ಪ್ರತಿಯೊಬ್ಬರಿಂದ ಕನ್ನಡ ಕಟ್ಟುವ ಕೆಲಸ ನಡೆಯಲಿ

| Published : Nov 11 2024, 01:01 AM IST

ಪ್ರತಿಯೊಬ್ಬರಿಂದ ಕನ್ನಡ ಕಟ್ಟುವ ಕೆಲಸ ನಡೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ನಾವೆಲ್ಲರು ನವೆಂಬರ್ ಕನ್ನಡಿಗರಾಗದೆ ನಂಬರ್ ಒನ್ ಕನ್ನಡಿಗರಾಗೋಣ, ನಾಡು, ನುಡಿ ನೆಲ ಜಲಕ್ಕೆ ಧಕ್ಕೆ ಬಂದಾಗ ಸಿಡಿದೇಳೋಣ

ನರಗುಂದ: ಕನ್ನಡ ನಾಡಿನಲ್ಲಿ ಕನ್ನಡ ಉಳಿಯಬೇಕೆಂದರೆ ಪ್ರತಿಯೊಬ್ಬರಿಂದ ಕನ್ನಡ ಕಟ್ಟುವ ಕೆಲಸ ಆಗಬೇಕೆಂದು ಕಸಾಪ ತಾಲೂಕಾಧ್ಯಕ್ಷ, ಉಪನ್ಯಾಸಕ ಪ್ರೊ. ಬಿ.ಸಿ.ಹನಮಂತಗೌಡ್ರ ಹೇಳಿದರು.

ಪಟ್ಟಣದ ಲಯನ್ಸ್ ಪಪೂ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರು ನವೆಂಬರ್ ಕನ್ನಡಿಗರಾಗದೆ ನಂಬರ್ ಒನ್ ಕನ್ನಡಿಗರಾಗೋಣ, ನಾಡು, ನುಡಿ ನೆಲ ಜಲಕ್ಕೆ ಧಕ್ಕೆ ಬಂದಾಗ ಸಿಡಿದೇಳೋಣ, ಕನ್ನಡ ನಮ್ಮ ಮೊದಲ ಆದ್ಯತೆಯಾಗಲಿ ಎಂದರು.

ಪ್ರಾ. ಎಸ್.ಜಿ. ಜಕ್ಕಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ.ಎಚ್.ಎ. ಮುದಿಯಪ್ಪನವರ ಅವರು, ಕರ್ನಾಟಕದ ಗತವೖಭವ, ಹಿರಿಮೆ-ಗರಿಮೆ, ಇತಿಹಾಸ ಸಂಸ್ಕೃತಿ, ಕನ್ನಡಿಗರ ಜೀವನ ಮೌಲ್ಯಗಳು ಹಾಗೂ ಕರ್ನಾಟಕದ ಏಕೀಕರಣದ ಇತಿಹಾಸ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ವೇಳೆ ಎಸ್.ಬಿ. ಭಜಂತ್ರಿ, ಬಿ.ವೈ. ಹಲಕುರ್ಕಿ, ರವಿ ಭೋಗಾರ, ಮಂಜು ಕರಬಸನ್ನವರ, ನಿರ್ಮಲಾ ಚಂದ್ರತ್ತನವರ, ಪುಷ್ಪಲತಾ ವೀರಾಪೂರ, ರಚನಾ ಪಾಟೀಲ ಸೇರಿದಂತೆ ಮುಂತಾದವರು ಇದ್ದರು. ಎಚ್.ವೈ. ಜೊತೆನ್ನವರ ಸ್ವಾಗತಿಸಿದರು. ಪ್ರೊ. ಹದ್ಲಿ ನಿರೂಪಿಸಿ ವಂದಿಸಿದರು.