ನಿಮ್ಮ ಸಾಧನೆ ಬಗ್ಗೆ ನಾಲ್ಕು ಜನ ಮಾತನಾಡುವಂತಾಗಲಿ

| Published : Sep 21 2024, 01:46 AM IST

ನಿಮ್ಮ ಸಾಧನೆ ಬಗ್ಗೆ ನಾಲ್ಕು ಜನ ಮಾತನಾಡುವಂತಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಕೇವಲ ಓದಿದರೆ ಸಾಲದು. ಓದಿದ ಮೇಲೆ ನಿಮ್ಮ ತಂದೆ ತಾಯಿ ನಿಮ್ಮ ಬಗ್ಗೆ ಸಮಾಜದಲ್ಲಿ ನಾಲ್ಕು ಜನಕ್ಕೆ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಸಾಧನೆ ಮಾಡಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ್ ವಾಸುದೇವ ತಿಳಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ವಿದ್ಯಾರ್ಥಿಗಳು ಕೇವಲ ಓದಿದರೆ ಸಾಲದು. ಓದಿದ ಮೇಲೆ ನಿಮ್ಮ ತಂದೆ ತಾಯಿ ನಿಮ್ಮ ಬಗ್ಗೆ ಸಮಾಜದಲ್ಲಿ ನಾಲ್ಕು ಜನಕ್ಕೆ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಸಾಧನೆ ಮಾಡಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ್ ವಾಸುದೇವ ತಿಳಿದರು.

ತಾಲೂಕಿನ ರಾಂಪುರ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಗ್ರಾಮ ಪಂಚಾಯಿತಿ ಅರಣ್ಯ ಇಲಾಖೆ ಸಹಯೋಗದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರದ ಉದ್ಘಾಟನೆ ಹಾಗೂ ಮಾತೆ ಹೆಸರಲ್ಲಿ ಒಂದು ವೃಕ್ಷ ಅಭಿಯಾನದಡಿಯಲ್ಲಿ ಸಸಿ ನೆಡುವ, ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಜಗತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ಅಂಗೈಯಲ್ಲಿ ಎಲ್ಲವನ್ನೂ ನೋಡುವಂತ ತಂತ್ರಜ್ಞಾನ ಬೆಳೆದಿದೆ. ಮೊಬೈಲ್ ಎಂಬ ಮಾಯಾ ಪೆಟ್ಟಿಗೆಯಲ್ಲಿ ಇಡೀ ಜ್ಞಾನ ಬಂಢಾರವೇ ಅಡಗಿದೆ. ಅದು ಉತ್ತಮ ರೀತಿಯಲ್ಲಿ ಸದ್ಭಳಕೆಯಾಗಬೇಕು. ವಿದ್ಯಾರ್ಥಿಗಳು ಸಾಧಿಸುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪರಿಸರಕ್ಕೆ ಒತ್ತಡ ಉಂಟಾಗುತ್ತಿದೆ. ಮರಗಿಡ ನಾಶದಿಂದ ಹಲವು ವೈಪರಿತ್ಯಗಳಿಗೆ ನಾವೇ ಕಾರಣವಾಗುತ್ತಿದ್ದೇವೆ. ವಿದ್ಯಾರ್ಥಿಗಳು ಜಾಗೃತರಾಗಬೇಕು. ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಪರಿಸರ ಸಂರಕ್ಷಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದು ಕರೆ ನೀಡಿದರು.

ಈ ವೇಳೆ ತಾಪಂ ಇ.ಒ ಹನುಮಂತಪ್ಪ ಮಾತನಾಡಿ, ಹಿಂದುಳಿದ ಪ್ರದೇಶದ ಈ ಭಾಗದಲ್ಲಿ ಕಾನೂನು ಸಲಹಾ ಕೇಂದ್ರ ಆರಂಭಗೊಂಡಿರುವುದು ಈ ಭಾಗದ ಜನತೆಗೆ ಅನುಕೂಲವಾಗಿದೆ. ಪ್ರತಿಯೊಬ್ಬರೂ ಇದರ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮನೆಗೊಂದು ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಸುತ್ತಲಿನ ಪರಿಸರ ಸ್ವಚ್ಛತೆ ಮಾಡಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕು ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್. ಆನಂದ್ ಮಾತನಾಡಿ, ಬಡವರಿಗೆ ಮತ್ತು ದೌರ್ಜನ್ಯಕ್ಕೊಳಗಾದ ಬಡವರಿಗೆ ನೆರವಾಗುವಲ್ಲಿ ಉಚಿತ ಕಾನೂನು ಸಲಹ ಕೇಂದ್ರವನ್ನು ಆರಂಭಿಸಲಾಗಿದೆ. ಕೇಂದ್ರದಲ್ಲಿ ಸಿಗುವಂತ ಸೌಲಭ್ಯಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.

ಈ ವೇಲೆ ಉಪಾಧ್ಯಕ್ಷೆ ಅನಿತಾ, ಸರ್ಕಾರಿ ವಕೀಲ ಮಹಮ್ಮದ್ ಶಂಶೀರ್ ಅಲಿ, ವಕೀಲರ ಸಂಘದ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕುಮಾರಪ್ಪ ಪಿಎಸ್ಐ ಮಹೇಶ್ ಹೊಸಪೇಟೆ, ಹಿರಿಯ ವಕೀಲರಾದ ಎಂ.ಎನ್. ವಿಜಯ ಲಕ್ಷ್ಮಿ, ವಿ.ಜಿ. ಪರಮೇಶ್ವರಪ್ಪ, ರಾಜಶೇಖರ ನಾಯಕ, ಮುಖ್ಯ ಲೆಕ್ಕಾಧಿಕಾರಿ ಪ್ರಭು, ಪಿಡಿಓ. ಗುಂಡಪ್ಪ, ಉಪವಲಯ ಅರಣ್ಯಾಧಿಕಾರಿ ಮಾರುತಿ ಪ್ರಸಾದ್ ಇದ್ದರು.