಿದ್ಯಾಭ್ಯಾಸ ಮಾಡಿದವರು ಉನ್ನತಮಟ್ಟಕ್ಕೆ ಹೋಗಿದ್ದಾರೆ. ಇದರಲ್ಲಿ ಉಪನ್ಯಾಸಕರ ಶ್ರಮವೂ ಕಾರಣರಾಗಿರುತ್ತದೆ. ವಿದ್ಯಾರ್ಥಿಗಳು ಆಟ ಪಾಠಗಳಲ್ಲಿ ಮುಂದಿದ್ದಾರೆ. ಉತ್ತಮ ಪ್ರಜೆಯಾಗಲು ಈ ವಿದ್ಯಾಸಂಸ್ಥೆ ಸಾಕ್ಷಿಯಾಗಿದೆ. ಶಿಕ್ಷಣಕ್ಕಾಗಿ ಭೂ ದಾನ ಮಾಡಿದ ದಾನಿಹಳ್ಳಿ ರೈತಾಪಿ ವರ್ಗದವರ ಸೇವೆ ಸ್ಮರಣೀಯ ಎಂದರು.

ಹೊನ್ನಾಳಿ ಶಿವ ಬ್ಯಾಂಕ್‌ ಅಧ್ಯಕ್ಷ ಕೆ.ಎಸ್‌.ಶಿವಕುಮಾರ್‌, ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ ಮಾತನಾಡಿದರು. ಅಧ್ಯಕ್ಷತೆಯನ್ನು ತರಳಬಾಳು ವಿದ್ಯಾಸಂಸ್ಥೆ ಸಲಹಾ ಸಮಿತಿ ಅಧ್ಯಕ್ಷ ಡಿ.ತೀರ್ಥಲಿಂಗಪ್ಪ ವಹಿಸಿದ್ದರು. ಉದ್ಘಾಟನೆಯನ್ನು ಶಿವಮೊಗ್ಗ ವಲಯ ಪ್ರಾದೇಶಿಕ ಅಧಿಕಾರಿ ವಸಂತ ಎನ್‌. ಬಡಿಗೇರ್‌ ನೆರವೇರಿಸಿದರು.

ಮುಖ್ಯೋಪಾಧ್ಯಾಯನಿ ಶ್ವೇತಾ ಶಾಲಾ ವಾರ್ಷಿಕ ವರದಿ ಓದಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿದ್ಯಾಸಂಸ್ಥೆಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಅಜ್ಜ, ಅಜ್ಜಿ, ಪೋಷಕರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಡಾ.ಶಶಿಧರ್‌ ಗೌಡ, ಪಿ.ಜಿ.ಈಶ್ವರಪ್ಪ, ಜಿ.ಮಲ್ಲೇಶಪ್ಪ, ಎಸ್‌.ಪರಮೇಶ್ವರಪ್ಪ, ಡಿ.ಜಯಪ್ಪ, ಕೆ.ಹಾಲೇಶಪ್ಪ, ಜಿ.ಉಜ್ಜಿನಪ್ಪ, ಟಿ.ನಾಗರಾಜಪ್ಪ, ಕೆ.ಸಿ.ಬಸವರಾಜಪ್ಪ, ಎಂ.ಜಯಪ್ಪ ಮತ್ತಿತರರಿದ್ದರು.

ಕೆ.ಎ.ಕೀರ್ತನ ಮತ್ತು ಮನಿಷ್‌ ಟಿ.ಆರ್‌. ನಿರೂಪಿಸಿದರು. ಡಾ.ಶಶಿಧರ್‌ಗೌಡ ಸ್ವಾಗತಿಸಿದರು. ಶಿಕ್ಷಕಿ ಸಹನಾ ವಂದಿಸಿದರು, ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಿದವು.

- - -