ಸಾರಾಂಶ
ತುರ್ವಿಹಾಳ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತದಾನ ಜಾಗೃತಿ ನಡೆಸಲಾಯಿತು.
ತುರ್ವಿಹಾಳ: ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತದಾನ ಜಾಗೃತಿ ನಡೆಸಲಾಯಿತು.
ವೈದ್ಯಾಧಿಕಾರಿ ಮಂಜುನಾಥ್ ಹಣೆಗೌಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಅತ್ಯಂತ ಮೌಲ್ಯಯುತ ಸಂಪತ್ತು ಎಂದರೆ ಮತದಾನದ ಹಕ್ಕು. ಅದನ್ನು ವ್ಯರ್ಥ ಮಾಡದೇ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದರು.ನಂತರ ಗೀತಾ ಹಿರೇಮಠ ಮಾತನಾಡಿ, ಪಟ್ಟಣದಲ್ಲಿ ಹೆಚ್ಚುತ್ತಿರುವ ಡೆಂಗಿ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಅಂಗನವಾಡಿ ಹಾಗೂ ಅಶಾ ಸಹಕರಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ, ಮಹೇಶ್ವರಿ ಎಪ್ ಡಿ ಎ, ಮೋದಿನ್ ಬಿ, ಭಾಗ್ಯ ಬಡಿಗೇರ ಪಿ ಎಚ್ ಸಿ ಒ, ಪರಮೇಶ್, ದುರ್ಗಾಮ್ಮ, ಹಸೀನಾ ,ಆಶಾ ಕಾರ್ಯ ಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.