ನಾಳೆ ಯುಗಪುರುಷ ಲೆನಿನ್ ಪುಸ್ತಕ ಬಿಡುಗಡೆ: ಚಂದ್ರು

| Published : Apr 21 2025, 12:48 AM IST

ನಾಳೆ ಯುಗಪುರುಷ ಲೆನಿನ್ ಪುಸ್ತಕ ಬಿಡುಗಡೆ: ಚಂದ್ರು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಮಂಡಳಿಯಿಂದ ಪಕ್ಷದ ಶತಮಾನೋತ್ಸವ ಅಂಗವಾಗಿ ಏ.22ರಂದು ಯುಗಪುರುಷ ಲೆನಿನ್ ಪುಸ್ತಕ ಬಿಡುಗಡೆ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ನಗರದ ರೋಟರಿ ಬಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದ್ದಾರೆ.

- ಸಿಪಿಐ ಶತಮಾನೋತ್ಸವ: ರಾಜ್ಯಮಟ್ಟದ ವಿಚಾರ ಸಂಕಿರಣ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಮಂಡಳಿಯಿಂದ ಪಕ್ಷದ ಶತಮಾನೋತ್ಸವ ಅಂಗವಾಗಿ ಏ.22ರಂದು ಯುಗಪುರುಷ ಲೆನಿನ್ ಪುಸ್ತಕ ಬಿಡುಗಡೆ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ನಗರದ ರೋಟರಿ ಬಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಅಧ್ಯಕ್ಷತೆ ಸಮಾರಂಭದಲ್ಲಿ ನವಕರ್ನಾಟಕ ಪ್ರಕಾಶನದ ಡಾ. ಜಿ.ರಾಮಕೃಷ್ಣ ವಿರಚಿತ ಯುಗಪುರುಷ ಲೆನಿನ್‌ ಪುಸ್ತಕವನ್ನು ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಬಿಡುಗಡೆ ಮಾಡುವರು ಎಂದರು.

ಸಮಾಜವಾದವೇ ಪರ್ಯಾಯ ಮತ್ತು ಪರಿಹಾರ ವಿಷಯವಾಗಿ ನಡೆಯುವ ವಿಚಾರ ಸಂಕಿರಣದಲ್ಲಿ ಸಿಪಿಐ ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಉಪನ್ಯಾಸ ನೀಡುವರು. ಲೇಖಕ ಡಾ. ಜಿ.ರಾಮಕೃಷ್ಣ, ನವಕರ್ನಾಟಕ ಪ್ರಕಾಶನದ ನಿರ್ದೇಶಕ ಯು.ಪ್ರೇಮಚಂದ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಆವರಗೆರೆ ಚಂದ್ರು, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ಎಚ್.ಜಿ.ಉಮೇಶ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

ಕ್ರಾಂತಿಯ ಒಬ್ಬ ಮಹಾನ್ ನಾಯಕರಾದ ಲೆನಿನ್‌ ಭಾರತದ ಕ್ರಾಂತಿಕಾರಿಗಳಿಗೆ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಪ್ರೇರಣೆ ನೀಡಿದವರು. 1917ರಲ್ಲಿ ವಿಶ್ವದಲ್ಲೇ ಪ್ರಥಮ ಸಮಾಜವಾದಿ ರಾಷ್ಟ್ರದ ಉದಯಕ್ಕೆ ಲೆನಿನ್‌ ಭದ್ರ ಬುನಾದಿ ಹಾಕಿದವರು. ಅಂತಹ ಲೆನಿನ್‌ ಅವರ ಕುರಿತಂತೆ ಪುಸ್ತಕ ಹೊರತರಲಾಗುತ್ತಿದೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಸಮಾಜ ಚಿಂತಕರು ಪಾಲ್ಗೊಳ್ಳುವಂತೆ ಆವರಗೆರೆ ಚಂದ್ರು ಮನವಿ ಮಾಡಿದರು.

ಪಕ್ಷದ ಮುಖಂಡರಾದ ಆವರಗೆರೆ ಎಚ್.ಜಿ.ಉಮೇಶ, ಜಿ.ಯಲ್ಲಪ್ಪ, ವಿ.ಲಕ್ಷ್ಮಣ, ಐರಣಿ ಚಂದ್ರು, ರುದ್ರೇಶ ಲೋಕಿಕೆರೆ ಇತರರು ಇದ್ದರು.

- - -

-19ಕೆಡಿವಿಜಿ3: