ಅನ್ಯಭಾಷೆ ನಾಮಫಲಕಗಳ ತೆರವಿಗೆ ಮುಂದಾಗಲಿ: ಕರವೇ

| Published : Feb 02 2024, 01:04 AM IST

ಸಾರಾಂಶ

ನಾಡಿನ ನೆಲ, ಜಲ ರಕ್ಷಣೆಗೆ ಕರವೇ ಹೋರಾಟ ನಿರಂತರವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ ಹೇಳಿದರು. ವರ್ಷದ ಮೊದಲನೇ ಚಿಂತನ ಮಂಥನ, ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ವರ್ಷದ ಮೊದಲನೇ ಚಿಂತನ ಮಂಥನ ಹಾಗೂ ಪದಾಧಿಕಾರಿ ಆಯ್ಕೆ ಸಭೆ ನಡೆಯಿತು.

ಸಭೆ ಅಧ್ಯಕ್ಷತೆ ವಹಿಸಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ಕರವೇ ಸಂಘಟನೆ ನಾಡಿನಲ್ಲಿ ಕನ್ನಡ ನೆಲ, ಜಲ, ಸಂರಕ್ಷಣೆಗೆ ಎಡಬಿಡದೆ 25 ವರ್ಷಗಳಿಂದ ಹೋರಾಟ ಮಾಡುತ್ತಿದೆ. ನಾರಾಯಣಗೌಡರ ನೇತೃತ್ವದಲ್ಲಿ ಶುರುವಾದ ಈ ಸಂಘಟನೆ ಅನೇಕ ಜಿಲ್ಲೆಗಳಲ್ಲಿ ತಮ್ಮದೇ ಆದ ಕಾರ್ಯಕರ್ತರನ್ನು ಹೊಂದಿದ್ದು, ಅವರಿಗೆ ಕನ್ನಡ ದೀಕ್ಷೆ ನೀಡಿ ಕನ್ನಡ ಸ್ವಾಭಿಮಾನ ಬೆಳೆಸುತ್ತಾ ಬಂದಿದ್ದಾರೆ ಎಂದರು.

ಫೆ.28ರೊಳಗಾಗಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಅರೆಸರ್ಕಾರಿ ಸಂಸ್ಥೆ, ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ಮುಂತಾದವುಗಳಿಗೆ ಕನ್ನಡ ನಾಮಫಲಕ ಅಳವಡಿಸುವಂತೆ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.

ಜಾಗೃತಿ ಮೂಡಿಸುವ ಕೆಲಸವಾಗಬೇಕು ಧ್ವನಿವರ್ಧಕ ಮೂಲಕ, ಜಾಹಿರಾತು ಫಲಕಗಳ ಮೂಲಕವಾಗಲಿ ಸರ್ಕಾರಿ ಮತ್ತು ಅರೆಸರ್ಕಾರಿ ಸಂಸ್ಥೆ, ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ಎಚ್ಚರಿಸಬೇಕು. ಇದಾದರು ಎಚ್ಚೆತ್ತುಕೊಳ್ಳದಿದ್ದಲಿ, ಬೆಂಗಳೂರಿನಲ್ಲಿ ನಡೆದಂತಹ ಹೋರಾಟದ ರೀತಿಯಾಗಿ ಜಿಲ್ಲೆಯಾದ್ಯಂತ ಅನ್ಯಭಾಷೆ ನಾಮಫಲಕ ತೆರವುಗೊಳಿಸಲು ಮುಂದಾಗಬೇಕೆಂದು ಕಾರ್ಯಕರ್ತರಲ್ಲಿ ಕರೆ ನೀಡಿದರು. ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳೆ ಹೊಣೆ ಎಂದು ಎಚ್ಚರಿಸಿದರು.

ನೂತನ ಪದಾಧಿಕಾರಿಗಳು:

ಸಂತೋಷ್ ನಿರ್ಮಲಕರ್ (ಗೌರವಾಧ್ಯಕ್ಷ), ಸಿದ್ದುನಾಯಕ ಹತ್ತಿಕುಣಿ (ಪ್ರಧಾನ ಕಾರ್ಯದರ್ಶಿ, ಮಾಧ್ಯಮ ವಕ್ತಾರ), ಚೌಡಯ್ಯ ಬಾವೂರ, ಸಾಹೇಬಗೌಡ ನಾಯಕ, ಅರ್ಜುನ ಪವಾರ, ಸಿದ್ದರಾಮರೆಡ್ಡಿ ಚಿನ್ನಾಕಾರ್ (ಉಪಾಧ್ಯಕ್ಷರು), ಸಿದ್ದಪ್ಪ ಕೂಯಿಲೂರ, ವೆಂಕಟೇಶ (ಸಹ ಕಾರ್ಯದರ್ಶಿ), ವೆಂಕಟೇಶ ರಾಠೋಡ್, ಸಿದ್ದಪ್ಪ ಕ್ಯಾಸಪನಹಳ್ಳಿ, ಹಣಮಂತ ತೇಕರಾಳ, ಭೀಮುನಾಯಕ ಮಲ್ಲಿಬಾವಿ (ಸಂಘಟನಾ ಕಾರ್ಯದರ್ಶಿ), ಭೀಮರಾಯ ರಾಮಸಮುದ್ರ, ಯಮನಯ್ಯ ಗುತ್ತೇದಾರ (ಪ್ರಧಾನ ಸಂಚಾಲಕರು), ಚಂದ್ರಶೇಖರ ಗೋಪಾಳಪುರ (ಕಾನೂನು ಸಲಹೆಗಾರ), ಮಂಜುನಾಥ ರಾಂಪೂರಹಳ್ಳಿ, ಸಲೀಂ ಪಾಶಾ ಯರಗೋಳ, ಶರಣು ಅಂಗಡಿ ಹುಣಸಗಿ (ಸಂಚಾಲಕ), ವಿಶ್ವರಾಧ್ಯ ದಿಮ್ಮೆ (ಯುವ ಘಟಕ ಜಿಲ್ಲಾಧ್ಯಕ್ಷ, ಸಾಮಾಜಿಕ ಜಾಲತಾಣ ಪ್ರಧಾನ ಸಂಚಾಲಕ), ವಿಶ್ವರಾಜ ಹೊನಗೇರಾ (ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ) ಅಂಬ್ರೇಶ ಹತ್ತಿಮನಿ (ನಗರಾಧ್ಯಕ್ಷ), (ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ), ಹಣಮಂತ ನಾಯಕ ಖಾನಳ್ಳಿ, ಶರಣು ಸಾಹುಕಾರ ವಡ್ನಳ್ಳಿ, ಹಣಮಂತ ಅಚ್ಚೋಲವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಯಿತು. ವಿಸರ್ಜನೆಗೊಂಡ ಯಾದಗಿರಿ ಮತ್ತು ವಡಗೇರಾ ತಾಲೂಕಾಧ್ಯಕ್ಷ ಯಥಾ ಸ್ಥಿತಿ ಮುಂದುವರೆಸಲಾಯಿತು.

ಆರು ತಾಲೂಕಿನ ಅಧ್ಯಕ್ಷರಾದ ಮಲ್ಲು ಮಾಳಿಕೇರಿ, ಅಬ್ದುಲ್ ಚಿಗಾನೂರ, ಶರಣಬಸಪ್ಪ ಎಲ್ಹೇರಿ, ಅಬ್ದುಲ್ ಹಾದಿಮನಿ, ವೆಂಕಟೇಶ ಬೈರಿಮಡ್ಡಿ, ಶಿವಲಿಂಗ ಸಾಹುಕಾರ ಇತರರಿದ್ದರು.