ವೃದ್ಧನ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ಪಾರು

| Published : Dec 12 2024, 12:32 AM IST

ಸಾರಾಂಶ

ಮಾನಗಲ್ ಬೆಟ್ಟದ ಹತ್ತಿರ ಕುರಿ, ದನ ಮೇಯಿಸಲು ಹೋಗಿದ್ದಾಗ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಚಿರತೆ ಕುರಿ ಮೇಲೆ ದಾಳಿ ಮಾಡಿದೆ.

ಮಾಗಡಿ: ತಾಲೂಕಿನ ಮಾನಗಲ್ ಗ್ರಾಮದಲ್ಲಿ ವೃದ್ಧರೊಬ್ಬರು ಕುರಿ ಮೇಯಿಸುವ ವೇಳೆ ಅವರ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಮಾನಗಲ್ ಗ್ರಾಮದ ಮುನಿಯಪ್ಪ (62) ಚಿರತೆ ದಾಳಿಯಿಂದ ತುಟಿ, ಹಣೆ, ಕೈಗೆ ಗಾಯವಾಗಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದು ಚಿರತೆ ದಾಳಿಯಿಂದ ಮೇಕೆ ಸಾವನಪ್ಪಿದೆ.

ಬುಧವಾರ ಎಂದಿನಂತೆ ಮಾನಗಲ್ ಬೆಟ್ಟದ ಹತ್ತಿರ ಕುರಿ, ದನ ಮೇಯಿಸಲು ಹೋಗಿದ್ದಾಗ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಚಿರತೆ ಕುರಿ ಮೇಲೆ ದಾಳಿ ಮಾಡಿದೆ. ಕುರಿಯನ್ನು ಉಳಿಸಲು ಚಿರತೆ ಹತ್ತಿರ ಹೋದಾಗ ಚಿರತೆ ಮುನಿಯಪ್ಪನ ಮೇಲು ದಾಳಿ ಮಾಡಿದ್ದು ಮುನಿಯಪ್ಪ ಕೂಗಾಡಿದ ಹಿನ್ನೆಲೆಯಲ್ಲಿ ಚಿರತೆ ಕುರಿಯನ್ನು ಹಿಡಿದುಕೊಂಡು ಕಾಡಿಗೆ ಓಡಿ ಹೋಗಿದೆ. ಒಂದು ವೇಳೆ ಚಿರತೆ ಮತ್ತಷ್ಟು ದಾಳಿ ಮಾಡಿದರೆ ಮುನಿಯಪ್ಪನ ಪ್ರಾಣಾಕ್ಕೆ ತೊಂದರೆ ಆಗುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.ಗಾಯಗೊಂಡ ಮುನಿಯಪ್ಪ ಅವರನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಾಗಡಿ ವಲಯ ಅರಣ್ಯಾಧಿಕಾರಿ ಚೈತ್ರ ಭೇಟಿ ನೀಡಿ ವ್ಯಕ್ತಿಯ ಆರೋಗ್ಯ ವಿಚಾರಿಸಿದ್ದು ಚಿರತೆ ಹಿಡಿಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.