ಮುಂದಿನ ದಿನಗಳಲ್ಲಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಸುವಂತೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಾವು ಮನವಿ ಮಾಡಿರುವದಾಗಿ ಸಚಿವ ಡಾ.ಅಜಯಸಿಂಗ್ ಹೇಳಿದರು.
ಕನ್ನಡಪ್ರಭ ವಾರ್ತೆ ಜೇವರ್ಗಿ
ಮುಂದಿನ ದಿನಗಳಲ್ಲಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಸುವಂತೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಾವು ಮನವಿ ಮಾಡಿರುವದಾಗಿ ಸಚಿವ ಡಾ.ಅಜಯಸಿಂಗ್ ಹೇಳಿದರು.ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕುಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇವರ್ಗಿ ಹಾಗೂ ಯಡ್ರಾಮಿ ಉಭಯ ತಾಲೂಕುಗಳಲ್ಲಿ ಶರಣರು, ಸಂತರು, ದಾರ್ಶನಿಕರು, ವಚನಕಾರರು, ತತ್ವಪದಕಾರರು ಬಾಳಿಬೆಳಗಿದ ಪೂಣ್ಯ ಭೂಮಿಯಾಗಿದ್ದು, ನಮ್ಮ ನೆಲ ಸಗರನಾಡಿನ ಹೆಬ್ಬಾಗಿಲು ಎಂದು ಕರೆಸಿಕೊಂಡಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ.ಗೋವಿಂದರಾಜ ಆಲ್ದಾಳ ಮಾತನಾಡಿ, ಜನಪದ ಸಾಹಿತ್ಯಕ್ಕೆ ಜೇವರ್ಗಿ ತನ್ನದೇ ವಿಶಿಷ್ಟ ಸೇವೆ ಸಲ್ಲಿಸಿದೆ. ಇಲ್ಲಿಯ ತತ್ವಪದಗಳನ್ನು ಭಜನೆ ಹಾಡುಗಳಾಗಿ ತುಂಬಾ ಜನಪ್ರಿಯ, ಅಲ್ಲದೇ ಬಯಲಾಟ ಮತ್ತು ನಾಟಕ ರಚನೆ ಮಾಡಿದ ನೆಲ್ಲೋಗಿ ತಾತ್ಯಾ ಸಾಹೇಬ, ಯನಗುಂಟಿಯ ವೀರಮ್ಮ, ರಂಜಣಗಿಯ ರಾಮಸಂಗ ಸಹಿತ ನೂರಾರು ಜನ ಕಲಾವಿದರ ಗುರುತಿಸುವ ಕಾರ್ಯವಾಗಬೇಕು ಎಂದರು.ಹೈಕ ವಿಮೋಚನಾ ವೀಲಿನ ಚಳುವಳಿಯಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲೂಕುಗಳ ಶಕ್ತಿ ಸಿಂಹಪಾಲು. ಇಲ್ಲಿಯ ವೀರ ಹೋರಾಟಗಾರರ ಹೆಸರು ಅವಿಸ್ಮರಣೀಯ. ಸರದಾರ ಶರಣಗೌಡ ಇನಾಮದಾರ, ಚನ್ನಬಸಪ್ಪ ಕುರಳಗೇರಾ, ನೀಲಕಂಠಪ್ಪ ದೇವರಮನಿ, ದತ್ತಾತ್ರೇಯರಾವ್ ಅವರಾದಿ, ಶಿವಣ್ಣ ಸಾಹು ಕಂದಗಲ್ ಅವರು ರಜಾಕರ ವಿರುದ್ಧ ಹೋರಾಡಿದ ಮಹಾನ ನಾಯಕರು ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಮಹನೀಯರು ಎಂದು ಸಚಿವ ಡಾ.ಅಜಯ್ಸಿಂಗ್ ಹೇಳಿದರು.
