ಸಾರಾಂಶ
ಚಿರತೆ ದಾಳಿ ಮಾಡಿ ಮೂರು ಒಂದು ಹಸು, ಎರಡು ಎಮ್ಮೆಗಳನ್ನು ತಿಂದು ಹೋದ ಘಟನೆ ತಾಲೂಕಿನ ಕಡಣಿ ಗ್ರಾಮದ ಭೀಮಾ ನದಿಯ ದಂಡೆಯ ಜಮೀನಿನಲ್ಲಿ ಈಚೆಗೆ ನಡೆದಿದೆ.ಕಡಣಿ ಭೀಮಾನದಿಯ ದಡದಲ್ಲಿನ ಜಮೀನುಗಳಲ್ಲಿ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಬಂದಿದ್ದ ಸದಾಶಿವ ಕತ್ತಿ ಅವರಿಗೆ ಸೇರಿದ ಆಕಳು ಕರು, ಚನ್ನಪ್ಪ ದೊಡ್ಡಿ ಅವರಿಗೆ ಸೇರಿದ ಎಮ್ಮೆ, ಮಲ್ಲು ದೊಡ್ಡಿ ಅವರ ಎಮ್ಮೆ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ರೈತರ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಆಲಮೇಲ
ಚಿರತೆ ದಾಳಿ ಮಾಡಿ ಮೂರು ಒಂದು ಹಸು, ಎರಡು ಎಮ್ಮೆಗಳನ್ನು ತಿಂದು ಹೋದ ಘಟನೆ ತಾಲೂಕಿನ ಕಡಣಿ ಗ್ರಾಮದ ಭೀಮಾ ನದಿಯ ದಂಡೆಯ ಜಮೀನಿನಲ್ಲಿ ಈಚೆಗೆ ನಡೆದಿದೆ.ಕಡಣಿ ಭೀಮಾನದಿಯ ದಡದಲ್ಲಿನ ಜಮೀನುಗಳಲ್ಲಿ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಬಂದಿದ್ದ ಸದಾಶಿವ ಕತ್ತಿ ಅವರಿಗೆ ಸೇರಿದ ಆಕಳು ಕರು, ಚನ್ನಪ್ಪ ದೊಡ್ಡಿ ಅವರಿಗೆ ಸೇರಿದ ಎಮ್ಮೆ, ಮಲ್ಲು ದೊಡ್ಡಿ ಅವರ ಎಮ್ಮೆ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ರೈತರ ತಿಳಿಸಿದ್ದಾರೆ.ಈ ಭಾಗದಲ್ಲಿ ರೈತರ ರಾತ್ರಿ ಹೊತ್ತಿನಲ್ಲಿ ತಮ್ಮ ಜಮೀನಿನ ಶೆಡ್‌ಗಳಲ್ಲಿ ದನ ಕರುಗಳನ್ನು ಕಟ್ಟಿರುತ್ತಾರೆ. ರೈತರು ಕೂಡಾ ರಾತ್ರಿ ಹೊತ್ತು ಹೊಲಕ್ಕೆ ನೀರು ಹಾಯಿಸಲು ಹೋಗುತ್ತಾರೆ. ಈ ಘಟನೆ ರೈತರಲ್ಲಿ ಆತಂಕ ಮೂಡಿಸಿದೆ. ತುರ್ತು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತಾಲೂಕು ಆಡಳಿತ ಮುಂಜಾಗ್ರತ ಕ್ರಮ ತೆಗೆದು ಕಾರ್ಯಾಚರಣೆ ಮಾಡಿದ್ದಾರೆ.
ತಾಲೂಕು ಅರಣ್ಯ ಅಧಿಕಾರಿ ಎಂ. ಎನ್..ಮುಲ್ಲಾ ಹಾಗೂ ಪಶುವೈದ್ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪಂಚನಾಮೆ ಮಾಡಿದ್ದು ಪರಿಹಾರ ಒದಗಿಸುವುದಾಗಿ ತಿಳಿಸಿದ್ದಾರೆ. ಹೆಜ್ಜೆ ಗುರುತುಗಳನ್ನು ಕಲೆಹಾಕಲಾಗಿದ್ದು ಕತ್ತೆ ಕಿರುಬು ಎಂಬ ಪ್ರಾಣಿ ಇರಬೇಕು. ಚಿರತೆ ಆಗಿರಲಿಕ್ಕಿಲ್ಲ ಎಂದರು.