ಸಾರಾಂಶ
ಆನಂದಪುರ ಕನ್ನಡ ಸಂಘದ 42ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿ ಮೆರವಣಿಗೆಗೆ ಮಾಜಿ ಜಿಪಂ ಸದಸ್ಯ ರತ್ನಾಕರ ಹೊನಗೋಡು, ಪ್ರಾಂಶುಪಾಲ ರವಿಶಂಕರ್ ಸೇರಿ ಅನೇಕರು ಇದ್ದರು.
ತಾಯಿ ಭುವನೇಶ್ವರಿ ಉತ್ಸವಕ್ಕೆ ರತ್ನಾಕರ ಹೊನಗೋಡ್ ಚಾಲನೆ ಕನ್ನಡಪ್ರಭ ವಾರ್ತೆ ಆನಂದಪುರ
ಪ್ರತಿಯೊಬ್ಬ ಕನ್ನಡಿಗನು ಕನ್ನಡ ಹಬ್ಬವನ್ನು ಮನೆ ಮನೆಯಲ್ಲಿ ಆಚರಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೊನಗೋಡ್ ಕೆರೆ ನೀಡಿದರು.ಶನಿವಾರ ಕನ್ನಡ ಸಂಘದ 42ನೇ ವರ್ಷದ ಕನ್ನಡ ರಾಜ್ಯೋತ್ಸವ ಹಿನ್ನೆಲೆ ತಾಯಿ ಭುವನೇಶ್ವರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ನಾಡಹಬ್ಬವನ್ನು ಪ್ರತಿಯೊಬ್ಬ ಕನ್ನಡಿಗರು ಸಂಭ್ರಮದಿಂದ ಆಚರಿಸಬೇಕು. ಕನ್ನಡ ನಾಡು, ನುಡಿ, ಜಲ, ಭಾಷೆಗೆ ಅನ್ಯಾಯವಾದಾಗ ವಿರೋಧಿಸಿ ಹೋರಾಡುವ ಶಕ್ತಿ ಕನ್ನಡಿಗರದಾಗಬೇಕು. 42 ವರ್ಷಗಳಿಂದ ಸಮಾಜ ಸೇವೆಯೊಂದಿಗೆ ಕನ್ನಡ ಹಬ್ಬವನ್ನು ಆಚರಿಸುತ್ತಿರುವ ಸಂದರ್ಭಗಳಲ್ಲಿ ಸ್ಥಳೀಯ ಗ್ರಾಮಡಳಿತ ಪ್ರತಿವರ್ಷವೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಕನ್ನಡ ಎಂದರೆ ಬರೀ ನುಡಿಯಲ್ಲ ಮುತ್ತಿನ ಮಣಿ ಸಾಲು. ಸರಳ ಸುಂದರವಾದ ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸುವ ಕರ್ತವ್ಯ ಕನ್ನಡಿಗರದು. ಕನ್ನಡ ನಾಡ ದೇವಿಯ ಹಬ್ಬವನ್ನು ವರ್ಷಪೂರ್ತಿ ಕನ್ನಡ ಸಂಘಗಳು ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್, ಕನ್ನಡ ಸಂಘದ ಅಧ್ಯಕ್ಷ ಪಿ.ಎನ್.ಚಂದ್ರು ಕುಮಾರ್, ಗೌರವಾಧ್ಯಕ್ಷ ರಾಜೇಂದ್ರ ಗೌಡ, ಮಾಜಿ ಅಧ್ಯಕ್ಷರಾದ ಕೆ.ಟಿ. ತಿಮ್ಮೇಶ್, ಕೆ.ನಾಗರಾಜ್, ಬೂದ್ಯಪ್ಪ, ಎನ್. ಉಮೇಶ್, ಜಗನ್ನಾಥ್, ಮಾಫಿರ್, ಸಂಘದ ಎಲ್ಲಾ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆಸಲಾಯಿತು.