ಸಾರಾಂಶ
ವಿಜ್ಞಾನಿಗಳು ತಮ್ಮ ಕೊಡುಗೆ ನೀಡಿದ ಪರಿಣಾಮ ನಮ್ಮ ಜೀವನ ಅತ್ಯಂತ ಸರಳವಾಗಿದೆ. ಬೆರಳಿನ ತುದಿಯಲ್ಲಿ ಜಗತ್ತನ್ನು ಅರಿಯಬಹುದಾಗಿದೆ. ಪ್ರತಿಯೊಂದು ಮಗು ತಾನೇಕೆ ವಿಜ್ಞಾನಿಯಾಗಬಾರದು ಎಂದೇ ವಿವೇಚಿಸಿಕೊಳ್ಳಬೇಕು.
ಕುಷ್ಟಗಿ:
ಇಂದಿನ ಮಕ್ಕಳೇ ನಾಳಿನ ವಿಜ್ಞಾನಿಗಳು. ಪ್ರತಿಯೊಂದು ವಸ್ತು ಹಾಗೂ ವಿಷಯಗಳನ್ನು ವೈಜ್ಞಾನಿಕ ಮನೋಭಾವನೆಯಿಂದ ಸ್ವೀಕರಿಸಬೇಕೆಂದು ಮುನಿರಾಬಾದ್ ಡಯಟ್‌ನ ಉಪನ್ಯಾಸಕ ರಾಜೇಂದ್ರ ಬೆಳ್ಳಿ ಹೇಳಿದರು.ತಾಲೂಕಿನ ಬಿಜಕಲ್ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕಿ ಸರಸ್ವತಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡುವ ಮೂಲಕ ಹಾಗೂ ವೈಜ್ಞಾನಿಕ ತಳಹದಿ ಹಾಕಲು ಉತ್ತಮ ವೇದಿಕೆಯಾಗಿದೆ ಎಂದು ಬಣ್ಣಿಸಿದರು.ಪ್ರಾಥಮಿಕ ವಿಭಾಗದಲ್ಲಿ ಸಾಕಷ್ಟು ವರ್ಕಿಂಗ್ ಮಾಡೆಲ್ ತಯಾರಿಸಿದ್ದು ವಿಶೇಷವಾಗಿದೆ, ಇದರಿಂದ ಮಕ್ಕಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲು ಭದ್ರ ಬುನಾದಿ ಹಾಕಿದಂತಾಗಿದೆ ಎಂದರು
ಮುಖ್ಯಗುರು ಬಸವರಾಜ ಬಾಗಲಿ ಮಾತನಾಡಿ, ವಿಜ್ಞಾನಿಗಳು ತಮ್ಮ ಕೊಡುಗೆ ನೀಡಿದ ಪರಿಣಾಮ ನಮ್ಮ ಜೀವನ ಅತ್ಯಂತ ಸರಳವಾಗಿದೆ. ಬೆರಳಿನ ತುದಿಯಲ್ಲಿ ಜಗತ್ತನ್ನು ಅರಿಯಬಹುದಾಗಿದೆ. ಪ್ರತಿಯೊಂದು ಮಗು ತಾನೇಕೆ ವಿಜ್ಞಾನಿಯಾಗಬಾರದು ಎಂದೇ ವಿವೇಚಿಸಿಕೊಳ್ಳಬೇಕು ಎಂದು ಹೇಳಿದರು.ಮುಖ್ಯ ಶಿಕ್ಷಕ ಗ್ಯಾನಪ್ಪ ರಾಂಪುರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ರಾಘಪ್ಪ ಶ್ರೀರಾಮ, ಬಿಆರ್‌ಪಿ ಶರಣಪ್ಪ ತೆಮ್ಮಿನಾಳ, ಶಿಕ್ಷಕ ಶಶಿಧರ ಗೊರಬಾಳ, ಪುಷ್ಪಲತಾ, ಕಲಿಕಾ ಟ್ರಸ್ಟ್ ಸಂಯೋಜಕ ಬಸವರಾಜ, ಮುಖಂಡ ಮಲ್ಲಪ್ಪ ಕಲಿಕೇರಿ ಸೇರಿದಂತೆ ಇತರರು ಇದ್ದರು.
ವಿಜ್ಞಾನ ಶಿಕ್ಷಕಿ ಶಿಲ್ಪಾ ಪಟ್ಟೇದ್ ಮಾರ್ಗದರ್ಶನದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದ ಮಾದರಿಗಳನ್ನು ಸ್ಥಳೀಯ ಎರಡು ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಶಿಕ್ಷಕಿ ಲತಾ ಅರಳಿಕಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.