ಮಹಿಳೆಯರಿಗೆ ಬಾಪುಲೆ ದಂಪತಿ ಆದರ್ಶವಾಗಲಿ: ವಿಜಯಕುಮಾರ್

| Published : Aug 18 2024, 01:47 AM IST

ಮಹಿಳೆಯರಿಗೆ ಬಾಪುಲೆ ದಂಪತಿ ಆದರ್ಶವಾಗಲಿ: ವಿಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮಹಿಳೆಯರಿಗೆ ಬಾಪುಲೆ ದಂಪತಿ ಆದರ್ಶವಾಗಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್.ಕೆ.ವಿಜಯಕುಮಾರ್ ಹೇಳಿದ್ದಾರೆ.

ಮನೆಯಂಗಳದಲ್ಲಿ ಕನ್ನಡ ಶ್ರಾವಣ ಸಾಹಿತ್ಯ ಸಂಭ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಮಹಿಳೆಯರಿಗೆ ಬಾಪುಲೆ ದಂಪತಿ ಆದರ್ಶವಾಗಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್.ಕೆ.ವಿಜಯಕುಮಾರ್ ಹೇಳಿದ್ದಾರೆ.

ತಾಲೂಕು ಕಸಾಪ ಪಟ್ಟಣದ ಗಿರಿನಗರ ವಾಸಿ ತಾಪಂ ನಿವೃತ್ತ ಇಒ ವಿಶಾಲಾಕ್ಷಮ್ಮ ಅವರ ಮನೆಯಂಗಳದಲ್ಲಿ ನಡೆದ ಕನ್ನಡ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಪ್ರಸ್ತುತ ಶಿಕ್ಷಣದಲ್ಲಿ ಮಹಿಳಾ ಸಬಲೀಕರಣ ಪ್ರಾತಿನಿಧ್ಯದ ಸ್ಥಿತಿ- ಗತಿ ಎಂಬ ಉಪನ್ಯಾಸ ನೀಡಿದರು. ಮಹಿಳೆಯರಿಗೆ, ಗೌರವ ಕೊಡಬೇಕು. ಕಳೆದ 200 ವರ್ಷಗಳ ಹಿಂದೆ ಮಹಿಳೆಯರ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು, ವೇದ ಗಳ ಕಾಲದಲ್ಲಿ ಮಹಿಳೆಯರಿಗೆ ಗೌರವವಿತ್ತು, ಯಜ್ಞ ಯಾಗಾದಿ, ಸಭೆ ಸಮಾರಂಭದಲ್ಲಿ ಗಳಲ್ಲಿ ಪುರುಷರ ಜೊತೆ ಮಹಿಳೆಯರು ಭಾಗವಹಿಸಲು ಆವಕಾಶವಿತ್ತು. ಮಹಿಳೆಯರಿಗೂ ಶಿಕ್ಷಣ ಪಡೆದು ವೇದಗಳ ರಚನೆಯಲ್ಲಿ ತೊಡಗಿಸಿ ಕೊಂಡಿದ್ದರು ಎಂದು ಹೇಳಿದರು. ಬಾಪುಲೆ ದಂಪತಿ ಆದರ್ಶವನ್ನು ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ಪಾಲಿಸಬೇಕಿದೆ. ಶಿಕ್ಷಣ ನೀಡಿದ್ದರಿಂದ ದೇಶದ ಮಹಿಳೆ ಸ್ಥಿತಿ ಬದಲಾಗುತ್ತಾ ಬಂತು. ಶಿಕ್ಷಣದಿಂದ ಇಂದಿನ ಮಹಿಳೆಯರು ಗಂಡಸರಿಗೆ ಸರಿ ಸಮಾನ ಕೆಲಸ ನಿರ್ವಹಿಸಿ ಆಧುನಿಕ ಜಗತ್ತನ್ನು ನೋಡುವಂತೆ ಡಾ.