ಸಾರಾಂಶ
ಆದರ್ಶ ನಗರ ಇಟ್ಟಿಗೆ ಸೀಗೋಡಿನ ವಿದ್ಯಾಗಣಪತಿ ಸೇವಾ ಸಮಿತಿ ಗಣೇಶೋತ್ಸವ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಹಿಂದೂಗಳ ಪವಿತ್ರ ಹಬ್ಬ ಗಣೇಶೋತ್ಸವ ಕೇವಲ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಸೀಮಿತವಾಗದೆ ಜ್ಞಾನ ಸಂಪಾದನೆ ವೇದಿಕೆಯಾಗಬೇಕು ಎಂದು ಎನ್.ಆರ್.ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು. ಆದರ್ಶ ನಗರ ಇಟ್ಟಿಗೆ ಸೀಗೋಡಿನ ವಿದ್ಯಾಗಣಪತಿ ಸೇವಾ ಸಮಿತಿ ಗಣೇಶೋತ್ಸವದಲ್ಲಿ ತಾಲೂಕು ಕಸಾಪ ಸಹಯೋಗದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ಹಾಗೂ ಗಾದೆ, ಒಗಟು ಹೇಳುವ ಸ್ಪರ್ಧೆಯಲ್ಲಿ ಮಾತನಾಡಿದರು.ಗಣೇಶೋತ್ಸವದಲ್ಲಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಹಣ ವಿನಿಯೋಗಿಸದೆ ಜ್ಞಾನದ ಬುತ್ತಿ ತುಂಬುವ ಕೆಲಸವಾಗಬೇಕು. ಈ ಹಿಂದೆ ಸಂಘಟನೆ ದೃಷ್ಟಿಯಿಂದ ಆರಂಭಿಸಿದ್ದ ಗಣೇಶೋತ್ಸವ ಇಂದು ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ವಿವಿಧ ವರ್ಗದವರಿಗೆ ವೇದಿಕೆ ದೊರೆಯುತ್ತಿದೆ. ಇಂದು ಕಸಾಪ ಸಾರ್ವಜನಿಕ ಗಣೇಶೋತ್ಸವದ ವೇದಿಕೆಗೆ ಪಾದಾರ್ಪಣೆ ಮಾಡಿ ಹಳ್ಳಿ ಗಳಲ್ಲಿಯೂ ಸಾಹಿತ್ಯ, ಸಂಸ್ಕೃತಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ ಮಾತನಾಡಿ, ಗಣೇಶೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಧಾರ್ಮಿಕ ಶ್ರದ್ಧೆ, ಭಕ್ತಿ, ಸಾಂಸ್ಕೃತಿಕ ಕಾರ್ಯಕ್ರಮದ ಮನರಂಜನೆ ನೀಡುವುದ ರೊಂದಿಗೆ ಜ್ಞಾನ ತುಂಬುವ ಕೆಲಸ ಮಾಡಲಾಗುತ್ತಿದೆ. ತಾಲೂಕು ಕಸಾಪ ಘಟಕ ಇದಕ್ಕೆ ಕೈ ಜೋಡಿಸಿ ರುವುದು ಶ್ಲಾಘನೀಯ ಎಂದರು.ವಿದ್ಯಾಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ರವಿಕುಮಾರ್, ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಉದಯ್ ಗಿಲ್ಲಿ, ಪ್ರಮುಖರಾದ ಕೆ.ಪ್ರಶಾಂತ್‌ಕುಮಾರ್, ಜಗದೀಶ್, ಹರೀಶ್, ಲವಕುಶ, ಶಿವಕುಮಾರ್ ಮತ್ತಿತರರು ಹಾಜರಿದ್ದರು.೨೯ಬಿಹೆಚ್‌ಆರ್ ೨:ಆದರ್ಶ ನಗರ ಇಟ್ಟಿಗೆ ಸೀಗೋಡಿನ ವಿದ್ಯಾಗಣಪತಿ ಸೇವಾ ಸಮಿತಿ ಗಣೇಶೋತ್ಸವದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಪೂರ್ಣೇಶ್, ಕಾರ್ತಿಕ್ ಕಾರ್‌ಗದ್ದೆ, ರವಿಕುಮಾರ್, ಉದಯ್, ಪ್ರಶಾಂತ್‌ಕುಮಾರ್ ಇದ್ದರು.