ಸಾರಾಂಶ
- ನಗರದ ಕನ್ನಡ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ, ಮಹಿಳಾ,ಯುವ ಘಟಕಗಳ ಉದ್ಘಾಟನೆ, ಪದಗ್ರಹಣಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನದಿಗಳು ಉಗಮಗೊಂಡು ಸಣ್ಣ ತೊರೆಗಳಾಗಿ ಕಡಲತೀರಕ್ಕೆ ಸೇರು ವಂತೆ, ದಲಿತ ಸಾಹಿತ್ಯ ಚಟುವಟಿಕೆಗಳು ಹಂತ ಹಂತವಾಗಿ ನಾಡಿನಾದ್ಯಂತ ಪಸರಿಸಬೇಕು. ಬೃಹದಾಕಾರವಾಗಿ ಬೆಳೆದು ಸಾಹಿತ್ಯದ ಕಡಲಿನತ್ತ ಸಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ, ಮಹಿಳಾ ಹಾಗೂ ಯುವ ಘಟಕಗಳ ಉದ್ಘಾಟನಾ ಹಾಗೂ ಪದಗ್ರಹಣ ಕಾರ್ಯಕ್ರಮ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸಾಹಿತ್ಯಾತ್ಮಕ ಚಟುವಟಿಕೆ ಗಟ್ಟಿತನದಿಂದ ಹೊರಹೊಮ್ಮಬೇಕು. ಸ್ವಾರ್ಥ ಅಥವಾ ಸಂಕುಚಿತ ಭಾವನೆಯಿಂದ ಸಾಹಿತ್ಯ ಹೆಚ್ಚು ಕಾಲಗಳು ಉಳಿಯುವುದಿಲ್ಲ. ಬದಲಾಗಿ ಮನಸ್ಸಿನ ಒಡನಾಳ ಧ್ವನಿಯಾಗಿ ಬೆಳಕು ಚೆಲ್ಲುವ ಜೊತೆಗೆ ಸರಿಯಾದ ಮಾರ್ಗದಲ್ಲಿ ಸಾಗಿಸಿದರೆ ಶಾಶ್ವತವಾಗಿ ಮನ ದಾಳದಲ್ಲಿ ನೆಲೆಯೂರಲು ಸಾಧ್ಯ ಎಂದರು.ಸಾಹಿತ್ಯ ಲೋಕದಲ್ಲಿ ಸದ್ವಿಚಾರ, ಸದುದ್ದೇಶದಿಂದ ಕೂಡಿದಾಗ ಚಿರಕಾಲ ಉಳಿಯುತ್ತದೆ. ರಾಷ್ಟ್ರದಲ್ಲಿನ ರಾಜಮಹಾರಾಜರು, ಶ್ರೀಮಂತರು, ಹಣ ಗಳಿಸಿದವರನ್ನು ಜಗತ್ತು ಮರೆತಿದೆ. ಆದರೆ ಸಮಾಜಮುಖಿ ಕರ್ತ ವ್ಯ ನಿರ್ವಹಿಸಿದ ಅಂಬೇಡ್ಕರ್, ಬಸವಣ್ಣ, ಶ್ರೀರಾಮರನ್ನು ಇಂದಿಗೂ ನೆನೆಯು ವಂಥ ಕೆಲಸವಾಗಲು ಅವರ ಕೊಡುಗೆಗಳೇ ಮುಖ್ಯ ಕಾರಣ ಎಂದರು.ಜಾನಪದಗಳಲ್ಲಿ ಸೃಷ್ಟಿಸಿದವರ ಹೆಸರಿಲ್ಲ. ಕೇವಲ ಒಬ್ಬರಿಂದ ಒಬ್ಬರಿಗೆ ಹರಡಿ, ಸಮಾಜಕ್ಕೆ ಪೂರಕವಾದ ಕಾರಣ ಪ್ರಸ್ತುತ ಕಾಲದಲ್ಲಿ ಪ್ರಚಲಿತ ದಲ್ಲಿದೆ. ಸಾಹಿತ್ಯ ಗಟ್ಟಿಕಾಳುಗಳಾಗಿ ಭಿತ್ತಬೇಕು. ಸ್ವಾರ್ಥದಿಂದ ಕೂಡಿದರೆ ವಿಸ್ತಾರವಾಗಿ ಮುಂಚೂಣಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಸಾಹಿತ್ಯ ಸರ್ವರು ಒಪ್ಪುವಂಥ ರೀ ತಿಯಲ್ಲಿ ರಚನೆಗೊಂಡರೆ ಸ್ಪೂರ್ತಿ ಪಡೆದುಕೊಳ್ಳಲಿದೆ ಎಂದರು.ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ದಲಿತ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ದಾಟಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳ ತಂಡ ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಸಾಹಿತ್ಯ ಪರಿಷತ್ತಿನ ಕಾ ರ್ಯಕ್ರಮ ರೂಪಿಸಿ ಆಸಕ್ತಿ, ಅಭಿರುಚಿ ಮೂಡಿಸಿದರೆ, ಭವಿಷ್ಯದಲ್ಲಿ ಸಾಹಿತ್ಯಾತ್ಮಕ ಸಂಸ್ಕೃತಿ ಉಳಿಸಲು ಸಾಧ್ಯ ವಾಗಲಿದೆ ಎಂದರು.ದಸಾಪ ಜಿಲ್ಲಾಧ್ಯಕ್ಷ ಕೆ.ಎನ್.ಶಾಂತಮೂರ್ತಿ ಮಾತನಾಡಿ ಜಿಲ್ಲೆಯ ದಲಿತ ಸಾಹಿತಿಗಳು, ಕವಿಗಳು, ಬರಹಗಾರರು, ಲೇಖಕರು, ಕಲಾವಿದರನ್ನು ಮೇಲೆತ್ತುವ ಸಲುವಾಗಿ ವೇದಿಕೆ ಸೃಷ್ಟಿಸಿ ಅವಕಾಶ ಕಲ್ಪಿಸಲು ಸನ್ನದ್ಧವಾಗಿದೆ. ಜೊತೆಗೆ ಸದ್ಯದಲ್ಲೇ ಜಿಲ್ಲಾ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಆಯೋ ಜಿಸಿ ಪ್ರೋತ್ಸಾಹಿಸಲಾಗುವುದು ಎಂದರು.
ಐಡಿಎಸ್‌ಜಿ ಪ್ರಾಂಶುಪಾಲೆ ಪುಷ್ಪಭಾರತಿ ಮಾತನಾಡಿ ಸಾಹಿತ್ಯ ಜ್ಞಾನದ ಹಸಿವು ನೀಗಿಸಲು ಶ್ರೇಷ್ಠ ಬರಹಗಾರರಾದ ಡಾ.ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಮುನಿವೆಂಕಟಪ್ಪನವರ ಕೃತಿಗಳನ್ನು ಅಭ್ಯಾಸಿಸಬೇಕು. ೧೨ನೇ ಶತಮಾನ ಸಾಹಿತ್ಯದ ತಾಯಿಬೇರು ಗಟ್ಟಿಗೊಂಡರೆ ಮಾತ್ರ ಹೆಮ್ಮರವಾಗಿ ಬೆಳೆದು ಭವಿಷ್ಯದ ಪ್ರಜೆಗಳಿಗೆ ಉಪಯೋಗವಾಗಲಿದೆ ಎಂದರು.ದಸಾಪ ನೂತನ ಜಿಲ್ಲಾ ಘಟಕ : ಕೆ.ಎನ್.ಶಾಂತಮೂರ್ತಿ (ಅಧ್ಯಕ್ಷ), ಗೌರವಾಧ್ಯಕ್ಷ ಆರ್. ನರಸಿಂಪ್ಪ, ಧರಗುಣಿ ಮಂಜುನಾಥ್ (ಪ್ರ.ಕಾರ್ಯದರ್ಶಿ), ಜಯಣ್ಣ (ಗೌರವ ಸಲಹೆಗಾರ), ಎಚ್.ಸಿ. ಸೋಮಶೇಖರ್ (ಕೋಶಾಧ್ಯಕ್ಷ), ಮಂಜುನಾಥ್ (ಸಹ ಕಾರ್ಯದರ್ಶಿ), ಅಭಿಷೇಕ, ಮಹಾದೇವಪ್ಪ, (ಸಂಘಟನಾ ಕಾರ್ಯ ದರ್ಶಿ), ಪ್ರವೀಣ್ (ಸಂಚಾಲಕ).
ಮಹಿಳಾ ಜಿಲ್ಲಾ ಘಟಕ : ಮೀನಾ ಕುಮಾರಿ (ಅಧ್ಯಕ್ಷೆ), ಡಿ.ಯಶೋಧ (ಉಪಾಧ್ಯಕ್ಷೆ), ಅರುಣ (ಪ್ರ. ಕಾರ್ಯದರ್ಶಿ), ಲೀಲಾವತಿ (ಸಹ ಕಾರ್ಯದರ್ಶಿ), ಸುಮಿತ್ರ (ಕೋಶಾಧ್ಯಕ್ಷೆ), ಜಯಮ್ಮ, ಪ್ರಮೀಳ (ನಿರ್ದೇಶಕರು), ಮೀನಾಕ್ಷಮ್ಮ (ಸಂಚಾಲಕಿ), ಕವಿತಾ (ಸಂಘಟನಾ ಕಾರ್ಯದರ್ಶಿ). ಜಿಲ್ಲಾ ಯುವಘಟಕ : ಮಂಜುನಾಥ್ (ಅಧ್ಯಕ್ಷ), ಕು.ಶಿವಾನಿ (ತಾ.ಅಧ್ಯಕ್ಷೆ), ದೇವರಾಜ್ (ಉಪಾಧ್ಯಕ್ಷ), ಕು.ಬಾಂಧವ್ಯ ಕಾರ್ಯ ದರ್ಶಿ), ಖುಷಿ, ಕೃತಿಕಾ (ಸದಸ್ಯರು).ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮೈಸೂರು ವಿಭಾಗೀಯ ಸಂಯೋಜಕ ಡಾ.ಚಂದ್ರಗುಪ್ತ ವಹಿಸಿದ್ದರು. ಮೆಸ್ಕಾಂ ಉಗ್ರಾಣ ಪಾಲಕ ಜಯಣ್ಣ, ಸಾಮಾಜಿಕ ಕಾರ್ಯಕರ್ತೆ ಚೇತನ, ಸಾಹಿತಿ ಸಿ.ಜಿ.ಸುರೇಶ್, ಪ್ರಗತಿಪರ ಮುಖಂಡ ಉಮೇಶ್‌ಕುಮಾರ್, ದಸಾಪ ಚಿಕ್ಕಮಗಳೂರು ಅಧ್ಯಕ್ಷ ಡಾ.ವಿಜಯ್‌ಕುಮಾರ್, ಮೂಡಿಗೆರೆ ಅಧ್ಯಕ್ಷ ಪಿ.ಕೆ.ಮಂಜುನಾಥ, ತರೀಕೆರೆ ಅಧ್ಯಕ್ಷ ಶೇಖರಪ್ಪ, ಶೃಂಗೇರಿ ಅಧ್ಯಕ್ಷೆ ಜಲಜ, ವಕೀಲರ ಸಂಘದ ಕಾರ್ಯದರ್ಶಿ ಅನಿಲ್, ದೌರ್ಜನ್ಯ ನಿಯಂ ತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಮತ್ತಿ ತರರು ಹಾಜರಿದ್ದರು.