ನಾರೇಯಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಭಿಮತ

---ಕನ್ನಡಪ್ರಭ ವಾರ್ತೆ ಚಾಮರಾಜನಗರಸಂತರು ಜೀವನದ ಮೌಲ್ಯಗಳು ಹಾಗೂ ತತ್ವಾದರ್ಶಗಳನ್ನು ಅನುಸರಿಸಿದರೆ ಜೀವನದಲ್ಲಿ ನೆಮ್ಮದಿ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಚಾಮರಾಜನಗರ ವಿವಿ ಹಾಗೂ ಶ್ರೀ ಯೋಗಿ ನಾರೇಯಣ ಯತೀಂದ್ರರ ಪ್ರಚಾರ ಸಭಾ ಮೈಸೂರು ಆಯೋಜಿಸಿದ್ದ ಕೈವಾರ ಸದ್ಗುರು ನಾರೇಯಣರ ಪರಿಚಯ, ಆತ್ಮಬೋಧನೆ ಮತ್ತು ನಾರೇಯಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಾಜೀ ಮಹಾರಾಜ್ ಅವರಿಗೆ ನಾರೇಯಣ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಇಂತಹ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯ ಯೋಗಿ ನಾರೇಯಣ ಗುರು ಒಬ್ಬರು. ಈ ನಾಡು ಕಂಡಂತಹ ಅಪರೂಪದ ಶ್ರೇಷ್ಠ ಸಂತರು ಎಂದರು.ಕೈವಾರ ತಾತಯ್ಯ ೧೯ನೇ ಶತಮಾನದ ಆರಂಭದಲ್ಲಿ ಪ್ರಸಿದ್ಧ ದ್ವಿಭಾಷಾ ಕವಿ ಸಂತ ಮತ್ತು ಜ್ಞಾನ ಯೋಗಿಯಾಗಿದ್ದರು. ಅವರು ಅಮರ ನಾರಾಯಣ ಅವರ ಪರಮ ಭಕ್ತರಾಗಿದ್ದರು. ಅಂದೇ ಇಂದಿನ ಭಯಾನಕ ಘಟನೆಗಳ ಬಗ್ಗೆ ಕಾಲಜ್ಞಾನ ಮತ್ತು ಭವಿಷ್ಯವಾಣಿ ತತ್ವ ಪದಗಳನ್ನು ರಚನೆ ಮಾಡಿದ್ದರು ಎಂದರು.ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳಿಂದ ಶಾಲಾ ಮಕ್ಕಳು ಧಾರುಣವಾಗಿ ಮೃತಪಡುತ್ತಿದ್ದಾರೆ. ತಂದೆ ತಾಯಿಗಳ ಆಕ್ರಂದನ ಎಂತಹ ಮನಸ್ಸನ್ನು ಕಲಕುತ್ತಿದೆ. ಇವೆಲ್ಲಕ್ಕೂ ಸಂತರ ಹಾಗೂ ತತ್ವಾದರ್ಶಗಳು ಪರಿಹಾರ ನೀಡಿ ಮಾನವ ಕುಲ ಒಂದೇ ಎಂದು ಸಾರಿ ಹೇಳುತ್ತವೆ ಎಂದರು.ಯೋಗಿ ನಾರೇಯಣ ಯತೀಂದ್ರರು ಕಠಿಣ ತಪಸ್ಸು ಮಾಡಿ, ಯೋಗ ಸಿದ್ಧಿ ಪಡೆದು ಬಳೆ ಮಾರುವ ಕಾಯಕದೊಂದಿಗೆ ಜನರಿಗೆ ಸನ್ಮಾರ್ಗ ತೋರಿದ ಮಹಾತ್ಮರು. ಇಂಥವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಸೇವಾ ಗುಣಗಳನ್ನು ಜಗತ್ತಿಗೆ ತಿಳಿಸುವ ಕಾರ್ಯ ಮಹತ್ವಪೂರ್ಣವಾಗಿದೆ ಎಂದರು.ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡು ದೇವಸ್ಥಾನದ ಅರ್ಚಕರ ಆಶ್ರಯದಲ್ಲಿ ಬೆಳೆದು ತಾತಯ್ಯ ಅವರು ಹುಟ್ಟು ಪವಾಡವಾಗಿದೆ. ತಾತಯ್ಯ ಅವರು ಭೂವಿಗೆ ಬರಬಾರದೆಂದು ವಿಷವಿಕ್ಕಿ ಕೊಲ್ಲುವಂತಹ ಸನ್ನಿವೇಶ ಸೃಷ್ಠಿಯಾಯಿತು. ತಾತಯ್ಯನವರ ಜನನವಾದ ಬಳಿಕ ಮಗುವನ್ನು ಕಾಡಿಗೆ ಎಸೆಯಲು ಮುಂದಾದಾಗ ಸರ್ಪ ಅಡ್ಡ ಬಂದ ಪರಿಣಾಮ ಅವರು ವಾಪಸ್‌ ಹೋಗುತ್ತಾರೆ. ಹೀಗಾಗಿ ಅವರ ಜನನವೇ ಒಂದು ಪವಾಡ, ಸರಳ ವ್ಯಕ್ತಿತ್ವ ಕೈವಾರ ತಾತಯ್ಯ ಅವರ ಮಹಿಮೆ ಪವಾಡಗಳು ಅಪಾರವಾಗಿದೆ ಎಂದರು.ಕೈವಾರ ತಾತಯ್ಯ ವೃತ್ತಿಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಯೋಗ, ಧಾನ್ಯ ಮತ್ತು ಅಧ್ಯಾತ್ಮಿಕತೆಯನ್ನು ಬೆಳೆಸಿದರು. ಅಲ್ಲಿಂದ ೧೧೦ ವರ್ಷಬದುಕಿದ್ದ ಅವರು, ಜೀವಂತ ಸಮಾಧಿಯಾದರು. ತಾತಯ್ಯ ತಪಸ್ಸುಗೈದ ಪುಣ್ಯ ಭೂಮಿ ಕೈವಾರ ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಪ್ರಮುಖ ಪ್ರವಾಸಿ ತಾಣ ಮತ್ತು ಪುಣ್ಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಪವಾಡ ಪುರುಷರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ನಂತರ ಎಂ.ಎಸ್‌. ರಾಮಯ್ಯ ಅವರ ಮಕ್ಕಳಾದ ಡಾ.ಎಂ.ಆರ್‌. ಜಯರಾಮ್ ಅವರು ಮತ್ತು ಸಹೋದರರರು ಕೈವಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಜೊತೆಗೆ ಹಳ್ಳಿ ಹಳ್ಳಿಗಳಲ್ಲಿ ನಾರೇಯಣರ ಭಜನೆ ಮತ್ತು ಕೀರ್ತನೆಗಳನ್ನು ಹಾಡುವ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.ಮೈಸೂರಿನ ರಾಮಕೃಷ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಾಜೀ ಮಹಾರಾಜ್ ಮಾತನಾಡಿ, ಪ್ರಶಸ್ತಿಯನ್ನು ನೀಡುತ್ತಿರುವುದು ಹೆಮ್ಮೆ ಎನ್ನಿಸಿದೆ. ಇನ್ನು ಸಹ ನಮ್ಮ ಜವಾಬ್ದಾರಿ ಹೆಚ್ಚಿದೆ. ಪೂಜ್ಯರ ಸಾನಿಧ್ಯದಲ್ಲಿ ಪ್ರಶಸ್ತಿ ಸ್ವೀಕರಿಸುವುದು ಸಂತಸವಾಗಿದೆ. ಆಶ್ರಮದ ೧೦೦ ವರ್ಷಗಳ ಸೇವೆ ಅನನ್ಯವಾಗಿದೆ ಎಂದರು.ಧರ್ಮದಿಂದ ಮಾತ್ರ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಜ್ಞಾನ ಇದ್ದ ಕಡೆ ಧರ್ಮ ಪ್ರಜ್ವಲಿಸುತ್ತದೆ. ಸ್ವಾಮಿ ವಿವೇಕಾನಂದರ ತತ್ವ ಅದರ್ಶಗಳು ಹಾಗೂ ರಾಮಕೃಷ್ಣ ಪರಮಹಂಸರ ಸೇವೆಯು ನಮ್ಮೆಲ್ಲರಿಗೂ ಸ್ಫೂರ್ತಿ ಎಂದರು. ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್‌. ಜಯರಾಮ್ ಮಾತನಾಡಿ, ಯೋಗಿ ನಾರೇಯಣ ಕೀರ್ತನೆಯ ಪಠಣದಿಂದ ಶಾಂತಿ ನೆಮ್ಮದಿ ದೊರೆಯುತ್ತಿದೆ. ಧರ್ಮ ಮಾರ್ಗದಲ್ಲಿ ನಡೆದರೆ ಯಶಸ್ಸು ದೊರೆಯುತ್ತಿದೆ. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಧರ್ಮ ಬೋಧನೆ ಮಾಡಿ, ಯೋಗಿ ನಾರೇಯಣ ಕೀರ್ತನೆ ಮತ್ತು ಭಜನೆ ಮಾಡುತ್ತಾ ಹಳ್ಳಿಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ೫ ಸಾವಿರ ಹಳ್ಳಿಗಳಲ್ಲಿ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ತಾತಯ್ಯನವರ ಭೇದ ಭಾವವಿಲ್ಲದೇ ಸಮನತೆಯ ತತ್ವವಗಳಿಂದ ಮಾನವ ಕುಲ ಒಂದೇ ಎಂದು ಸಾರುವುದೇ ಕ್ಷೇತ್ರದ ಪ್ರಮುಖ ಉದ್ದೇಶ ಎಂದರು.+++

ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಯೋಗಿ ನಾರೇಯಣ ಯತೀಂದ್ರರ ಪ್ರಚಾರ ಸಭಾದ ಪ್ರಧಾನ ಸಂಚಾಲಕ ಎಚ್.ಎ. ವೆಂಕಟೇಶ್ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಶ್ರೀ ಮುದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎನ್. ಕವಿತಾ, ಶ್ರೀನಿವಾಸ ಶೆಟ್ಟಿ, ದಾಸ ಬಣಜಿಗರ ಸಂಘದ ಅಧ್ಯಕ್ಷ ಚಂದ್ರಶೇಖರ್‌, ರೈಟ್ಸ್ ಜನರಲ್ ಮ್ಯಾನೇಜರ್ ಎಂ.ಜಿ. ಸುದೀಪ್, ಹಿರಿಯ ಲೆಕ್ಕಪರಿಶೋಧಕ ಸುರೇಂದ್ರ ಹೆಗಡೆ, ಶಿವಕುಮಾರ್‌, ಮೈಸೂರು ವಿವಿ. ವಿಶ್ರಾಂತ ಪ್ರಾಧ್ಯಾಪಕ ಡಾ. ಶಿವರಾಜಪ್ಪ ಇತರರು ಇದ್ದರು.

---೨೨ಸಿಎಚ್‌ಎನ್15

ಕೈವಾರ ಸದ್ಗುರು ನಾರೇಯಣಯೋಗಿಗಳ ಪರಿಚಯ, ಆತ್ಮಬೋಧನೆ ಮತ್ತು ನಾರೇಯಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿದರು.