ಜೆಡಿಎಸ್‌ ಅಭ್ಯರ್ಥಿಗಳನ್ನು ಘೋಷಿಸುವಾಗ ಯೋಚಿಸಲಿ

| Published : Jul 28 2025, 12:30 AM IST

ಸಾರಾಂಶ

ಅವರವರ ಪಕ್ಷದ ಅಭ್ಯರ್ಥಿಗಳ ಪರ ಮಾತನಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ವಿಧಾನಸಭಾ ಚುನಾವಣೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಎನ್‌ಡಿಎ ಅಭ್ಯರ್ಥಿಯಾಗಿ ಸೀಕಲ್ ರಾಮಚಂದ್ರಗೌಡ ಅಥವಾ ಈ ಕ್ಷೇತ್ರದ ಶಾಸಕ ರವಿಕುಮಾರ್ ಯಾರೂ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಅವರೇ ಹೇಳಿದಂತೆ ಬಿಜೆಪಿಯ ಸೀಕಲ್ ರಾಮಚಂದ್ರಗೌಡ ಮುಂದಿನ ಅಭ್ಯರ್ಥಿ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಎನ್‌ಡಿಎ ಅಭ್ಯರ್ಥಿಗಳನ್ನು ಘೋಷಿಸುವಾಗ ಹಿಂದು ಮುಂದು ಯೋಚಿಸಿ ಮಾತನಾಡಬೇಕು ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರಿಗೆ ಕೋಲಾರದ ಮಾಜಿ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಸಿದರು.

ತಾಲೂಕಿನ ಸಾದಲಿ ಮತ್ತು ಬಶೆಟ್ಟಹಳ್ಳಿ ಹೋಬಳಿ ಮಟ್ಟದ ದಿಬ್ಬೂರಹಳ್ಳಿ ಗ್ರಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಮತ್ತು ಸಂಘಟನಾ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸೀಕಲ್ ರಾಮಚಂದ್ರಗೌಡ ಅಭ್ಯರ್ಥಿ

ಅವರವರ ಪಕ್ಷದ ಅಭ್ಯರ್ಥಿಗಳ ಪರ ಮಾತನಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ವಿಧಾನಸಭಾ ಚುನಾವಣೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಎನ್‌ಡಿಎ ಅಭ್ಯರ್ಥಿಯಾಗಿ ಸೀಕಲ್ ರಾಮಚಂದ್ರಗೌಡ ಅಥವಾ ಈ ಕ್ಷೇತ್ರದ ಶಾಸಕ ರವಿಕುಮಾರ್ ಯಾರೂ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಅವರೇ ಹೇಳಿದಂತೆ ಬಿಜೆಪಿಯ ಸೀಕಲ್ ರಾಮಚಂದ್ರಗೌಡ ಅವರೇ ಮುಂದಿನ ಎಂಎಲ್ಎ ಅಭ್ಯರ್ಥಿ ಎಂದು ಮುನಿಸ್ವಾಮಿ ಹೇಳಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಗಿಡ ಕಿತ್ತುಹಾಕಿ

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ದೇಶದಲ್ಲೇ ಅಲ್ಲೋ ಇಲ್ಲೋ ಒಂದೊಂದು ಸ್ಥಾನ ಇದ್ದ ಬಿಜೆಪಿ ಇಂದು ಇಡೀ ದೇಶವನ್ನೇ ಆವರಿಸಿದೆ. ಅಲ್ಲೋಂದು ಿಲ್ಲೊಂದು ಕಾಂಗ್ರೆಸ್ ಗಿಡ ಇದೆ. ಕಾಂಗ್ರೆಸ್ ಗಿಡವನ್ನು ಕಿತ್ತಾಕುವಂತಹ ಕೆಲಸ ಮಾಡಬೇಕಾಗಿದೆ. ಅದರಂತೆ ಶಿಡ್ಲಘಟ್ಟದಲ್ಲೂ ಸಹ ಕಾಂಗ್ರೆಸ್ ಗಿಡವನ್ನು ಕಿತ್ತಾಕುವಂತಹ ಕೆಲಸ ಮಾಡಬೇಕಿದೆ. ಬಿಜೆಪಿಯನ್ನು ಬೂತ್ ಮಟ್ಟದಿಂದ ಪ್ರತಿಯೊಬ್ಬರೂ ಸಂಘಟನೆ ಮಾಡಬೇಕೆಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ರಾಜಣ್ಣ, ಗ್ರಾಮಾಂತರ ಮಂಡಲಾಧ್ಯಕ್ಷ ಸೀಕಲ್ ಆನಂದಗೌಡ, ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರಗೌಡ,ಆನೆಮಡಗು ಮುರಳಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಮುರಳೀಧರ್, ಅರಿಕೆರೆ ಮುನಿರಾಜು, ದಿಬ್ಬೂರಹಳ್ಳಿ ರಾಜಣ್ಣ,ಪ್ರಸಾದ್ ರೆಡ್ಡಿ, ಶಿವಾರೆಡ್ಡಿ, ಸಾದಲಿ ತಿಪ್ಪಣ್ಣ, ಎ.ಜೆ ನಾರಾಯಣಸ್ವಾಮಿ, ಸುಭ್ರಮಣಿ,ವೈಎಂ ವೆಂಕಟೇಶ್, ನಾಗರಾಜ್, ವೆಂಕಟರಾಮರೆಡ್ಡಿ, ಸೋಮಶೇಖರ್‌ ಉಪಸ್ಥಿತರಿದ್ದರು.