ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಬಸವೇಶ್ವರರ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿ, ಶೈಕ್ಷಣಿಕ, ದೀನದಲಿತೋದ್ಧಾರಕದ ಚಿಂತನೆಗಳು ಎಲ್ಲೆಡೆ ಪಸರಿಸಲಿ ಎಂದು ಯಮಕನಮರಡಿಯ ಹುಣಸಿಕೊಳ್ಳಮಠದ ಉತ್ತರಾಧಿಕಾರಿ ಸಿದ್ದಬಸವ ದೇವರು ಹಾರೈಸಿದರು.ಬಸವ ಜಯಂತಿ ಅಂಗವಾಗಿ ಮಾತನಾಡಿದ ಅವರು, ವಿಶ್ವಗುರು ಬಸವೇಶ್ವರರು ಸಾಂಸ್ಕೃತಿಯ ನಾಯಕರೆಂದು ಸರ್ಕಾರ ಘೋಷಿಸಿದ್ದು, ಯಮಕನಮರಡಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈರಣ್ಣ ಬಿಸಿರೊಟ್ಟಿ ಮಾತನಾಡಿ, ಸಚಿವ ಸತೀಶ ಜಾರಕಿಹೊಳಿಯವರ ವಿಶೇಷ ಪ್ರಯತ್ನದಿಂದಾಗಿ ಸಿಎಂ ಸಿದ್ದರಾಮಯ್ಯನವರು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ್ದು ಲಿಂಗಾಯತ ಸಮಾಜ ಬಾಂಧವರಲ್ಲಿ ಸಂತಸ ಮೂಡಿಸಿದೆ ಎಂದರು.ಈ ಸಂದರ್ಭದಲ್ಲಿ ಕಿರಣಸಿಂಗ್ ರಜಪೂತ, ಸಿದ್ದಪ್ಪ ಶಿಳ್ಳಿ ಪ್ರಕಾಶ ಬಿಸಿರೊಟ್ಟಿ, ರವಿಂದ್ರ ಹಂಜಿ, ಮಲ್ಲಪ್ಪ ಶಿಳ್ಳಿ, ಪ್ರಕಾಶ ನಗಾರಿ, ಮಹಾದೇವ ನಗಾರಿ, ಸಿದ್ದಪ್ಪ ಮಹಾಂತನ್ನವರ, ಲೋಕೇಶ ಆಲೂರಿ, ಶಿವಾನಂದ ಚೌಗಲಾ, ಲಿಂಗಾಯತ ಸಮುದಾಯದ ಸಮಸ್ತ ಬಾಂಧವರು, ಗ್ರಾಮಸ್ತರು ಉಪಸ್ಥಿತರಿದ್ದರು,
ಹಂಚಿನಾಳ, ದಡ್ಡಿ, ಹಿಡಕಲ್ ಡ್ಯಾಂ, ವಲಯದಲ್ಲಿ ಹಾಗೂ ಉಳ್ಳಾಗಡ್ಡಿ-ಖಾನಾಪುರ, ಹೆಬ್ಬಾಳ, ಕೋಚರಿ, ಗೊಟೂರ ಸೇರಿದಂತೆ ವಿವಿಧೆಡೆ ವಿಶ್ವ ಗುರು ಬಸವೇಶ್ವರರ ಜಯಂತಿ ಸಂಭ್ರಮದಿಂದ ಆಚರಿಸಯಾಯಿತು.--------------------------
ಅದ್ಧೂರಿ ಮೆರವಣಿಗೆಯಮಕನಮರಡಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರರ 891ನೇ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಬಸವೇಶ್ವರ ಮಂದಿರದ ಹತ್ತಿರ ಸುಮಂಗಲೆಯರು ಬಸವೇಶ್ವರರಿಗೆ ನಾಮಕರಣ ಶ್ಯಾಸ್ತ್ರವನ್ನು ಮಾಡಲಾಯಿತು. ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಲಿಂಗಾಯತ ಸಮಾಜದ ಮುಖಂಡರಾದ ಈರಣ್ಣ ಬಿಸಿರೊಟ್ಟಿ, ರವಿಂದ್ರ ಜಿಂಡ್ರಾಳಿ, ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಭವ್ಯ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ವಿಶೇಷ ಕುಂಭಮೇಳದೊಂದಿಗೆ ಕರಡಿ ಮಜಲು, ವಾದ್ಯಮೇಳಗಳೊಂದಿಗೆ ಗೊಂಬೆಗಳ ಛದ್ಮವೇಷಧಾರಿಗಳು ಹಾಗೂ ಜೋಡೆತ್ತುಗಳ ಸಿಂಗಾರ ಮೆರವಣಿಗೆಗೆ ವಿಶೇಷ ಮೆರುಗು ಹೆಚ್ಚಿಸಿತು.