ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ವಕೀಲ ವೃತ್ತಿ ಅತ್ಯಂತ ಘನತೆಯ ವೃತ್ತಿಯಾಗಿದ್ದು, ವಕೀಲರು ವೃತ್ತಿ ಪಾವಿತ್ರ್ಯತೆ ಕಾಯ್ದುಕೊಳ್ಳಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ. ಕೆ. ನಾಗೇಶ ಮೂರ್ತಿ ತಿಳಿಸಿದರು.ವಕೀಲರ ಸಂಘ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುವ ಜತೆಗೆ ಸಾರ್ವಜನಿಕ ಹಕ್ಕುಗಳ ರಕ್ಷಣೆಯನ್ನೂ ವಕೀಲರು ಮಾಡಬೇಕಿದೆ. ವಕೀಲರು ಎಲ್ಲ ವಿಷಯಗಳ ಕುರಿತು ಜ್ಞಾನ ಹೊಂದಲು ನಿರಂತರ ಅಧ್ಯಯನ ನಡೆಸಬೇಕು ಎಂದರು.
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್. ಎಲ್. ವಿಶಾಲ್ ರಘು ಮಾತನಾಡಿ, ಜನಸಾಮಾನ್ಯರು ಹಾಗೂ ಕಕ್ಷಿದಾರರು ವಕೀಲರ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದಾರೆ, ಇದಕ್ಕೆ ಚ್ಯುತಿ ಬರದಂತೆ ವಕೀಲರು ಕರ್ತವ್ಯ ನಿರ್ವಹಿಸಬೇಕು, ವೃತ್ತಿ ಜೀವನದ ಒತ್ತಡದಲ್ಲಿ ಬಹಳಷ್ಟು ವಕೀಲರು ಆನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ವಕೀಲರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ವಕೀಲರ ಕಲ್ಯಾಣ ನಿಧಿಗೆ ನಿಯಮಿತವಾಗಿ ವಂತಿಕೆಯನ್ನು ಪಾವತಿಸಿ ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಮ್. ವೈ.ಪ್ರಶಾಂತ್ ಕುಮಾರ್ ಮಾತನಾಡಿದರು. 25 ವರ್ಷಗಳ ವೃತ್ತಿ ಜೀವನ ಪೂರ್ಣಗೊಳಿಸಿದ ವಕೀಲರಾದ ಆರ್. ಕೆ. ಮಂಜುನಾಥ್ ಮತ್ತು ಬಿ.ಸಿ.ರಾಜೇಶ್ ಅವರನ್ನು ಗೌರವಿಸಲಾಯಿತು. ವಕೀಲರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆರ್. ಚಂಪಾಶ್ರೀ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಂ.ರಘು, ವಕೀಲರ ಸಂಘದ ಕಾರ್ಯದರ್ಶಿ ಕೆ.ಆರ್. ಶ್ರೀಧರ್, ಖಜಾಂಚಿ ಎಂ. ವಿ. ಸೋಮಶೇಖರ್,ವಖೀಲರಾದ ಕೆ.ಆರ್. ವಿಜಯಕುಮಾರ್, ಎ.ಆರ್. ಜನಾರ್ಧನ ಗುಪ್ತ, ಜಿ.ಜಿ. ರವಿ, ಶ್ರೀವತ್ಸ್ , ಶಂಕರಯ್ಯ ಉಪಸ್ಥಿತರಿದ್ದರು.
--------