ಧರ್ಮಸ್ಥಳವನ್ನು ಸರ್ಕಾರಕ್ಕೆ ಒಪ್ಪಿಸಲು ಎಡಪಂಥೀಯರ ಷಡ್ಯಂತ್ರ

| Published : Aug 14 2025, 01:00 AM IST

ಧರ್ಮಸ್ಥಳವನ್ನು ಸರ್ಕಾರಕ್ಕೆ ಒಪ್ಪಿಸಲು ಎಡಪಂಥೀಯರ ಷಡ್ಯಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರುಧರ್ಮಸ್ಥಳವನ್ನು ಹೆಣ ಹೂಳುವ ಪ್ರಕರಣದಲ್ಲಿ ಸಿಲುಕಿಸಿ ಆ ಪುಣ್ಯ ಕ್ಷೇತ್ರವನ್ನು ರಾಜ್ಯ ಸರ್ಕಾರದ ವಶಕ್ಕೆ ಕೊಡಿಸಬೇಕು ಎಂದು ಎಡಪಂಥೀಯರು ಮಾಡುತ್ತಿರುವ ಷಡ್ಯಂತ್ರ ಹಾಗೂ ದೊಡ್ಡ ನಾಟಕ ಅಲ್ಲಿನ ಘಟನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ರಂಭಾಪುರಿ ಪೀಠದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಆರೋಪಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಧರ್ಮಸ್ಥಳವನ್ನು ಹೆಣ ಹೂಳುವ ಪ್ರಕರಣದಲ್ಲಿ ಸಿಲುಕಿಸಿ ಆ ಪುಣ್ಯ ಕ್ಷೇತ್ರವನ್ನು ರಾಜ್ಯ ಸರ್ಕಾರದ ವಶಕ್ಕೆ ಕೊಡಿಸಬೇಕು ಎಂದು ಎಡಪಂಥೀಯರು ಮಾಡುತ್ತಿರುವ ಷಡ್ಯಂತ್ರ ಹಾಗೂ ದೊಡ್ಡ ನಾಟಕ ಅಲ್ಲಿನ ಘಟನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.ಎಡಪಂಥೀಯರ ಇಂತಹ ಷಡ್ಯಂತ್ರಕ್ಕೆ ಪ್ರಕೃತಿಯೂ ಅವರಿಗೆ ಬೆಂಬಲ ಕೊಟ್ಟಿಲ್ಲ. ಎಲ್ಲೂ ಅಸ್ಥಿಪಂಜರ ಸಿಕ್ಕಿಲ್ಲ. ಅಲ್ಲೊಂದು ಇಲ್ಲೊಂದು ಎಲುಬಿನ ಚೂರುಗಳು ಸಿಕ್ಕಿವೆ ಎಂದು ರಂಭಾಪುರಿ ಪೀಠದಲ್ಲಿ ಬುಧವಾರ ಸುದ್ದಿಗಾರರಿಗೆ ಹೇಳಿದರು. ಅನಾಮಿಕ ತೋರಿಸುವ ಜಾಗ ಇನ್ನೂ ಅಗೆಯುತ್ತೇವೆ ಎಂದು ಎಸ್‌ಐಟಿ ಹೇಳುತ್ತಿದೆ. ಅಗೆಯಲು ಕೆಲವರು ಒತ್ತಡ ಹೇರುತ್ತಿ ದ್ದಾರೆ. ರಾಜ್ಯ ಸರ್ಕಾರ ಇದ್ಯಾವುದಕ್ಕೂ ಬಗ್ಗಬಾರದು. ಅನಾಮಿಕನನ್ನು ಬಂಧಿಸಿ ಅವನಿಗೆ ನಾಲ್ಕು ಒದೆ ಕೊಟ್ಟರೆ ಯರ‍್ಯಾರು ಇದರ ಹಿಂದಿದ್ದಾರೆ ಎಲ್ಲವೂ ಹೊರಗೆ ಬರುತ್ತದೆ ಎಂದರು. ಅನಾಮಿಕನ ಮೂಲಕ ಕೋರ್ಟ್ ಗೆ ಲಕ್ಷಾಂತರ ರು. ಹಣ ಖರ್ಚು ಮಾಡುತ್ತಿದ್ದಾರಲ್ಲ? ಅದು ಎಲ್ಲಿಂದ ಬರುತ್ತದೆ. ಈ ದೂರು ದಾರರಿಗೆ? ಎಸ್‌ಡಿಪಿಐ ಈ ಬಗ್ಗೆ ಕೂಗಾಡುತ್ತಿದೆ. ಇವರ ಬೆಂಬಲವೂ, ವಿದೇಶಿ ಹಣ ಈ ಘಟನೆ ದೂರುದಾರರಿಗೆ ಬರುತ್ತಿದೆ ಎಂಬ ಅನುಮಾನ ತೋರುತ್ತಿದೆ.ಹಾಗಾಗಿ ಕೂಡಲೇ ರಾಜ್ಯ ಸರ್ಕಾರ ಅನಾಮಿಕ ವ್ಯಕ್ತಿಗೆ ಒದ್ದು ವಿಚಾರಿಸಿದರೆ ಎಲ್ಲವೂ ಬೆಳಕಿಗೆ ಬರಲಿದೆ. ಹಿಂದೂ ಸಮಾಜ ಇಂದು ರಾಜ್ಯದಲ್ಲಿ ಜಾಗೃತವಾಗಿದ್ದು, ಯಾವುದೇ ಕಾರಣಕ್ಕೂ ವೀರೇಂದ್ರ ಹೆಗ್ಗಡೆ ಅಥವಾ ಧರ್ಮಸ್ಥಳಕ್ಕೆ ಅವಮಾನವಾಗುವ ಪ್ರಯತ್ನ ನಡೆದಲ್ಲಿ ಇಡೀ ಹಿಂದೂ ಸಮಾಜ ಸರ್ಕಾರದ ವಿರುದ್ಧವೇ ತಿರುಗಿ ಬೀಳಬೇಕಾಗಲಿದೆ.ಧರ್ಮಸ್ಥಳವನ್ನು ರಾಜ್ಯ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಲಿ, ವೀರೇಂದ್ರ ಹೆಗ್ಗಡೆಯವರಿಗೆ ತೊಂದರೆ ಕೊಡುವ ಯತ್ನವಾಗಲಿ ಮಾಡಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಒಂದು ದಿನವೂ ಉಳಿಯಲ್ಲ, ಕಾಂಗ್ರೆಸ್ ಸರ್ಕಾರವೂ ಇರುವುದಿಲ್ಲ ಎಂದು ಎಚ್ಚರಿಸಿದರು.-- (ಬಾಕ್ಸ್)--

