ಸಾರಾಂಶ
ಶಿಕ್ಷಣ ವ್ಯವಸ್ಥೆಯಲ್ಲಿಂದು ತೀವ್ರಗತಿಯ ಬದಲಾವಣೆಯ ಗಾಳಿ ಬೀಸುತ್ತಿದೆ. ನಮ್ಮ ಯುಗದ ಪ್ರಮುಖ ಘೋಷಣೆಯೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತಿನ ಎರಡು ಕಣ್ಣುಗಳಾಗಿವೆ, ಇವು ಪ್ರಪಂಚವನ್ನು ಪ್ರಗತಿಯ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತಿವೆ.
ಹುಬ್ಬಳ್ಳಿ:
ಜಗತ್ತಿನಾದ್ಯಂತ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆಯನ್ನು ಮೈಗೂಡಿಸಿಕೊಳ್ಳಲು ಮಕ್ಕಳು ಇ-ಕಲಿಕೆಗೆ ತೆರೆದುಕೊಳ್ಳಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ವಲಯ ಬಿಇಒ ಉಮೇಶ ಬೊಮ್ಮಕ್ಕನವರ ಕರೆ ನೀಡಿದರು.ತಾಲೂಕಿನ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ ಸಿ.ವಿ. ರಾಮನ್ ವಿಜ್ಞಾನ ಜಗತ್ತು, ಎಟಿಎಲ್ ಪ್ರಯೋಗಾಲಯಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ “ಇ-ವಿಜ್ಞಾನ ದರ್ಶನ” ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ಮೇಳ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯಲ್ಲಿಂದು ತೀವ್ರಗತಿಯ ಬದಲಾವಣೆಯ ಗಾಳಿ ಬೀಸುತ್ತಿದೆ. ನಮ್ಮ ಯುಗದ ಪ್ರಮುಖ ಘೋಷಣೆಯೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತಿನ ಎರಡು ಕಣ್ಣುಗಳಾಗಿವೆ, ಇವು ಪ್ರಪಂಚವನ್ನು ಪ್ರಗತಿಯ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತಿವೆ. ತಂತ್ರಜ್ಞಾನ ನಮ್ಮ ಬದುಕಿಗೆ ಯಾವುದೇ ಕ್ಷಣವೂ ಇಲ್ಲದೆ ಇರಲು ಸಾಧ್ಯವಿಲ್ಲ. ದೂರದರ್ಶನ, ಅಂತರ್ಜಾಲ, ಮೊಬೈಲ್, ವೆಬ್ 2.0, ಕ್ಲೌಡ್ ಕಂಪ್ಯೂಟಿಂಗ್, ಇ-ಕಾಮರ್ಸ್ ಇತ್ಯಾದಿ ಎಲ್ಲವೂ ತಂತ್ರಜ್ಞಾನದಿಂದ ಅಭಿವೃದ್ಧಿಯ ಹಾದಿಯಲ್ಲಿ ಸಾಗಿವೆ ಎಂದರು.ನಮಗೆ ಅನುಕೂಲಕರವಾದ ಮತ್ತು ಸುಲಭವಾದ ಜೀವನವನ್ನೇ ಇದರಿಂದ ನಾವು ಪಡೆಯುತ್ತಿದ್ದೇವೆ. ಆದ್ದರಿಂದ, ನಮಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನೀಡಿದ ಮಹತ್ವವನ್ನು ನಾವು ಅರಿತುಕೊಳ್ಳಬೇಕು. ಅದನ್ನು ಸಮಾಜದಲ್ಲಿ ಹಮ್ಮಿಕೊಂಡು ಅದರ ಬಳಕೆ ಮಾಡಿ, ಮುಂದುವರಿದ ಹೊಸ ದಾರಿಗಳಲ್ಲಿ ಗುರುತಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಶಿವಲೀಲಾ ಕಳಸಣ್ಣವರ ಮಾತನಾಡಿದರು. ಈ ವೇಳೆ ಎಸ್‌ಡಿಎಂಸಿ ಉಪಾಧ್ಯಕ್ಷ ಕಲ್ಲನಗೌಡ್ರ ಕೌಜಗೇರಿ, ಮಹಾಂತೇಶ ಸಂಕರಡ್ಡಿ, ಅಶೋಕ ಸಂಕರಡ್ಡಿ, ಸುಗುಣಾ ಕಾರಡ್ಡಿ, ವಿಜಯ ಬೆಂಗೇರಿ, ಕರಿಯಪ್ಪ ಕಂಬಳಿ, ಭೀಮಣ್ಣ ನಾಯ್ಕರ್, ನಂದೀಶ ನಾಡಗೇರ ಸೇರಿದಂತೆ ಹಲವರಿದ್ದರು.