ಇಸ್ಲಾಂ ದೇಶಗಳಲ್ಲೂ ಸಹ ಓಂಕಾರದ ಮೂಲಕ ಯೋಗ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ನಮ್ಮ ದೇಶದ ಕೆಲವು ಎಡಬಿಡಂಗಿಗಳು ಓಂಕಾರವನ್ನು ವಿರೋಧಿಸುವ ಮಾನಸಿಕತೆಯನ್ನು ಹೊಂದಿರುವುದು ದುರಾದೃಷ್ಟ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಇಸ್ಲಾಂ ದೇಶಗಳಲ್ಲೂ ಸಹ ಓಂಕಾರದ ಮೂಲಕ ಯೋಗ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ನಮ್ಮ ದೇಶದ ಕೆಲವು ಎಡಬಿಡಂಗಿಗಳು ಓಂಕಾರವನ್ನು ವಿರೋಧಿಸುವ ಮಾನಸಿಕತೆಯನ್ನು ಹೊಂದಿರುವುದು ದುರಾದೃಷ್ಟ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದರು.

ನಗರದ ಎಸ್ ಐ ಟಿ ಯ ಬಿರ್ಲಾ ಸಭಾಂಗಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕ್ಕೆ ಶಾಂತಿಯನ್ನು ಕೊಟ್ಟಿರುವ ಹಿಂದೂ ಧರ್ಮವನ್ನು ನಾಶ ಪಡಿಸಲು ಸಾಧ್ಯವಿಲ್ಲ, ಎಲ್ಲಾ ಧರ್ಮಗಳಿಗೂ ಆಶ್ರಯವನ್ನು ನೀಡುವ ಮೂಲಕ ಹಾಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸಿ ನಮ್ಮ ಅಸ್ತಿತ್ವವನ್ನೂ ಉಳಿಸಿಕೊಳ್ಳುವ ಕಾರ್ಯ ಹಿಂದೂ ಸಮಾಜೋತ್ಸವ ಮೂಲಕ ಆಗಬೇಕಾಗಿದೆ ಎಂದರು. ಈ ವೇಳೆ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಎಚ್ ಜಿ ಚಂದ್ರಶೇಖರ್‌, ಇಂದಿರಮ್ಮ ಸುಂದರ ರಾವ್ ಇತರರಿದ್ದರು.