ಬೇಟೆಗೆ ಬಂದು ಪಾಳುಬಾವಿಗೆ ಬಿದ್ದಿದ್ದ ಚಿರತೆಯ ರಕ್ಷಣೆ

| Published : Oct 24 2025, 01:00 AM IST

ಬೇಟೆಗೆ ಬಂದು ಪಾಳುಬಾವಿಗೆ ಬಿದ್ದಿದ್ದ ಚಿರತೆಯ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಟೆಯಾಡಲು ಬಂದಿದ್ದ ಚಿರತೆಯೊಂದು ಸಮೀಪದ ಕೆಂಪಯ್ಯನ ದೊಡ್ಡಿ ಗ್ರಾಮದ ಕೆಂಚೇಗೌಡರ ಪಾಳು ಬಾವಿಗೆ ಬುಧವಾರ ತಡರಾತ್ರಿ ಆಯಾತಪ್ಪಿ ಬಿದ್ದಿದೆ. ಗುರುವಾರ ಬೆಳಗ್ಗೆ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಸುರಕ್ಷಿತವಾಗಿ ಹಿಡಿದು ಕನಕಪುರ ತಾಲೂಕಿನ ಸಂಗಮ್ ಅರಣ್ಯ ವಲಯಕ್ಕೆ ಬಿಡಲಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮದ ಯುವ ಮುಖಂಡ ಮೋಹನ್ ಕುಮಾರ್ ಮಾತನಾಡಿ, ಗ್ರಾಮದ ಕಾಡಂಚಿನ ಪ್ರದೇಶದಲ್ಲಿ ಇರುವುದರಿಂದ ನಿರಂತರ ಕಾಡು ಪ್ರಾಣಿಗಳು ಮತ್ತು ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮಗಳಿಗೆ ನುಗ್ಗಿ ಕುರಿ ಮೇಕೆಗಳನ್ನು ಹೊತ್ತೊಯ್ಯುವುದು ಬೀದಿ ನಾಯಿಗಳ ಮೇಲೆ ಆಕ್ರಮಣ ಮಾಡುವುದು ನಡೆಯುತ್ತಿರುತ್ತದೆ.

ಕಾರ್ಯನಿರತವಾಗಿ ನಾವು ಪಟ್ಟಣ ಪ್ರದೇಶಗಳಿಗೆ ಹೋದರೆ ರಾತ್ರಿ ವೇಳೆ ನಮ್ಮ ಗ್ರಾಮಕ್ಕೆ ನಾವೇ ಬರುವುದಕ್ಕೆ ಭಯಪಡುವ ಪರಿಸ್ಥಿತಿ ಇದೆ. ಜಮೀನಿನಲ್ಲಿ ವ್ಯವಸಾಯ ಮಾಡಿದ ಫಸಲು ಕಾಡಾಣೆಗಳ ಹಾವಳಿಯಿಂದ ಹಾಳಾಗಿ ನಷ್ಟ ಅನುಭವಿಸುತ್ತೇವೆ. ಇದಕ್ಕೆಲ್ಲ ಸೂಕ್ತ ಪರಿಹಾರ ನೀಡಿ ನಮಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ನಿನ್ನೆ ರಾತ್ರಿ ಗ್ರಾಮಕ್ಕೆ ಬಂದ ಚಿರತೆ ಅಕಸ್ಮಿಕವಾಗಿ ಸುಮಾರು 70 ಅಡಿ ಆಳದ ಬಾವಿಗೆ ಬಿದ್ದಿದೆ. ಚಿರತೆನೋಡಲು ಗ್ರಾಮಸ್ಥರು ಸ್ಥಳದಲ್ಲಿ ಕುತೂಹಲದಿಂದ ಕಾದಿದ್ದರು. ಚಿರತೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯುತ್ತಿದ್ದು ಕಂಡುಬಂದಿತು.

ಕಾರ್ಯಾಚರಣೆಯಲ್ಲಿ ಡಿಸಿಎಫ್ ಸುರೇಂದ್ರ, ಎ.ಸಿ.ಎಫ್.ನಾಗೇಂದ್ರ ಪ್ರಸಾದ್, ಹಲಗೂರು ವಿಭಾಗದ ಆರ್‌.ಎಫ್.ಒ ಪ್ರಮೋದ್ ದೇವ್, ಶಿಂಷಾ ವಿಭಾಗದ ಡೆಪ್ಯೂಟಿ ಆರ್‌.ಎಫ್.ಓ.ಸಾಜುಜ್ರಾಜಿನ್, ಮುತ್ತತ್ತಿ ವಿಭಾಗದ ಆರ್.ಎಫ್.ನಿಹಾಲ್ ಅಹಮದ್ ಸಾಂಗೆ, ಅರಣ್ಯ ಗಸ್ತು ಪಾಲಕರಾದ ನಬಿಲಾಲ್ ಕುರಿ ಕಾಯಿ, ಪರಶುರಾಮ್ ಭಜಂತ್ರಿ, ಸಿದ್ದರಾಮ್ ಪೂಜಾರಿ ಸೇರಿದಂತೆ ಇತರರು ಇದ್ದರು.