ಕನ್ನಡಪ್ರಭ ವಾರ್ತೆ ಬೀಳಗಿಆಯುರ್ವೇದವು ಕೇವಲ ರೋಗ ಬಂದಾಗ ಚಿಕಿತ್ಸೆ ಪಡೆಯುವ ಪದ್ಧತಿಯಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಜೀವನಶೈಲಿ, ಆಹಾರ ಪದ್ಧತಿ ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಸಮಗ್ರ ವೈದ್ಯಕೀಯ ಪದ್ಧತಿಯಾಗಿದೆ ಎಂದು ಡಾ.ಜಿ.ಬಿ.ಕುಂಬಾರ ಹೇಳಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಆಯುರ್ವೇದವು ಕೇವಲ ರೋಗ ಬಂದಾಗ ಚಿಕಿತ್ಸೆ ಪಡೆಯುವ ಪದ್ಧತಿಯಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಜೀವನಶೈಲಿ, ಆಹಾರ ಪದ್ಧತಿ ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಸಮಗ್ರ ವೈದ್ಯಕೀಯ ಪದ್ಧತಿಯಾಗಿದೆ ಎಂದು ಡಾ.ಜಿ.ಬಿ.ಕುಂಬಾರ ಹೇಳಿದರು.ಪಟ್ಟಣದಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ (ರಿ) ಕರ್ನಾಟಕ, ತಾಲೂಕು ಘಟಕದಿಂದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಭಗವಾನ್ ಧನ್ವಂತರಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಯುಷ್ ಫೆಡರೇಷನ್ ಆಫ್ ಇಂಡಿಯಾ ತಾಲೂಕು ಅಧ್ಯಕ್ಷ ರಮೇಶ ಅಕ್ಕಿಮರಡಿ ಮಾತನಾಡಿ, ಆಧುನಿಕ ಜೀವನಶೈಲಿಯಿಂದಾಗಿ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದರು.ಎಲುಬು ಕೀಲು ತಜ್ಞ ಎಸ್.ಟಿ.ತೇಲಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು. ನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡುವುದು. ಯೋಗ–ವ್ಯಾಯಾಮ ಹಾಗೂ ಉತ್ತಮ ನಿದ್ರೆಯಂತಹ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಬಸವೇಶ್ವರ ವಿದ್ಯಾವರ್ಧಕ ಸಂಘದ ಪಂಚಕರ್ಮ ವಿಭಾಗದ ಮುಖ್ಯಸ್ಥೆ ಜಯಶ್ರೀ ಗಿರಿಸಾಗರ ಉಪನ್ಯಾಸ ನೀಡಿ, ಆಯುರ್ವೇದದ ಮಹತ್ವವನ್ನು ಯುವಜನರು ಹಾಗೂ ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಭಾರತೀಯ ವೈದ್ಯ ಪರಂಪರೆಯ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಕನ್ನಡಪ್ರಭ ಮತ್ತು ಏಷಿಯಾ ನೆಟ್ ಸುವರ್ಣ ನ್ಯೂಸ್ ಕೊಡಿ ಮಾಡುವ ಆಯುರ್ ಭೂಷಣ ಪ್ರಶಸ್ತಿ ಪುರಸ್ಕೃತ ವೈದ್ಯ ದಂಪತಿಗಳಾದ ಮಲ್ಲಿಕಾರ್ಜುನ ಹಳ್ಳೂರ ಹಾಗೂ ಜ್ಯೋತಿ ಹಳ್ಳೂರ ಅವರನ್ನು ಗೌರವಿಸಲಾಯಿತು. ಈ ವೇಳೆ ವೈದ್ಯರಾದ ಮೋಹನ ಚಟ್ಟೆರ, ರಾಘವೇಂದ್ರ ಮಾಳೊಜಿ, ಸಂತೋಷ ಕುಮಾರ ವೈದ್ಯ, ವಿಶ್ವನಾಥ ಕೊಕರೆ, ಪ್ರಶಾಂತ ಬನ್ನಟ್ಟಿ, ಸಿದ್ದರಾಮ ಹೊನ್ನುಂಗುರ, ಸೋಮಶೇಖರ ಬಿರಾದಾರ ಇದ್ದರು.