ಸಾರಾಂಶ
ತಾಲೂಕಿನ ಹಿಂಡಿಸಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ. ಕೋಡಿಹಳ್ಳಿ ಸುತ್ತಮುತ್ತ ಒಂದು ವಾರಗಳಿಂದ ರೈತರಿಗೆ ಹಾಗೂ ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದ ಚಿರತೆಯನ್ನು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ಸೆರೆ ಹಿಡಿಯಲಾಗಿದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಹಿಂಡಿಸಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ. ಕೋಡಿಹಳ್ಳಿ ಸುತ್ತಮುತ್ತ ಒಂದು ವಾರಗಳಿಂದ ರೈತರಿಗೆ ಹಾಗೂ ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದ ಚಿರತೆಯನ್ನು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ಸೆರೆ ಹಿಡಿಯಲಾಗಿದೆ.ಬುಧವಾರ ಮಧ್ಯಾಹ್ನ ನೇರಳೆಕೆರೆಯಲ್ಲಿ ಒಬ್ಬ ವ್ಯಕ್ತಿಯ ಮೇಲೆ ಹಾಗೂ ವಿ ಕೋಡಿಹಳ್ಳಿ ಹತ್ತಿರ ಇಬ್ಬರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿತ್ತು. ಈ ವರದಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾದ್ದರಿಂದ ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿಗಳು ಚಿರತೆ ಹಿಡಿಯಲು ತಂತ್ರ ರೂಪಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಓಡಾಡುವ ಸ್ಥಳಕ್ಕೆ ಬೋನ್ ಇಡಲಾಗಿತ್ತು. ಚಿರತೆ ಬೋನಿಗೆ ಬೀಳದೆ ತಪ್ಪಿಸಿಕೊಂಡು ಓಡಾಡುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿ ಬಲೆಯ ಮೂಲಕ ಚಿರತೆಯನ್ನು ಸೆರೆಹಿಡಿದರು. ನಂತರ ಚಿರತೆಗೆ ನೀರು ಮತ್ತು ಆಹಾರ ನೀಡಿ, ವಲಯ ಅರಣ್ಯ ಅಧಿಕಾರಿಗಳು, ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಎಸಿಎಫ್ ಪವಿತ್ರ, ಆರ್ ಎಫ್ ಒ ಸತೀಶ್ ಚಂದ್ರ ಸಿಬ್ಬಂದಿಗಳಾದ ನರಸಿಂಹಮೂರ್ತಿ, ಜಗದೀಶ್, ಸತೀಶ್, ನರಸಿಂಹರಾಜು, ಶಂಕರ್, ಹರೀಶ್, ನಿಜಲಿಂಗಯ್ಯ ಹಾಗೂ ವನಪಾಲಕರು, ಸಾರ್ವಜನಿಕರು ಇತರರು ಇದ್ದರು.