ಸಾರಾಂಶ
ಯುವಕರು ನಿರಂತರ ಮಾದಕವಸ್ತು ಸೇವನೆಯಿಂದ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಉಜ್ವಲ ಬದುಕನ್ನು ಕತ್ತಲು ಮಾಡಿಕೊಳ್ಳುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಮದ್ಯ ಮತ್ತು ಮಾದಕ ವಸ್ತುಗಳ ವ್ಯಾಸನಗಳಿಂದ ಒಬ್ಬ ವ್ಯಕ್ತಿ ಕೇವಲ ತನ್ನ ವೈಯಕ್ತಿಕ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನಷ್ಟೇ ಕೆಡಿಸಿಕೊಳ್ಳುವುದಿಲ್ಲ, ಕುಟುಂಬ, ಸಮಾಜ, ಮತ್ತು ದೇಶದ ಸ್ವಾಸ್ಥ್ಯದ ಮೇಲು ಕೂಡ ದುಷ್ಪರಿಣಾಮ ಬೀರುವಂತೆ ಮಾಡುತ್ತಾನೆ ಎಂದು ಬೈಲಕುಪ್ಪೆ ಪೊಲೀಸ್ ಠಾಣೆಯ ಎಎಸ್.ಐ ಸೋಮಶೇಖರ್ ಹೇಳಿದರು.ತಾಲೂಕಿನ ಕೊಪ್ಪ ಗ್ರಾಮದ ಭಾರತ್ ಮಾತಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ಮಾದಕ ವಸ್ತು ತಡೆಗಟ್ಟುವಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯಪೇದೆ ಸಿದ್ದೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸದೆ, ಮೊಬೈಲ್ ನಲ್ಲಿ ಮುಳುಗಿರುತ್ತಾರೆ, ಮೊದಲು ಆಚಟವನ್ನು ಬಿಡಬೇಕು, ಮದ್ಯವ್ಯಸನದಂತಹ ದುಶ್ಚಟಗಳಿಂದ ಯುವ ಜನತೆಯನ್ನು ದೂರವಿಡಲು ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಶಾಲಾ-ಕಾಲೇಜು ಶಿಕ್ಷಕರು ಮಕ್ಕಳ ಚಲನವಲನಗಳ ಬಗ್ಗೆ ನಿಗಾ ಇಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯುವಕರು ನಿರಂತರ ಮಾದಕವಸ್ತು ಸೇವನೆಯಿಂದ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಉಜ್ವಲ ಬದುಕನ್ನು ಕತ್ತಲು ಮಾಡಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.ಭಾರತ್ ಮಾತಾ ಶಾಲೆಯ ಪ್ರಾಂಶುಪಾಲರಾದ ಸಿಬಿಯನ್ ಪೋಲ್, ಶಿಕ್ಷಕರಾದ ಸೋಮಶೇಖರ್, ಮಹಮ್ಮದ್ ರಫಿ, ಸ್ವರ್ಣ ಲತಾ, ವಿದ್ಯಾರ್ಥಿಗಳು ಇದ್ದರು.