ಕೃಷಿಕ್-ನವೋದ್ಯಮ ಪೋಷಣ ಕೇಂದ್ರದಿಂದ 11 ತಂಡಗಳಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಿಗೆ ತರಬೇತಿ ನೀಡಲಾಗಿದೆ. ಅವುಗಳಲ್ಲಿ 139 ಸ್ಟಾರ್ಟ್ಅಪ್‌ಗಳು ಸಕ್ರಿಯವಾಗಿವೆ. ಒಟ್ಟು ₹ 14.5 ಕೋಟಿ ಅನುದಾನ ಶಿಫಾರಸು ಮಾಡಲಾಗಿದೆ.
ಧಾರವಾಡ:
ಕೃಷಿ ಕ್ಷೇತ್ರದಲ್ಲಿ ಅನೇಕ ಸವಾಲುಗಳಿದ್ದು, ಅವುಗಳಿಗೆ ಕೃಷಿ ನವೋದ್ಯಮಗಳು ಪರಿಹಾರ ನೀಡಬಲ್ಲವು ಎಂದು ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಹೇಳಿದರು.ಇಲ್ಲಿಯ ಕೃಷಿ ವಿವಿಯಲ್ಲಿ ನಡೆದ ಕೃಷಿ-ಉದ್ಯಮಶೀಲತೆ ಯೋಜನೆ ಅಡಿ ನಡೆದ ತರಬೇತಿ ಉದ್ಘಾಟಿಸಿದ ಅವರು, ಕೃಷಿ ಕ್ಷೇತ್ರದಲ್ಲಿ ತೀವ್ರಗತಿಯಲ್ಲಿ ಬದಲಾವಣೆ ನಡೆಯುತ್ತಿದೆ. ಹೊಸ ತಂತ್ರಜ್ಞಾನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಬೇಡಿಕೆಯನ್ನು ಕೃಷಿ ಸ್ಟಾರ್ಟ್ಅಪ್‌ಗಳು ಪೂರೈಸಲು ಸಾಧ್ಯವಿದೆ ಎಂದರು.
ಕೃಷಿ-ಉದ್ಯಮಶೀಲತೆ ತರಬೇತಿಗಾಗಿ ಒಟ್ಟು 28 ನೂತನ ಕೃಷಿ ನವೋದ್ಯಮಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗಿದೆ. ಈ ಯೋಜನೆಯಡಿ ನಾವೀನ್ಯತೆಯುಳ್ಳ ಸ್ಟಾರ್ಟ್ಅಪ್‌ಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವಿದೆ. ವಿನ್ಯಾಸ ಚಿಂತನೆ, ತಂತ್ರಜ್ಞಾನ ಸಿದ್ಧತೆ ಮಟ್ಟ, ವ್ಯವಹಾರ ಕಥನ ಕಲೆ, ಕನಿಷ್ಠ ಕಾರ್ಯನಿರ್ವಹಣೆಯ ಉತ್ಪನ್ನ, ಮಾರುಕಟ್ಟೆ ಹೊಂದಾಣಿಕೆ, ಮಾರುಕಟ್ಟೆಗೆ ಪ್ರವೇಶ ತಂತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಕ್ಷೇತ್ರ ಪರಿಣಿತರಿಂದ ತರಬೇತಿ ನೀಡಲಾಗಿದೆ ಎಂದರು.ಕೃಷಿಕ್-ನವೋದ್ಯಮ ಪೋಷಣ ಕೇಂದ್ರದ ಯೋಜನೆಯ ಮುಖ್ಯಸ್ಥ ಡಾ. ಎಸ್.ಎಸ್. ಡೊಳ್ಳಿ, ಈ ವರೆಗೆ ಕೃಷಿಕ್-ನವೋದ್ಯಮ ಪೋಷಣ ಕೇಂದ್ರದಿಂದ 11 ತಂಡಗಳಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಿಗೆ ತರಬೇತಿ ನೀಡಲಾಗಿದೆ. ಅವುಗಳಲ್ಲಿ 139 ಸ್ಟಾರ್ಟ್ಅಪ್‌ಗಳು ಸಕ್ರಿಯವಾಗಿವೆ. ಒಟ್ಟು ₹ 14.5 ಕೋಟಿ ಅನುದಾನ ಶಿಫಾರಸು ಮಾಡಲಾಗಿದೆ. ಸ್ಟಾರ್ಟ್ಅಪ್‌ಗಳಿಂದ ₹ 100 ಕೋಟಿಗೂ ಅಧಿಕ ಆದಾಯ ಮತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. 30 ಮಹಿಳಾ ನೇತೃತ್ವದ ಸ್ಟಾರ್ಟ್ಅಪ್‌ಗಳಿಗೆ ಬೆಂಬಲ, ಸುಮಾರು ಹತ್ತು ಲಕ್ಷ ರೈತರಿಗೆ ತಂತ್ರಜ್ಞಾನ ಪ್ರಸಾರ ಮಾಡಲಾಗಿದೆ. 40 ಪೇಟೆಂಟ್‌ಗಳು, 10ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳು ಹೆಚ್ಚುವರಿ ಬಾಹ್ಯ ನಿಧಿಯನ್ನು ಪಡೆದುಕೊಂಡಿವೆ ಎಂದರು.