ಅಂಬೇಡ್ಕರ್ ನಮಗೆ ನೀಡಿದ ಸಂವಿಧಾನದಿಂದ ಸಾಧ್ಯವಾಗಿದೆ ಎಂದರು. ತಾಪಂ ನಿವೃತ್ತ ಇಒ ವಿಶಾಲಾಕ್ಷಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ತಾಯಿ ಸೇವೆ ಮಾಡುವುದೇ ನಮ್ಮ ಸೌಭಾಗ್ಯ, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಕನ್ನಡ ಭಾಷೆಯನ್ನು ಶಾಲಾ ಕಾಲೇಜಿನ ಮಕ್ಕಳಲ್ಲಿ ಬಿತ್ತರಿಸುವಂತಹ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದು ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.ಸಾಹಿತಿ ಮನಸುಳಿ ಮೊಹನ್ ಮಾತನಾಡಿ, ಶ್ರಾವಣ ಸಾಹಿತ್ಯ ಸಂಭ್ರಮದ ಮೂಲಕ ಸಾಹಿತ್ಯ-ಬದುಕು ಮತ್ತು ಜೀವನ ಕಟ್ಟಿಕೊಡಬೇಕು ಅಂತಹ ಪ್ರಮಾಣಿಕರನ್ನು ಸಮಾಜಕ್ಕೆ ಪರಿಚಯಿಸಬೇಕು. ತತ್ವ, ಸಿದ್ಧಾಂತಗಳಿಗೆ ಒಬ್ಬರಾದರೂ ಬದಲಾಗಬೇಕು ಎಂದು ತಿಳಿಸಿದರು.ತಾಲೂಕು ಕಸಾಪ ಅಧ್ಯಕ್ಷರ ರವಿ ದಳವಾಯಿ ಮಾತನಾಡಿ, ಮಹಿಳೆಯರ ಸ್ಥಿತಿ ಹಿಂದಿನ ಕಾಲದಲ್ಲಿ ಶೋಚನೀಯವಾಗಿತ್ತು, ಅಂದು ಹೆಚ್ಚು ಮಹಿಳೆಯರಿಗೆ ಶಿಕ್ಷಣವಿರಲಿಲ್ಲ, ಇಂದು ಸರಿ ಸಮಾನರಾಗಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು, ಮಹಿಳಾ ಕಸಾಪ ಸಂಘಟನಾ ಕಾರ್ಯದರ್ಶಿ ಉಮಾ ಪ್ರಕಾಶ್‌ , ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್ಪು, ನವೀನ್ ಪೆನ್ನಯ್ಯ, ತ. ಮ, ದೇವಾನಂದ, ಕ್ರಿಸ್ತದಯಕುಮಾರ್, ಮುಗಳಿ ಮಂಜಯ್ಯ ದಂಪತಿ, ಚಂದ್ರಶೇಖರ್ ಗಾಯಕರು ಚಂದ್ರಶೇಖರ್, ಸಿ. ಯೋಗೀಶ್, ಡಾ. ಮರಳಸಿದ್ಧಯ್ಯ ಪಟೇಲ್, ಕನ್ನಡಶ್ರೀ ಭಗವಾನ್, ನವೀನ್ ಪೆನ್ನಯ್ಯ ದೇವರಾಜ್ ಸಹ್ಯಾದ್ರಿ, ದಾದಾಪೀರ್ ಎ. ಭಾಗವಹಿಸಿದ್ದರು.

16ಕೆಟಿಆರ್.ಕೆ.04

ತರೀಕೆರೆಯಲ್ಲಿ ತಾಲೂಕು ಕಸಾಪದಿಂದ ನಡೆದ ಕಾರ್ಯಕ್ರಮ ಉದ್ಘಾಟನೆಯನ್ನು ತಾಪಂ ನಿವೃತ್ತ ಇಒ ವಿಶಾಲಾಕ್ಷಮ್ಮ ನೆರವೇರಿಸಿದರು.