ಶರಣರ ಪರಂಪರೆಯಲ್ಲಿ ಆಂದೋಲಾದ ಶ್ರೀಕರುಣೇಶ್ವರರು, ಗಂವ್ಹಾರದ ವಿಶ್ವಾರಾಧ್ಯರು, ಕೋಳಕೂರಿನ ಸಿದ್ಧಬಸವೇಶ್ವರರು ಮೋದಲಾದ ಮಹಾತ್ಮರು ಈ ನೆಲದ ಬೆಳಕು ಎಂದು ಹೇಳಿದರು.ಡಾ.ಧರ್ಮಣ್ಣ ಬಡಿಗೇರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಸಮ್ಮೇಳನಾಧ್ಯಕ್ಷ ಡಾ.ಗೋವಿಂದರಾಜ ಆಲ್ದಾಳ ಅವರ ಭವ್ಯ ಮೆರವಣಿಗೆಗೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಚಾಲನೆ ನೀಡಿದರು.
ಶಖಾಪುರ ತಪೋವನ ಮಠದ ಪೀಠಾಧಿಪತಿ ಡಾ.ಸಿದ್ಧರಾಮ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೊನ್ನದ ಡಾ.ಶಿವಾನಂದ ಸ್ವಾಮೀಜಿ, ಸನ್ಮೇಳನ ಸರ್ವಾಧ್ಯಕ್ಷ ಡಾ. ಗೋವಿಂದರಾಜ ಆಲ್ದಾಳ, ಶಾಸಕ ಅಲ್ಲಂಪ್ರಭು ಪಾಟೀಲ್, ಡಾ.ಕೇದಾರಲಿಂಗಯ್ಯ ಹಿರೇಮಠ, ರಾಜಶೇಖರ ಸೀರಿ, ಸಾಹಿತಿ ಡಾ.ಎಸ್.ಎಸ್.ಗುಬ್ಬಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ರಮೇಶಬಾಬು ವಕೀಲ್, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ದಯಾನಂದ ದೇವರಮನಿ, ಮಲ್ಲಿಕಾರ್ಜುನಗೌಡ ಪಾಟೀಲ ಬಿರಾಳ, ಚಂದ್ರಶೇಖರ ತುಂಬಗಿ, ಅಬ್ದುಲ್ ರಹಿಮಾನ ಪಟೇಲ್, ಪ್ರತಾಪ ಕಟ್ಟಿ, ದಾನಪ್ಪಗೌಡ ಹಳಿಮನಿ, ಶಂಕರಗೌಡ ಹಾಲಗಡ್ಲಾ, ಚಂದ್ರಶೇಖರ ಹರನಾಳ, ಸುದೀಂದ್ರ ವಕೀಲ, ಮರೇಪ್ಪ ಬಡಿಗೇರ, ಡಾ.ಧರ್ಮಣ್ಣ ಬಡಿಗೇರ, ಎಸ್.ಟಿ.ಬಿರಾದಾರ, ಎ.ಸಿ.ಹಾರವಾಳ, ಬಂಗಾರೆಪ್ಪ ಆಡೀನ್, ಸುನಂದ ಕಲ್ಲಾ, ಕವಿತಾ ಹಳ್ಳಿ, ಭಗವಂತರಾಯ ಬೆಣ್ಣುರ, ಸಿದ್ದು ಕೇರೂರ, ಶ್ರೀಹರಿ ಕರಕಿಹಳ್ಳಿ, ಖಲೀಫ್ ಮಂದ್ರವಾಡ, ಪರಮೇಶ್ವರ ಬಿರಾಳ, ಪ್ರಕಾಶ ಫುಲಾರಿ ಸೇರಿದಂತೆ ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು, ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಕೆ.ಬಿರಾದಾರ ಪ್ರಸ್ತಾವನೆಗೈದರು. ಬಸವರಾಜ ಹಡಪದ ವಂದಿಸಿದರು. ಸುನಂದಾ ಕಲ್ಲಾ ನಿರೂಪಿಸಿದರು.