ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರದಿಂದ ನಾನಾಸಾಹೇಬ ಪಾಟೀಲ ಅವರನ್ನು ಒಗ್ಗಟಿನಿಂದ ಎಲ್ಲರೂ ಕೂಡಿಕೊಂಡು ಗೆಲ್ಲಿಸಬೇಕು. ಚುನಾವಣೆಯನ್ನು ಗಂಭಿರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರದಿಂದ ನಾನಾಸಾಹೇಬ ಪಾಟೀಲ ಅವರನ್ನು ಒಗ್ಗಟಿನಿಂದ ಎಲ್ಲರೂ ಕೂಡಿಕೊಂಡು ಗೆಲ್ಲಿಸಬೇಕು. ಚುನಾವಣೆಯನ್ನು ಗಂಭಿರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಿವಿಮಾತು ಹೇಳಿದರು.

ಸ್ಥಳೀಯ ಚನ್ನಬಸವ (ಮಾರಿಹಾಳ) ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಸಭೆ ಆಗಮಿಸಿದ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರು ಹಾಗೂ ಕಾರ್ಯದರ್ಶಿ ಸೇರಿ ಒಟ್ಟಾರೇ ಶ್ರಮಿಸಿದರೆ ನಮ್ಮ ಅಭ್ಯರ್ಥಿ ನಾನಾಸಾಹೇಬ ಗೆಲುವು ಸುಲಭವಾಗಿರುತ್ತದೆ. 32 ಸೊಸೈಟಿಗಳಲ್ಲಿ 18 ರಿಂದ 20 ಸೊಸೈಟಿಯ ಮತದಾರರು ನಮ್ಮ ಅಭ್ಯರ್ಥಿಗೆ ಪರವಾಗಿ ಇದ್ದಾರೆಂಬ ವಿಶ್ಚಾಸವಿದೆ. ಪೂರ್ವ ಸಿದ್ಧತೆಯಲ್ಲಿರಬೇಕು. ನಮ್ಮ ಸಹಕಾರ, ಮಾರ್ಗದರ್ಶನ ಸದಾ ಇರುತ್ತದೆ. ಶಾಸಕರು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಶಾಸಕರಿಗೆ ಸೂಚಿಸಿದರು. ಸೊಸೈಟಿಯ ಎಲ್ಲ ಪದಾಧಿಕಾರಿಗಳು ಜೊತೆಗಿರುವಂತೆ ನೋಡಿಕೊಳ್ಳಬೇಕು. ಈ ಚುನಾವಣೆ ಶಾಸಕರ, ಸಚಿವರ ಮೇಲೆ ಏನೂ ಪರಿಣಾಮ ಬೀರುವುದಿಲ್ಲವೆಂದು ಹೇಳಿ ಈಗಾಗಲೇ ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ಮುಂದೆ ಇದನ್ನು ಮಾದರಿ ಕ್ಷೇತ್ರವನ್ನಾಗಿ ಯೋಜನೆ ಮಾಡುವ ಗುರಿ ಹೊಂದಿದೇವೆ ಎಂದರು.ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸಚಿವ ಸತೀಶ ಜಾರಕಿಹೊಳಿಯವರ ಅನುಮತಿ ಪಡೆದು ಅವರ ಮಾರ್ಗದರ್ಶನದಲ್ಲಿ ಎಲ್ಲರ ಒತ್ತಾಸೆಯ ಮೇರೆಗೆ ಸಹೋದರ ನಾನಾಸಾಹೇಬ ಪಾಟೀಲ ಅವರನ್ನು ಚುನಾವಣೆಗೆ ಅಭ್ಯಥಿಯನ್ನಾಗಿಸಿದ್ದೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರದೊಂದಿಗೆ ಗೆಲ್ಲಿಸುವ ಕೆಲಸವನ್ನು ಮಾಡಬೇಕು ಎಂದರು.ತಾಲೂಕಿನಲ್ಲಿರುವ ಕೆಲವು ಸೊಸೈಟಿಗಳಿಗೆ ಗುಡೌನವಿಲ್ಲ, ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ ಇವುಗಳಿಗೆ ಜನಪ್ರತಿನಿಧಿಗಳ ಸಹಕಾರ ಅವಶ್ಯಕವಾಗಿರುತ್ತದೆ. ಆದ್ದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲಾಗುವುದು. ನಮ್ಮಗೆ ಬೆನ್ನೆಲಬಾಗಿ ನಿಂತಿರುವ ಸಚಿವರಾದ ಸತೀಶ ಜಾರಕಿಹೊಳಿ ಅವರ ಜೊತೆ ನಿರಂತರವಾಗಿ ಇರುತ್ತೇನೆ ಎಂದರು.ಕಿತ್ತೂರು ಕ್ಷೇತ್ರದ ಅಭ್ಯರ್ಥಿ ನಾನಾಸಾಹೇಬ ಪಾಟೀಲ, ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಶಿವನಗೌಡ ಪಾಟೀಲ, ದೇವೇಂದ್ರ ಪಾಟೀಲ ಸೇರಿದಂತೆ ಮುಂತಾದವರು ಮಾತನಾಡಿದರು.ಪಟ್ಟಣ ಪಂಚಾಯತಿ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಫ್.ಜಕಾತಿ, ಶಂಕರ ಹೊಳಿ, ಹನೀಪ್ ಸುತಗಟ್ಟಿ, ಉದಯ ಇಂಗಳೆ, ಸುರೇಶ ಹೂಲಿಕಟ್ಟಿ, ಶೇಖರ ಯರಗೊಪ್ಪ, ಸಿ.ಆರ್.ಪಾಟೀಲ, ರಾಜೇಂದ್ರ ಇನಾಮದಾರ, ಸಾವಂತ ಕಿರಬನವರ, ಬಸವರಾಜ ಹಳೆಮನಿ, ಸುನೀಲ ಘಿವಾರಿ, ಚಂದ್ರಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು. ಅನೀಲ ಎಮ್ಮಿ ಸ್ವಾಗತಿಸಿದರು.