ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳ‍ೆಸಿಕೊಳ್ಳಲಿ

| Published : May 19 2024, 01:47 AM IST

ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳ‍ೆಸಿಕೊಳ್ಳಲಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಲ್ಲ ರಂಗದಲ್ಲೂ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಶಿಕ್ಷಕರ ಜೊತೆಗೆ ತಮ್ಮ ಮಕ್ಕಳ ಅರ್ಹತೆ ತಕ್ಕಂತೆ ಶಿಕ್ಷಣ ಕೊಡಿಸುವುದು ಪಾಲಕರ ಜವಾಬ್ದಾರಿ ಎಂದು ಆಕ್ಸಫರ್ಡ್ ಪಾಟೀಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಮೀತಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಇಂದು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಲ್ಲ ರಂಗದಲ್ಲೂ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಶಿಕ್ಷಕರ ಜೊತೆಗೆ ತಮ್ಮ ಮಕ್ಕಳ ಅರ್ಹತೆ ತಕ್ಕಂತೆ ಶಿಕ್ಷಣ ಕೊಡಿಸುವುದು ಪಾಲಕರ ಜವಾಬ್ದಾರಿ ಎಂದು ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಮೀತಗೌಡ ಪಾಟೀಲ ಹೇಳಿದರು.

ಪಟ್ಟಣದ ಬಿದರಕುಂದಿ ಗ್ರಾಮದ ಮಾರ್ಗದಲ್ಲಿನ ನೂತನ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆದ ೫, ೬ ಮತ್ತು ೭ನೇ ತರಗತಿಯಲ್ಲಿ ಉತ್ತೀರ್ಣರಾದ ೬, ೭, ೮ ಹಾಗೂ ೧೦ನೇ ತರಗತಿಗಳಿಗೆ ೨೦೨೪ನೇ ಸಾಲಿನ ಪ್ರವೇಶಕ್ಕಾಗಿ ಜೂನಿಯರ್‌ ಜೀನಿಯಸ್ ಅವಾರ್ಡ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಯ ಕಾರಣಕ್ಕಾಗಿ ನಾಗರಬೆಟ್ಟ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆ ಪಟ್ಟಣದಲ್ಲೊಂದು ಶಿಕ್ಷಣ ಶಾಖೆ ತೆರೆದಿದೆ. ಮುಂಬರುವ ದಿನಗಳಲ್ಲಿ ನೀಟ್, ಜೆಇಇ ಸೇರಿದಂತೆ ಇನ್ನೂ ಅನೇಕ ಅರ್ಹತಾ ಪರೀಕ್ಷೆಗೆ ಸಂಬಂಧಿಸಿದ ತರಬೇತಿ ನೀಡಲು ನಮ್ಮ ಸಂಸ್ಥೆ ಈಗಾಗಲೇ ನುರಿತ ತಜ್ಞ ಶಿಕ್ಷಕರನ್ನು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಜೊತೆಗೆ ಕೆಎಎಸ್, ಐಎಎಸ್‌ದಂತಹ ಪರೀಕ್ಷೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವವರು ಈಗಾಗಲೇ ಬೆಂಗಳೂರು, ದೆಹಲಿ, ಬೆಳಗಾವಿ ಸೇರಿದಂತೆ ಇತರೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ತರಬೇತಿ ಪಡೆದುಕೊಳ್ಳಬೇಕಾಗಿತ್ತು. ಆದರೆ, ಮುಂಬರುವ ದಿನಗಳಲ್ಲಿ ಕೆಎಎಸ್‌ ಮತ್ತು ಐಎಎಸ್‌ನಂತಹ ಪರೀಕ್ಷೆಗೆ ವಿಶೇಷ ತರಬೇತಿ ಶಿಬಿರಗಳನ್ನು ನಡೆಸುವುದರೊಂದಿಗೆ ನಮ್ಮ ಭಾಗದವರೂ ಹೆಚ್ಚೆಚ್ಚು ಕೆಎಎಸ್ ಹಾಗೂ ಐಎಎಸ್ ಅಧಿಕಾರಿಗಳಾಗುವಂತೆ ಮಾಡುವುದೇ ಸಂಸ್ಥೆಯ ಬಹುಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಪರೀಕ್ಷೆಗೆ ನಾನಾ ಜಿಲ್ಲೆಗಳಿಂದ ಬಂದು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದು ಸಂತಸ ತಂದಿದೆ. ಧಾರವಾಡ ಬಿಟ್ಟರೇ ಉತ್ತರ ಕರ್ನಾಟಕದಲ್ಲಿ ಮತ್ತೊಂದು ವಿದ್ಯಾಕಾಶಿ ಎನ್ನುವಂತೆ ನಾಗರಬೆಟ್ಟದ ಆಕ್ಸ್‌ಫರ್ಡ್‌ ಪಾಟೀಲ್ಸ್ ಶಾಲೆ ಎಂಬುವಂತೆ ನಮ್ಮ ಸಂಸ್ಥೆ ಮಾಡಿದೆ. ಕಳೆದ ವರ್ಷ ಹೇಳಿದಂತೆ ನಮ್ಮ ಶಿಕ್ಷಣ ಸಂಸ್ಥೆ ೧೮೦ಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್‌ನಲ್ಲಿ ಸಾಧನೆ ಮಾಡಿದ್ದಾರೆ. ಇದು ನಮ್ಮ ಎಲ್ಲ ಶಿಕ್ಷಕ ವೃಂದದ ಫಲ ಎಂದರು.

ಶಿಕ್ಷಕ ಎಸ್.ಬಿ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಡಿ.ಮುಲ್ಲಾ, ಶಿವಾನಂದ ಮೇಟಿ, ಮಲ್ಲು ಸಿದರೆಡ್ಡಿ ಸಿಂಧನೂರ, ಮಹಾಂತೇಶ ಸಿದರೆಡ್ಡಿ, ಪಾಟೀಲ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಾದ ರಾಜಶೇಖರ ಹಿರೇಮಠ, ಶಿವರಾಜ ಗುರುರಾಜ್ ಕಣ್ಣೂರ್ ಪಾಟೀಲ, ರವಿ ಬಿರಾದಾರ, ಇಸ್ಮಾಯಿಲ್ ಮನಿಯಾರ, ದರ್ಶನಗೌಡ ಪಾಟೀಲ್, ಸಂದೀಪ ಘೋರ್ಪಡೆ, ಆನಂದ ನಾವಿ, ಸುನೀಲ ನಾಯಕ ಸೇರಿದಂತೆ ಇನ್ನಿತರರು ನಗದು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

---

೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಈ ವೇಳೆ ಜೂನಿಯರ್ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆಯಲ್ಲಿ ೪೦೦ಕ್ಕೂ ಅಧಿಕ ೫,೬,೭ ಹಾಗೂ ೧೦ ತರಗತಿ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ೧೦ನೇ ತರಗತಿ ಪ್ರವೇಶಕ್ಕೆ ಪ್ರಥಮ ಸ್ಥಾನವನ್ನು ಜೆ.ಎನ್.ವಿ ವಿಜಯಪುರ ಶಾಲೆಯ ಭರತ್ ಮಡಿಕೇಶ್ವರ, ದ್ವಿತೀಯ ಸ್ಥಾನವನ್ನು ಜಯಾ ಸಜ್ಜನ್, ತೃತೀಯ ಸ್ಥಾನವನ್ನು ಪವಿತ್ರಾ ಕೊಣ್ಣೂರ ಪಡೆದುಕೊಂಡು ನಗದು ಜೊತೆಗೆ ಶಿಷ್ಯವೇತನಕ್ಕೆ ಭಾಜನರಾದರು. ಅದರಂತೆ ೫ ತರಗತಿ ಪ್ರವೇಶಕ್ಕೆ ೫ ವಿದ್ಯಾರ್ಥಿಗಳು, ೬ ತರಗತಿ ಪ್ರವೇಶಕ್ಕೆ ೬ ವಿದ್ಯಾರ್ಥಿಗಳು, ೭ ತರಗತಿ ಪ್ರವೇಶಾತಿಗೆ ೩ ವಿದ್ಯಾರ್ಥಿಗಳು ಶಿಷ್ಯವೇತನದ ಹಾಗೂ ನಗದು ಬಹುಮಾನ ಪಡೆದುಕೊಂಡರು.

---

ಕೋಟ್‌

ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೀಟ್‌ನಲ್ಲಿ ಸಹಾಯ ಆಗುವ ನಿಟ್ಟಿನಲ್ಲಿ ೫ನೇ ತರಗತಿಯಿಂದಲೇ ಅದರ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಇಡೀ ಕರ್ನಾಟವೇ ನಮ್ಮ ಶಾಲೆಯತ್ತ ತಿರುಗುವಂತೆ ಇಲ್ಲಿನ ಶಿಕ್ಷಕರು ಮಾಡಿದ್ದಾರೆ. ಈ ವರ್ಷ ಕೂಡ ಈ ಶಿಕ್ಷಣ ಸಂಸ್ಥೆಯಿಂದ ೧೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್‌ಗೆ ಆಯ್ಕೆಯಾಗುವಂತಹ ಉತ್ಕರ್ಷ ಶಿಕ್ಷಣ ಮಾಡಿದೆ. ಇದು ನಮ್ಮ ಸಂಸ್ಥೆಯ ಸಾಧನೆಯಾಗಿದೆ.

-ಅಮೀತಗೌಡ ಪಾಟೀಲ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