ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಕಳೆದ ೨ ದಿನಗಳ ಹಿಂದೆ ಚಿರತೆಯೊಂದು ತೋಟಕ್ಕೆ ನುಗ್ಗಿ ನಾಯಿಯನ್ನು ಕೊಂದು ತಿಂದು ಹೋಗಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಭದ್ರಾವತಿ

ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಕಳೆದ ೨ ದಿನಗಳ ಹಿಂದೆ ಚಿರತೆಯೊಂದು ತೋಟಕ್ಕೆ ನುಗ್ಗಿ ನಾಯಿಯನ್ನು ಕೊಂದು ತಿಂದು ಹೋಗಿರುವ ಘಟನೆ ನಡೆದಿದೆ.

ಪತ್ರಕರ್ತ ಸುರೇಶ್‌ರವರ ತೋಟದಲ್ಲಿ ರಾತ್ರಿ ವೇಳೆ ಚಿರತೆ ನುಗ್ಗಿದ್ದು, ತೋಟದಲ್ಲಿದ್ದ ನಾಯಿಯನ್ನು ಕೊಂದು ತಿಂದಿದೆ. ಕೆಲ ಸಮಯ ಅಲ್ಲಿಯೇ ಇದ್ದು ಪುನಃ ಬಂದ ಮಾರ್ಗದಲ್ಲಿಯೇ ಹಿಂದಿರುಗಿದೆ. ಈ ದೃಶ್ಯ ತೋಟದಲ್ಲಿ ಅಳವಡಿಸಲಾಗಿರುವ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಸುರೇಶ್‌ರವರು ತೋಟದಲ್ಲಿ ನಾಯಿಗಳು ತಿರುಗಾಡಲು ಒಂದೇ ಒಂದು ಜಾಗ ಬಿಟ್ಟಿದ್ದು, ಆ ಜಾಗದ ಮೂಲಕವೇ ಚಿರತೆ ಬಂದಿದೆ. ನಾವು ಸಾಕಿರುವ ನಾಯಿಯನ್ನು ತಿಂದು ಪುನಃ ಹಿಂದಿರುಗಿದೆ. ಈ ಭಾಗದಲ್ಲಿ ರೈತರು ಹಗಲು ಮತ್ತು ಇರುಳಿನ ವೇಳೆಯಲ್ಲಿ ತಮ್ಮ ತೋಟಗಳಿಗೆ ತೆರಳುತ್ತಾರೆ. ಅಲ್ಲದೆ ರೈತರು ಜಾನುವಾರುಗಳನ್ನು ಮೇಯಲು ಬಿಡುತ್ತಾರೆ. ಈ ಭಾಗದಲ್ಲಿ ಎಚ್ಚರವಹಿಸುವುದು ಅಗತ್ಯವಾಗಿದೆ. ಈ ಕುರಿತು ಅರಣ್ಯ ಇಲಾಖೆ ಗಮನ ಹರಿಸಬೇಕಿದೆ. ಅರಣ್ಯ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯಲು ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.