ಸರ್ಕಾರದ ಹಣ ಖರ್ಚಾದರೂ ಪರವಾಗಿಲ್ಲ: ಸತ್ಯ ಹೊರಬರಲಿ

ಧರ್ಮಸ್ಥಳದ ಕುರಿತು ಅಪಪ್ರಚಾರದ ಘಟನೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಒಂದು ಸರಿ ಇದು ಬಗೆ ಹರಿಯುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಧರ್ಮಸ್ಥಳದಲ್ಲಿ ಯಾವುದೇ ಹೆಣ ಹೂತಿಲ್ಲ. ಇದರಲ್ಲಿ ವೀರೇಂದ್ರ ಹೆಗ್ಗಡೆಯವರ ಪಾತ್ರವಿಲ್ಲ ಎಂದು ಹೊರಬರಬೇಕಿದೆ. ಧರ್ಮಸ್ಥಳಕ್ಕೆ ಅಪಮಾನ ಆಗಕೂಡದು ಎಂಬ ಭಾವನೆ ಎಲ್ಲರಲ್ಲಿಯೂ ಇದೆ. ಈ ಘಟನೆ ತನಿಖೆಗೆ ಸರ್ಕಾರದಿಂದ ಲಕ್ಷಾಂತರ ಖರ್ಚಾದರೂ ಪರವಾಗಿಲ್ಲ. ಇನ್ನೆಂದೂ ಧರ್ಮಸ್ಥಳದ ಕುರಿತು ಅಪಪ್ರಚಾರ ಯಾರೂ ಮಾಡಕೂಡದು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಬೇಕು. ಧರ್ಮಸ್ಥಳದಲ್ಲಿ ಈಗಾಗಲೇ ಅನಾಮಿಕ ತೋರಿಸಿದಂತೆ ಅಲ್ಲಲ್ಲಿ ಗುಂಡಿ ತೋಡಿರುವಲ್ಲಿ ಎಡಪಂಥೀಯರನ್ನು ತೆಗೆದುಕೊಂಡು ಹೋಗಿ ಅಲ್ಲಿ ಮುಚ್ಚಿಹಾಕಬೇಕು. ಆಗ ಅವರಿಗೆಲ್ಲ ಬುದ್ಧಿ ಬರುತ್ತದೆ ಆಕ್ರೋಶ ವ್ಯಕ್ತಪಡಿಸಿದರು.-- (ಬಾಕ್ಸ್) --ರಾಹುಲ್‌ಗಾಂಧಿ ಮೆಚ್ಯೂರಿಟಿ ಇಲ್ಲದ ರಾಜಕಾರಣಿ ರಾಹುಲ್ ಗಾಂಧಿ ಮೆಚ್ಯೂರಿಟಿ ಇಲ್ಲದ ರಾಜಕಾರಣಿ. ರಾಷ್ಟ್ರೀಯ ನಾಯಕರಾಗಿರುವುದು ಈ ದೇಶದ ದುರಂತ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಚುನಾವಣಾ ಸಂದರ್ಭದಲ್ಲಿ ಮತದಾರ ಪಟ್ಟಿಗಳನ್ನು ಯಾರು ನೋಡಬೇಕು? ಅದನ್ನು ನೋಡಿಕೊಳ್ಳುವುದು ಆಯಾ ರಾಜಕೀಯ ಪಕ್ಷಗಳ ಕರ್ತವ್ಯ. ಯಾವ ಚುನಾವಣಾ ಮತಪಟ್ಟಿಯಲ್ಲಿ ವ್ಯತ್ಯಾಸ ಆಗಿದೆ ಎಂಬುದನ್ನು ಪಕ್ಷಗಳೇ ಆ ಸಂದರ್ಭ ದಲ್ಲಿ ನೋಡಬೇಕು. ಚುನಾವಣೆ ಮುಗಿದು ವರ್ಷಗಟ್ಟಲೇ ಆದ ಬಳಿಕ ಈಗ ಮತಗಳ್ಳತನ ಎಂದು ಹೇಳುತ್ತಿದ್ದಾರೆ. ಇದನ್ನು ಬಿಟ್ಟು ಸೋತಿರುವುದನ್ನು ಮರ್ಯಾದೆಯಿಂದ ಒಪ್ಪಿಕೊಳ್ಳಬೇಕು. ಮುಂದಿನ ಚುನಾವಣೆಗೆ ತಯಾರಾಗಬೇಕು. ಇದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನವರಿಗೆ ನಾನು ಕೊಡುತ್ತಿರುವ ಸಲಹೆ ಎಂದು ಈಶ್ವರಪ್ಪ ಹೇಳಿದರು.ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದ ಕೆಎಸ್‌ಇರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ರಂಭಾಪುರಿ ಪೀಠದ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ, ಭದ್ರಕಾಳಿ ಹಾಗೂ ಜಗದ್ಗುರು ಶ್ರೀ ರೇಣುಕಾಚಾರ್ಯ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಡಾ.ವೀರಸೋಮೇಶ್ವರ ಜಗದ್ಗುರುಗಳನ್ನು ಭೇಟಿಯಾಗಿ ಫಲ ಸಮರ್ಪಿಸಿ ಆಶೀರ್ವಾದ ಪಡೆದರು.೧೩ಬಿಹೆಚ್‌ಆರ್ ೩:

ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವದಿಸಿದರು.