2ಕ್ಕೆ. (ಟಿಂಟ್‌ ಬಾಕ್ಸ್‌) ಚನ್ನಗಿರಿ: ಗಂಡುಗನಹಂಕಲು ರೈತನ ಎತ್ತುಗಳ ಮೇಲೆ ಚಿರತೆ ದಾಳಿ- ಪಾರು

| Published : Aug 18 2025, 12:00 AM IST

2ಕ್ಕೆ. (ಟಿಂಟ್‌ ಬಾಕ್ಸ್‌) ಚನ್ನಗಿರಿ: ಗಂಡುಗನಹಂಕಲು ರೈತನ ಎತ್ತುಗಳ ಮೇಲೆ ಚಿರತೆ ದಾಳಿ- ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಾವಿನಹೊಳೆ, ಗಾಂಧಿನಗರ, ಗಂಡುಗನಹಂಕಲು, ಹಲುಕನಹಾಳು, ರೊಪ್ಪದಟ್ಟಿ ಈ ಪ್ರದೇಶಗಳಲ್ಲಿ ಚಿರತೆ ಸಂಚಾರ ಕಂಡುಬಂದಿದ್ದು, ಗ್ರಾಮಗಳ ಜನರು ಭಯಗೊಂಡಿದ್ದಾರೆ.

- ಗಾಂಧಿನಗರ ಬಳಿ ಚಿರತೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

- - -

ಚನ್ನಗಿರಿ: ಚನ್ನಗಿರಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಾವಿನಹೊಳೆ, ಗಾಂಧಿನಗರ, ಗಂಡುಗನಹಂಕಲು, ಹಲುಕನಹಾಳು, ರೊಪ್ಪದಟ್ಟಿ ಈ ಪ್ರದೇಶಗಳಲ್ಲಿ ಚಿರತೆ ಸಂಚಾರ ಕಂಡುಬಂದಿದ್ದು, ಗ್ರಾಮಗಳ ಜನರು ಭಯಗೊಂಡಿದ್ದಾರೆ.

ಗಂಡುಗನ ಹಂಕಲು ಗ್ರಾಮದ ಹಾಲೇಶಪ್ಪ ಎಂಬವರು ಎತ್ತುಗಳನ್ನು ಹಿಡಿದುಕೊಂಡು ಕಾಡಿನಲ್ಲಿ ಮೈಯಿಸಲು ಹೋಗಿದ್ದರು. ಈ ವೇಳೆ ಎತ್ತುಗಳ ಮೇಲೆ ಚಿರತೆ ದಾಳಿ ಮಾಡಲು ಮುಂದಾಗಿತ್ತು. ಆಗ ರೈತ ಹಾಲೇಶಪ್ಪ ಜೋರಾಗಿ ಕಿರುಚಾಡಿ ಚಿರತೆಯನ್ನು ಓಡಿಸಿದ್ದಾಗಿ ಹಾಲೇಶಪ್ಪ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಈ ಭಾಗದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕುರಿ-ಮೇಕೆಗಳ ಸಾಕುತ್ತಿದ್ದಾರೆ. ಕುರಿ-ಮೇಕೆಗಳ ಮೇಲೆ ಚಿರತೆ ಆಗಾಗ್ಗೆ ದಾಳಿ ಮಾಡುತ್ತಿರುತ್ತದೆ. ಈ ಕುರಿತು ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ವೇಳೆ ಅವರು ಬಂದು ಪಟಾಕಿಗಳನ್ನು ಸಿಡಿಸಿ, ಹೋಗುತ್ತಾರೆ. ಆದರೆ ಚಿರತೆಯನ್ನು ಮಾತ್ರ ಸೆರೆಹಿಡಿಯುತ್ತಿಲ್ಲ ಎಂದು ಗಂಡುಗನಹಂಕಲು ಗ್ರಾಮದ ವಾಸಿ ನವೀನ್ ಆರೋಪಿಸಿದರು.

ಈ ಬಗ್ಗೆ ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್.ಶ್ವೇತಾ ಪ್ರತಿಕ್ರಿಯಿಸಿದ್ದು, ಶನಿವಾರ ರಾತ್ರಿ ಗಾಂಧಿನಗರ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಬಗ್ಗೆ ಗಮನಕ್ಕೆ ಬಂದ ತಕ್ಷಣ ಇಲಾಖೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿ, ಚಿರತೆಯನ್ನು ಕಾಡಿಗೆ ಓಡಿಸಲು ಪಟಾಕಿಗಳನ್ನು ಸಿಡಿಸಲಾಗಿದೆ. ರಾತ್ರಿ ಇಡೀ ಇಲಾಖೆ ಸಿಬ್ಬಂದಿ ಕಾಡಿನಲ್ಲಿಯೇ ಗಸ್ತು ತಿರುಗುತ್ತಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಹಿಡಿಯಲು ಗಂಡುಗನಹಂಕಲು ಹತ್ತಿರ ಬೋನ್ ಸಹ ಇಡಲಾಗಿದೆ ಎಂದರು.

ಚಿರತೆ ಇರುವ ಹಿನ್ನೆಲೆ ಈ ಭಾಗದ ಜನರು ಹೊಲ, ಗದ್ದೆ, ತೋಟಗಳಿಗೆ ಒಬ್ಬರೇ ಹೋಗುವುದು, ರಾತ್ರಿಯ ಸಮಯದಲ್ಲಿ ಓಡಾಡುವುದು ಸಲ್ಲದು ಎಂದು ಈಗಾಗಲೇ ಧ್ವನಿವರ್ಧಕಗಳ ಮೂಲಕ ಪ್ರಚುರಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

- - -

-17ಕೆಸಿಎನ್‌ಜಿ2: ಗಂಡುಗನಹಂಕಲು ಬಳಿ ಚಿರತೆ ಸೆರೆಹಿಡಿಯಲು ಬೋನ್ ಅಳವಡಿಸಲಾಗಿದೆ.

-17ಕೆಸಿಎನ್‌ಜಿ3: ಅರಣ್ಯದಲ್ಲಿ ರಾತ್ರಿ ಗಸ್ತು ತಿರುಗುತ್ತಿರುವ ಇಲಾಖೆಯ ಸಿಬ್ಬಂದಿ.