ಸಾರಾಂಶ
ಸೊರಬ: ಹಲವು ಕಾರಣಗಳಿಂದ ವಿದ್ಯಾರ್ಥಿನಿಯರ ಸ್ವರಕ್ಷಣೆಗೆ ಕರಾಟೆ ಅವಶ್ಯ. ದೇಹ ಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಹಾಗೂ ಹಿಂಜರಿಕೆಯನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ವೃದ್ಧಿಸುವಲ್ಲಿ ಕರಾಟೆಯಂತಹ ಸಮರ ಕಲೆಯನ್ನು ಕಲಿಯಬೇಕು ಎಂದು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಎಚ್.ರತ್ನಮ್ಮ ಕರೆ ನೀಡಿದರು.ತಾಲೂಕಿನ ಸಮೀಪದ ಕೆಳದಿ-ಬಂದಗದ್ದೆ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘಗಳ ಸಹಕಾರದಲ್ಲಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಕರಾಟೆ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದು ಕರಾಟೆ ಪ್ರಪಂಚದಾದ್ಯಂತ ಜನಪ್ರಿಯ ಕಲೆಯಾಗಿದ್ದು, ಹೆಣ್ಣು ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಮರ್ಥ್ಯ ಹೊಂದಲು ಕರಾಟೆ ತರಬೇತಿ ಸಹಕಾರಿಯಾಗಿದೆ. ಕಲುಷಿತಗೊಳ್ಳುತ್ತಿರುವ ಸಮಾಜದಿಂದ ಸ್ವರಕ್ಷಣೆ ಪಡೆಯಲು ವಿದ್ಯಾರ್ಥಿನಿಯರಿಗಾಗಿ ಸರ್ಕಾರದಿಂದ ಆಯೋಜಿಸಿರುವ ಇಂಥಹ ಕರಾಟೆ ಸಮರ ಕಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದರು.ಇದೇ ವೇಳೆ ವಿದ್ಯಾರ್ಥಿನಿಯರು ಕರಾಟೆ ಪ್ರದರ್ಶನ ನೀಡಿದರು. ಬಳಿಕ ಶಾರದಾ ಪೂಜೆ ಹಾಗೂ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಜರುಗಿತು.ತರಬೇತುದಾರ ಆಕಾಶ್ ಶಿಕ್ಷಕಿಯರಾದ ಎಂ.ಎಚ್.ಗೀತಾಂಜಲಿ, ಸಾವಿತ್ರಿ, ಕೆ.ವಿನೋದ, ಶಿಕ್ಷಕರಾದ ಗುರುರಾಜ, ಆನಂದ್, ಶ್ರೀನಿವಾಸ್, ಚೇತನ ದಾಸರ್, ಧರ್ಮರಾಜ್, ಎಚ್.ಆರ್.ಲಕ್ಷ್ಮಿ, ನಿಲಯ ಪಾಲಕ ಟಿ.ವೈ.ವಿನಯ್, ರೂಪ ಸೇರಿದಂತೆ ಕಚೇರಿ ಸಿಬ್ಬಂದಿ ಹಾಜರಿದ್ದರು.