ದಾಂಪತ್ಯ ಜೀವನ ಆದರ್ಶವಾಗಿರಲಿ: ಮುಪ್ಪಿನ ಬಸವಲಿಂಗ ಸ್ವಾಮೀಜಿ

| Published : Apr 07 2025, 12:31 AM IST

ದಾಂಪತ್ಯ ಜೀವನ ಆದರ್ಶವಾಗಿರಲಿ: ಮುಪ್ಪಿನ ಬಸವಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದಾಂಪತ್ಯ ಜೀವನ ಸಮಾಜಕ್ಕೆ ಆದರ್ಶವಾಗಿರಲಿ, ಈ ದಿಸೆಯಲ್ಲಿ ಸತಿ, ಪತಿ ಅನ್ಯೋನ್ಯ, ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಬೇಕು ಎಂದು ಹಾಲಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ರೋಣ:ದಾಂಪತ್ಯ ಜೀವನ ಸಮಾಜಕ್ಕೆ ಆದರ್ಶವಾಗಿರಲಿ, ಈ ದಿಸೆಯಲ್ಲಿ ಸತಿ, ಪತಿ ಅನ್ಯೋನ್ಯ, ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಬೇಕು ಎಂದು ಹಾಲಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಸಂಜೆ ತಾಲೂಕಿನ ಸರ್ಜಾಪೂರ ಗ್ರಾಮದ ಎಸ್.ಎಲ್. ಪಾಟೀಲ ಫಾರ್ಮ ಹೌಸ್ ಆವರಣದಲ್ಲಿ ಶರಣಗೌಡ ಎಲ್.ಪಾಟೀಲ ಅವರ 50ನೇ ಹುಟ್ಟುಹಬ್ಬ ಹಾಗೂ ಶರಣಗೌಡ ಹಾಗೂ ವಿಶಾಲಾಕ್ಷಿ ದಂಪತಿ 25ನೇ ವರ್ಷದ ವಿವಾಹ ವಾರ್ಷಿಕ ಸಂಭ್ರಮ ಅಂಗವಾಗಿ ಜರುಗಿದ ಆದರ್ಶ ದಾಂಪತ್ಯ ಜೀವನಕ್ಕೆ ಸುಲಭ ಮೆಟ್ಟಿಲುಗಳು ವಿಶೇಷ ಕಾರ್ಯಕ್ರಮ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಜಟಿಲವಾಗುತ್ತಿದೆ. ತಿಂಗಳು, ವರ್ಷ ಕಳೆಯುವುದರಲ್ಲಿಯೇ ಮುರಿದು ಬೀಳುತ್ತಿವರುವುದು ವಿಷಾದದ ಸಂಗತಿಯಾಗಿದೆ. ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ. ಆದ್ದರಿಂದ ಮದುವೆ ಸಂಸ್ಕಾರ ಅತ್ಯಂತ ಮಖ್ಯವಾಗಿದೆ. ಕುಟುಂಬ ಮತ್ತು ಸಮಾಜಕ್ಕೆ ದಾಂಪತ್ಯ ಜೀವನ ಮಾದರಿಯಾಗಬೇಕು. ಮಕ್ಕಳಿಗೆ ಆದರ್ಶ ತಂದೆ, ತಾಯಿಯಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಕಷ್ಟ, ಸುಖಗಳನ್ನು ಸಮನಾಗಿ ಸ್ವೀಕರಿಸಿ, ಬದುಕಿನ ಬಂಡಿಯನ್ನು ಸರಾಗವಾಗಿ ಎಳೆಯುವಲ್ಲಿ ದಂಪತಿ ಪಾತ್ರ ಪ್ರಮುಖವಾಗಿದೆ. ಈ ದಿಸೆಯಲ್ಲಿ ಶರಣಗೌಡ ಹಾಗೂ ವಿಶಾಲಾಕ್ಷಿ ದಂಪತಿ 25 ವರ್ಷ ಆದರ್ಶಮಯವಾಗಿ ಜೀವನ ಸಾಗಿಸಿದ್ದು ಹೆಮ್ಮೆ ಪಡುವಂತಾಗಿದೆ ಎಂದರು.

ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ತಂದೆ, ತಾಯಿಗಳು ಮನೆಯ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಸಮಾಜಕ್ಕೆ ಮಾದರಿಯಾಗುವಂತೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ ತುಂಬಬೇಕು ಎಂದರು.

ಮಾಜಿ ಸಚಿವ ಬಿ.ಆರ್. ಯಾವಗಲ್ಲ ಮಾತನಾಡಿ, ಜೀವನ ಸಾರ್ಥಕವಾಗಲು ಸಮಾಜಮುಖಿ ಕಾರ್ಯಗಳಲ್ಲಿ ತೊಡಬೇಕು ಎಂದರು.

ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಬೂದೀಶ್ವರಮಠ ವಿಶ್ವನಾಥ ದೇವರು ಮಾತನಾಡಿದರು.ಶ್ಯಾಮ ವರಧನ್ ಜ್ಯೂನಿಯರ್ ವಿಷ್ಣುವರ್ಧನ್ ಬೆಂಗಳೂರ ಇವರಿಂದ ಸಂಗೀತ ರಸ ಮಂಜರಿ, ಎಂ.ಡಿ. ಇವೆಂಟ್ ಬೆಂಗಳೂರು ಅವರಿಂದ ಸಂಗೀತ ನೃತ್ಯ ಕಾರ್ಯಕ್ರಮ , ಪ್ರೇಮಲೋಕ ಮೆಲೋಡಿಸ್ ಬೇಲೂರ ಕಲಾತಂಡದಿಂದ ಸಂಗೀತ ಕಾರ್ಯಕ್ರಮ, ಕುಟುಂಬ ಸದಸ್ಯರು ಹಾಗೂ ಚಿಣ್ಣರ ಬಳಗದಿಂದ ನಗೆಹಬ್ಬ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ, ಮಾಜಿ ಸಂಸದ ಆರ್. ಎಸ್, ಪಾಟೀಲ, ಐ.ಎಸ್.ಪಾಟೀಲ, ವ್ಹಿ.ಆರ್.ಗುಡಿಸಾಗರ, ಬಸವರಾಜ ದೇವರು ಅಬ್ಬಿಗೇರಿ, ಮಿಥುನ ಪಾಟೀಲ, ಅಕ್ಷಯ ಪಾಟೀಲ, ಪ್ರಭು ಮೇಟಿ, ಅನೀಲ ತೆಗ್ಗಿನಕೇರಿ, ಅಶೊಕ ಬಾಗಮರ, ಶಾಂತಗೌಡ ಟಿ. ಪಾಟೀಲ, ಮಂಜುನಾಥ ಸಂಗಟಿ, ಕಾವ್ಯಾ ಸಂಗಟಿ, ಶಾಂತಮ್ಮ ಎಲ್. ಪಾಟೀಲ, ಅಭಯ, ಉದಯ, ಪ್ರೀತಿ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.