ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಮೊಬೈಲ್‌ದಿಂದ ಉಪಯೋಗ, ದುರುಪಯೋಗ ಎರಡೂ ಇದ್ದು ಅದನ್ನು ನಿಮ್ಮ ಸಾಧನೆಗಾಗಿ, ಉಜ್ವಲ ಭವಿಷ್ಯಕ್ಕಾಗಿ ಬಳಿಸಿಕೊಳ್ಳಿ ಎಂದು ಡಾ.ಜ್ಞಾನೇಶ ಮೊರಕರ ಹೇಳಿದರು. ತಾಳೂಕರ ಚಿತ್ರಕಲಾ ಮತ್ತು ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದವರಿಂದ ಖಾಸಬಾಗದ ಸಾಯಿಭವನದಲ್ಲಿ ದೇವಾಂಗ ಸಮಾಜದ ಹಾಗೂ ನೇಕಾರ ಸಮುದಾಯದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90 ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಿ ಮಾತನಾಡಿದರು.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಿವೃತ್ತ ಸಿಇಒ ಅಧಿಕಾರಿ ಡಿ.ಕೆ.ನಿಂಬಾಳ, ರಾಮದುರ್ಗ ಆರ್‌ಟಿಒ ಅಧಿಕಾರಿ ರಾಘವೇಂದ್ರ ಉಪರಿ, ರಾಜೇಂದ್ರ ಭಂಡಾರಿ, ರಮೇಶ್ ಡವಳಿ ಮಾತನಾಡಿ, ಗುರು ನಮಗೆ ಜ್ಞಾನ ಕೊಡುತ್ತಾನೆ. ತಂದೆಯ ಶ್ರಮ ತಾಯಿಯ ಸಂಸ್ಕಾರ ಈ ಮೂರು ಮಂದಿಯನ್ನು ಎಂದೂ ಮರೆಯದೇ ದೇವರಂತೆ ಪೂಜೆ ಮಾಡಬೇಕು. ಅವರಿಗೆ ಗೌರವ ನೀಡಬೇಕು, ನಮ್ಮ ದೇವಾಂಗ ಸಮಾಜದಲ್ಲಿ ಶೇ.99 ರವರೆಗೆ ಅಂಕ ಪಡೆದಿದ್ದು, ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.ಸುಭಾಷ್ ತಾಳೂಕರ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಕೃಷ್ಣರಾಜೇಂದ್ರ ತಾಳೂಕರ ಮಾತನಾಡಿದರು. ಪ್ರತಿಷ್ಠಾನದ ಸದಸ್ಯರಾದ ಅನ್ನಪೂರ್ಣ ತಾಳೂಕರ, ಪ್ರೇಮಾ ತಾಳೂಕರ ,ಚಂದ್ರಶೇಖರ್ ತಾಳೂಕರ, ಸುನೀತಾ ತಾಳೂಕರ, ರಾಜೇಶ್ವರಿ ತಾಳೂಕರ, ವಿನಾಯಕ್ ತಾಳೂಕರ, ಮಂಜುನಾಥ ಮಕಾಟಿ, ಆರತಿ ಬುಚಡಿ, ಮಂಜುನಾಥ್ ಕಾಮಕರ, ಬಸವರಾಜ ಕಾಮಕರ, ಸಿ.ಪಿ.ಸಂಗೊಳ್ಳಿ ಉಪಸ್ಥಿತರಿದ್ದರು.ದೇವರ ದಾಸಿಮಯ್ಯನವರ ವಚನಗಳನ್ನು ರಾಜೇಶ್ವರಿ ಲೋನಿ ಹಾಗೂ ಪಾರ್ವತಿ ಗರಗ ಹಾಡಿದರು. ಸ್ವಾಗತ ಗೀತೆಯನ್ನು ಪ್ರೀತಿ ತುಂಬಳ ಹಾಡಿದರು. ಚಂದ್ರಗುಪ್ತ ಲಕ್ಷ್ಮಣ ತಾಳೂಕರ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು.