ಸಾರಾಂಶ
ದೇಶಕ್ಕಾಗಿ ತ್ಯಾಗ ಬಲಿದಾನಗೈದ ಗಣ್ಯರನ್ನು ಸ್ಮರಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ನಾಗರಾಜು ಹೇಳಿದರು.
ಕೊಳ್ಳೇಗಾಲ: ದೇಶಕ್ಕಾಗಿ ತ್ಯಾಗ ಬಲಿದಾನಗೈದ ಗಣ್ಯರನ್ನು ಸ್ಮರಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ನಾಗರಾಜು ಹೇಳಿದರು.
ಪಟ್ಟಣದಲ್ಲಿ ಅಯೋಜಿಸಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೋರಾಟಗಾರರ ತ್ಯಾಗ ಪರಿಶ್ರಮದಿಂದ ನಾವು ಸ್ವತಂತ್ರರಾಗಿದ್ದೇವೆ. ಅವರ ತತ್ಪಾದರ್ಶಗಳನ್ನು ಕಿಂಚಿತ್ತಾದರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ರಾಷ್ಟ್ರ ಸಂರಕ್ಷಣಾ ಪರಿಷತ್ತಿನ ರಾಜ್ಯ ಅಧ್ಯಕ್ಷ ಟಿಎಸ್ ರಾಮಕೃಷ್ಣ ಮಾತನಾಡಿ, ಮಕ್ಕಳು ದೇಶ ಪ್ರೇಮಿಗಳಾಗಬೇಕು ಎಂದರು. ಮುಖ್ಯಶಿಕ್ಷಕ ಶ್ರೀಕಾಂತ್ ಮಾತನಾಡಿ, ಮಕ್ಕಳು ಭವ್ಯ ಭಾರತ ಪ್ರಜೆಗಳಾಗಬೇಕು, ಸಂಸ್ಕಾರಯುತ ಶಿಕ್ಷಣ ಪಡೆದು, ಸಾರ್ಥಕ ಜೀವನ ನಡೆಸುವಂತಾಗಬೇಕು ಎಂದರು.