ನಗರದ ಕಿರ್ಲೋಸ್ಕರ್ ಕಾಲೋನಿಯಲ್ಲಿ ಚಿರತೆ ಇರುವ ಬಗ್ಗೆ ವಿಡಿಯೋ ವೈರಲ್ ಹಿನ್ನೆಲೆ ಶಾಸಕ ಬಿ.ಪಿ. ಹರೀಶ್ ಮಂಗಳವಾರ ಸಂಬಂಧಿಸಿದ ಪ್ರದೇಶಕ್ಕೆ ಅರಣ್ಯ ಇಲಾಖೆ ಡಿಆರ್ ಎಫ್ ಒ ಖಾಲಿದ್ ಹಾಗೂ ನಗರಸಭೆ ಆಯುಕ್ತ ವಿನಯ್ ಕುಮಾರ್ ಜತೆ ಭೇಟಿ ನೀಡಿ, ಚರ್ಚಿಸಿದರು. ಅಲ್ಲದೆ, ವೈರಲ್‌ ಆಗಿದ್ದ ವಿಡಿಯೋ ತುಣುಕುಗಳನ್ನು ವೀಕ್ಷಿಸಿ, ಪರಿಸ್ಥಿತಿ ಕುರಿತು ವಿವರ ಮಾಹಿತಿ ಪಡೆದಿದ್ದಾರೆ.

- ಅರಣ್ಯ ಅಧಿಕಾರಿಗಳು, ನಗರಸಭೆ ಪೌರಾಯುಕ್ತರ ಜತೆ ಸ್ಥಳ ಪರಿಶೀಲನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಕಿರ್ಲೋಸ್ಕರ್ ಕಾಲೋನಿಯಲ್ಲಿ ಚಿರತೆ ಇರುವ ಬಗ್ಗೆ ವಿಡಿಯೋ ವೈರಲ್ ಹಿನ್ನೆಲೆ ಶಾಸಕ ಬಿ.ಪಿ. ಹರೀಶ್ ಮಂಗಳವಾರ ಸಂಬಂಧಿಸಿದ ಪ್ರದೇಶಕ್ಕೆ ಅರಣ್ಯ ಇಲಾಖೆ ಡಿಆರ್ ಎಫ್ ಒ ಖಾಲಿದ್ ಹಾಗೂ ನಗರಸಭೆ ಆಯುಕ್ತ ವಿನಯ್ ಕುಮಾರ್ ಜತೆ ಭೇಟಿ ನೀಡಿ, ಚರ್ಚಿಸಿದರು. ಅಲ್ಲದೆ, ವೈರಲ್‌ ಆಗಿದ್ದ ವಿಡಿಯೋ ತುಣುಕುಗಳನ್ನು ವೀಕ್ಷಿಸಿ, ಪರಿಸ್ಥಿತಿ ಕುರಿತು ವಿವರ ಮಾಹಿತಿ ಪಡೆದರು.

ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಅಗತ್ಯ ನಿಗಾ ವಹಿಸುವ ಕಾರ್ಯಗಳು ನಡೆಯುತ್ತಿವೆ. ಸಾರ್ವಜನಿಕರು ಆತಂಕಪಡಬಾರದು ಎಂದರು. ಅಲ್ಲದೇ, ಆರ್‌ಎಫ್‌ಒ ಅವರಿಗೆ ಶಾಸಕರು ದೂರವಾಣಿ ಮೂಲಕ ಕರೆ ಮಾಡಿ, ಯಾವುದೇ ರೀತಿಯ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಅವರು ಮಾತನಾಡಿದ ಅವರು, ಸಾರ್ವಜನಿಕರು ಚಿರತೆ ಇರುವ ಕುರಿತು ವದಂತಿಗಳಿಗೆ ಕಿವಿಗೊಡದೇ, ಸೆರೆಹಿಡಿಯುವವರೆಗೂ ಅರಣ್ಯ ಇಲಾಖೆ ಹಾಗೂ ಆಡಳಿತದೊಂದಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಘಟನೆ ಹಿನ್ನೆಲೆ:

