ಮುಂಡರಗಿ ತಾಲೂಕು ವ್ಯಾಪ್ತಿಯ ಕಪ್ಪತ್ತಗುಡ್ಡದಲ್ಲಿ ಚಿರತೆ, ವಿಡಿಯೋ ವೈರಲ್

| Published : Dec 09 2023, 01:15 AM IST

ಮುಂಡರಗಿ ತಾಲೂಕು ವ್ಯಾಪ್ತಿಯ ಕಪ್ಪತ್ತಗುಡ್ಡದಲ್ಲಿ ಚಿರತೆ, ವಿಡಿಯೋ ವೈರಲ್
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಪ್ಪತ್ತಗುಡ್ಡದ ಹಮ್ಮಿಗಿ ಮತ್ತು ಸಿಂಗಟಾಲೂರ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಪ್ಪತ್ತಗುಡ್ಡ ಭಾಗದಲ್ಲಿ ಗಾಳಿ ವಿದ್ಯುತ್ ಯಂತ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಚಿತ್ರೀಕರಿಸಿದ ವಿಡಿಯೋ ಎಂದು ತಿಳಿದುಬಂದಿದೆ.

ಡಂಬಳ: ಮುಂಡರಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಪ್ಪತ್ತಗುಡ್ಡದ ವ್ಯಾಪ್ತಿಯ ಹಮ್ಮಿಗಿ ಮತ್ತು ಸಿಂಗಟಾಲೂರ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಪ್ಪತ್ತಗುಡ್ಡ ಭಾಗದಲ್ಲಿ ಗಾಳಿ ವಿದ್ಯುತ್ ಯಂತ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಚಿತ್ರೀಕರಿಸಿದ ವಿಡಿಯೋ ಎಂದು ತಿಳಿದುಬಂದಿದೆ. ಕಪ್ಪತ್ತಗುಡ್ಡದ ಅರಣ್ಯದಲ್ಲಿ ಚಿರತೆಗಳು ವಾಸವಾಗಿವೆ. ಆದರೆ ಗಾಳಿ ವಿದ್ಯುತ್ ಯಂತ್ರಕ್ಕಾಗಿ ಕಪ್ಪತ್ತಗುಡ್ಡದಲ್ಲಿ ನಿರ್ಮಿಸಿರುವ ರಸ್ತೆಗಳಲ್ಲಿ ಚಿರತೆ ಕಾಣಿಸಿಕೊಂಡಿದೆ. ಎಚ್ಚರಿಕೆ ವಹಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಲಾಗಿದೆ. ಕಪ್ಪತ್ತಗುಡ್ಡ ಕಾಡಿನ ಭಾಗದಲ್ಲಿ ಅಡ್ಡಾಡುವುದು ಸಹಜ ಆದರೆ ಇತ್ತೀಚೆಗೆ ಬಹಳಷ್ಟು ಸಲ ವಿದ್ಯುತ್ ಯಂತ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಚಿತ್ರೀಕರಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವುದರಿಂದ ಅವುಗಳ ಇರುವ ವಾಸಸ್ಥಳ ಬಗ್ಗೆ ತಿಳಿದು ಸಂತತಿಗೆ ಮತ್ತು ಪ್ರಾಣಕ್ಕೆ ಧಕ್ಕೆ ಬರಬಹುದು ಆ ಹಿನ್ನಲೆ ಕಪ್ಪತ್ತಗುಡ್ಡದಲ್ಲಿ ಕಂಡು ಬರುವ ಪ್ರಾಣಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕದಂತೆ ಫ್ಯಾನ್ ನಿರ್ವಹಣೆ ಮಾಡುವ ಸಿಬ್ಬಂದಿಗೆ ಸೂಚಿಸಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ. ಚಿರತೆ ವಿಷಯವಾಗಿ ಕಪ್ಪತ್ತಗುಡ್ಡದ ಹಿಲ್ಸ್ ವಲಯ ಅರಣ್ಯ ಅಧಿಕಾರಿ ವೀರೇಂದ್ರ ಮರಿಬಸನ್ನವರ ಅವರನ್ನು ಮಾತನಾಡಿಸಿದಾಗ ಕಪ್ಪತ್ತಗುಡ್ಡಭಾಗದಲ್ಲಿ ಅನೇಕ ವರ್ಷಗಳಿಂದ 4-5 ಚಿರತೆಗಳು ವಾಸಿಸುತ್ತಿವೆ. ಇಲ್ಲಿಯವರೆಗೆ ಸಿಸಿ ಕ್ಯಾಮೆರಾದಲ್ಲಿ 3 ಚಿರತೆಗಳು ಕಾಣಿಸಿಕೊಂಡಿದ್ದು ಅದನ್ನು ಹೊರತು ಪಡಿಸಿ ಈಗ ಕಾಣಿಸಿಕೊಂಡಿರುವುದು ಹಳೆಯ ಚಿರತೆಯಾಗಿದ್ದು, ಅವು ಯಾರಿಗೂ ತೊಂದರೆ ಉಂಟುಮಾಡುವುದಿಲ್ಲ. ಭಯ ಪಡುವ ಅಗತ್ಯ ಇಲ್ಲ. ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಚಿರತೆಗಳು ವಾಸಿಸಲು ಧಕ್ಕೆ ತಂದೊಡ್ಡಿದಂತಾಗುತ್ತದೆ. ಆ ಹಿನ್ನೆಲೆಯಲ್ಲಿ ವಿಡಿಯೋ ಮಾಡಿ ಹಾಕುತ್ತಿರುವ ಫ್ಯಾನ್‌ ಕಂಪನಿಗಳ ಸಿಬ್ಬಂದಿಗೆ ಈಗಾಗಲೆ ವಿಡಿಯೋ ಮಾಡದಂತೆ ಹಲವು ಬಾರಿ ತಿಳಿಸಲಾಗಿದೆ ಅಲ್ಲದೆ ನಮ್ಮ ಸಿಬ್ಬಂದಿ ದಿನಾಲು ಆಯಾ ಚೆಕ್ಕಪೋಸ್ಟಗಳಲ್ಲಿ ತಿಳಿಸಿದರೂ ಅವರು ವಿಡಿಯೋ ಮಾಡಿ ಹಾಕಿದ್ದು ಅದರ ಕುರಿತು ಗಾಳಿವಿದ್ಯುತ್ ಕಂಪನಿಗೆ ಮತ್ತು ಸೂಕ್ತವಾಗಿ ಪರಿಶೀಲನೆ ನಡೆಸಲಾಗುವುದು ಎಂದರು.