ಸಾರಾಂಶ
೫ನೇ ತರಗತಿಯಿಂದ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗ್ರಾಪಂ ಸೇವೆಗಳು ಹಾಗೂ ಅಂಚೆ ಕಚೇರಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಮಾಹಿತಿ ಹಾಗೂ ಅರಿವು ನೀಡಲಾಯಿತು.
ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಶಾಲೆಯಲ್ಲಿ ನೀಡುವ ಪಠ್ಯ ಪುಸ್ತಕಗಳ ಜ್ಞಾನದ ಜೊತೆಗೆ ದಿನನಿತ್ಯದ ಸಾಮಾಜಿಕ ಚಟುವಟಿಕೆಗಳ ಅರಿವು ಮತ್ತು ಜ್ಞಾನ ಬಹಳ ಅವಶ್ಯ ಎಂದು ಸೂಲಿಬೆಲೆ ನ್ಯೂ ಆಕ್ಸ್‌ಪರ್ಡ್ ಶಾಲೆಯ ಮುಖ್ಯಶಿಕ್ಷಕಿ ರಾಧ ಹೇಳಿದರು.ಸೂಲಿಬೆಲೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಕ್ಕೆ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯ ಚಟುವಟಿಕೆಗಳು ಹಾಗೂ ಬ್ಯಾಂಕಿನ ವ್ಯವಸ್ಥೆ, ಸಾಲ ಸೌಲಭ್ಯಗಳು ಮತ್ತು ವಸೂಲಾತಿಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಒದಗಿಸಲಾಯಿತು.
೫ನೇ ತರಗತಿಯಿಂದ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗ್ರಾಪಂ ಸೇವೆಗಳು ಹಾಗೂ ಅಂಚೆ ಕಚೇರಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಮಾಹಿತಿ ಹಾಗೂ ಅರಿವು ನೀಡಲಾಯಿತು.ಸೂಲಿಬೆಲೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾನೂನು ಕ್ರಮಗಳ ಬಗ್ಗೆ ಹಾಗೂ ಗ್ರಾಪಂ ಕಚೇರಿಗೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕರಿಗೆ ಸಿಗುವ ಸೇವೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡರು, ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ, ಅಂಚೆ ಕಚೇರಿ, ಸೂಲಿಬೆಲೆ ಸಹಕಾರ ಬ್ಯಾಂಕ್‌ಗೆ ಭೇಟಿ ನೀಡಿ ರೈತರಿಗೆ ದೊರೆಯುವ ಸಾಲಗಳು ಹಾಗೂ ರಿಯಾಯಿತಿಗಳು ಸರ್ಕಾರದ ಸಹಾಯಧನ ಮತ್ತು ಪಡಿತರ ವಿತರಣೆ, ರಸಗೊಬ್ಬರ ವಿತರಣೆ ಸೇರಿ ರೈತಾಪಿ ವರ್ಗದ ಶ್ರೆಯೋಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರಣೆ ಪಡೆಯಲಾಯಿತು.
ಶಾಲಾ ಅಧ್ಯಕ್ಷೆ ಸುಮಲತಾ ನಾಗೇಶ್, ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ಲೆಕ್ಕಿಗ ರಂಗಸ್ವಾಮಿ, ಸಹಕಾರ ಬ್ಯಾಂಕ್ ಸಿಇಒ ಶ್ರೀನಿವಾಸಮೂರ್ತಿ, ಲೆಕ್ಕಿಗ ಜಿ.ಎಂ.ನಾಗೇಶ್, ಲೀಲಾವತಿ, ಅನುಪಮ, ಭಾಗ್ಯ, ನಾರಾಯಣಸ್ವಾಮಿ, ಯಶಸ್ವಿನಿ, ಸಹನಾ, ವನುಜ, ಶಿಲ್ಪಾ, ನಾರಾಯಣಸ್ವಾಮಿ, ಸೌಮ್ಯ, ಗಗನ, ಲಕ್ಷ್ಮೀ ಇದ್ದರು.