ಹರಿಹರದ ಹರಪನಹಳ್ಳಿ ರಸ್ತೆಯಲ್ಲಿ ಕಿರ್ಲೋಸ್ಕರ್ ಕಾಲೋನಿ ಇದೆ. ತುಂಗಭದ್ರಾ ನದಿ ಸಮೀಪವಿರುವ ಕಾಲೋನಿಯು ಜೋಡು ಬಸವೇಶ್ವರ ದೇವಸ್ಥಾನದವರೆಗೆ ಹಬ್ಬಿಕೊಂಡಿದೆ. ಜೋಡು ಬಸವೇಶ್ವರ ದೇವಸ್ಥಾನದಿಂದ ಗುತ್ತೂರು ತಲುಪುವ ರಸ್ತೆಯಲ್ಲಿ ಕಿಮ್ ಗಿಂತಾ ಮೊದಲು ಬರುವ ಕಿರ್ಲೋಸ್ಕರ್ ಕಾಲೋನಿಯ ಗೇಟ್ ಒಳಗಿರುವ ಮನೆಯೊಂದರಲ್ಲಿ ಇದ್ದ ರಾಜೀವ್ ದೀಕ್ಷಿತ್ ಎಂಬವರ ಮನೆ ಮೇಲ್ಭಾಗದಿಂದ ಚಿರತೆ ಪಕ್ಕಕ್ಕೆ ಹಾರಿದ ಕ್ಷಣದ ದೃಶ್ಯ ಮಾತ್ರ ವೀಡಿಯೋದಲ್ಲಿ ಕಂಡುಬಂದಿದೆ.

ಫೆ.9ರ ರಾತ್ರಿ 11 ಗಂಟೆ ಸುಮಾರಿಗೆ ವಿಚಿತ್ರ ಶಬ್ದ ಬಂದಂತಾಗಿದೆ. ಬೆಳಗ್ಗೆ ಎದ್ದು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಚಿರತೆಯ ಸ್ವಲ್ಪ ಭಾಗ ದರ್ಶನವಾಗಿದೆ. ಸಂಜೆ ಹುಡುಗನೊಬ್ಬ ಚಿರತೆಯನ್ನು ರೈಲ್ವೆ ಹಳಿಗಳ ಬಳಿಯೂ ನೋಡಿದ್ದಾನೆ ಎನ್ನಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನು ಇಡುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಶಾಸಕರೊಂದಿಗೆ ಬಿಜೆಪಿ ನಗರ ಅಧ್ಯಕ್ಷ ಅಜಿತ್ ಸಾವಂತ್, ರಾಘವೇಂದ್ರ ದೀಕ್ಷಿತ್, ಮಂಜಣ್ಣ ಹಾಗೂ ಇತರರು ಸ್ಥಳಕ್ಕೆ ತೆರಳಿದ್ದರು.

- - -

-10HRR.03.ಜೆಪಿಜಿ:

ಹರಿಹರದ ಕಿರ್ಲೋಸ್ಕರ್ ಕಾಲೋನಿಯಲ್ಲಿ ಚಿರತೆ ಇರುವ ಗುಮಾನಿ ಹಿನ್ನೆಲೆ ಶಾಸಕ ಬಿ.ಪಿ. ಹರೀಶ್, ಪ್ರದೇಶಕ್ಕೆ ಅರಣ್ಯ ಇಲಾಖೆ ಡಿಆರ್ ಎಫ್ ಒ ಖಾಲಿದ್ ಹಾಗೂ ನಗರಸಭೆ ಆಯುಕ್ತ ವಿನಯ್ ಕುಮಾರ್ ಜತೆಗೆ ಬೇಟಿ ನೀಡಿ ಪರಿಶೀಲಿಸಿ, ಜನತೆಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದರು.