ಚಾಮರಾಜನಗರ ಜಿಲ್ಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿ: ಟಿ.ಎ.ನಾರಾಯಣಗೌಡ

| Published : Dec 01 2024, 01:34 AM IST

ಚಾಮರಾಜನಗರ ಜಿಲ್ಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿ: ಟಿ.ಎ.ನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದರು. ಚಾಮರಾಜನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದರು.ನಗರದ ರಾಮಸಮುದ್ರದ ಆಟೋ ನಿಲ್ದಾಣದ ಸಮೀಪದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯಷ್ಟೇ ನಾಡು, ನುಡಿ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು. ಒಂದು ಕಡೆ ಆದರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚು ಒತ್ತು ಕೊಟ್ಟು ಜಿಲ್ಲಾ ಘಟಕ ಕೆಲಸ ಮಾಡಲಿದೆ ಎಂದರು.ಗಡಿಭಾಗದ ಜಿಲ್ಲೆಯಲ್ಲಿ ಒಂದಷ್ಟು ತಮಿಳರು, ಕೇರಳಿಗರ ಪ್ರಭಾವ ಇರಬಹುದು ಆದರೆ ಇಲ್ಲಿ ಕನ್ನಡ ಅಭಿಮಾನಕ್ಕೆ ಯಾವುದೇ ಕೊರತೆ ಇಲ್ಲ. ಬೆಂಗಳೂರು ಬಿಟ್ಟರೆ ಹೆಚ್ಚು ಕನ್ನಡಪರ ಸಂಘಟನೆಗಳಿರುವ ಜಿಲ್ಲೆ ಚಾಮರಾಜನಗರ. ಸಾಧು, ಸಂತರ, ಶರಣರ, ಜಾನಪದರ ನಾಡಾಗಿರುವ ಚಾಮರಾಜನಗರ ಹೆಚ್ಚು ಅಭಿವೃದ್ಧಿ ಆಗಬೇಕು. ಜಿಲ್ಲಾ ಘಟಕ ಜಿಲ್ಲೆಯ ಸಮಸ್ಯೆ ಮನವರಿಕೆ ಮಾಡಿಕೊಟ್ಟರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲಾಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬದುಕು. ಕನ್ನಡ ನೆಲೆ, ಜಲ, ಗಡಿ, ಕನ್ನಡಿಗರ ಉದ್ಯೋಗ, ಕನ್ನಡ ಭಾಷೆ ಅಭಿವೃದ್ಧಿ, ಇದಕ್ಕಾಗಿ ವೇದಿಕೆಯನ್ನು ಬಲಿಷ್ಠವಾಗಿ ಕಟ್ಟಲಾಗಿದೆ. ರಾಜ್ಯದ ಇಡೀ 31 ಜಿಲ್ಲೆಗಳಲ್ಲಿ ಮಾತ್ರವಲ್ಲ ಗ್ರಾಮೀಣ ಮಟ್ಟದಲ್ಲೂ ಗ್ರಾಮ ಶಾಖೆಗಳನ್ನೂಳಗೊಂಡಂತೆ ಈ ನೆಲದ ಲಕ್ಷಾಂತರ ಯುವಕರಿಗೆ ವೇದಿಕೆಯು ಕನ್ನಡದ ದೀಕ್ಷೆ ನೀಡಿದೆ. ಹಾಗಾಗಿ ಯುವಕರು ಯಾವುದೋ ಪಕ್ಷಗಳ ಗುಲಾಮಗಿರಿಗೆ ಸಿಕ್ಕಿಕೊಳ್ಳದೇ ಕಾಲಹರಣ ಮಾಡದೆ ನಾಡು, ನುಡಿ, ಜಲ ರಕ್ಷಣೆಗಾಗಿ ನಿರಂತರವಾಗಿ 26 ವರ್ಷಗಳಿಂದ ಸೇವೆ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯೊಂದಿಗೆ ಕೈ ಜೋಡಿಸಿದರೆ ನಿಮ್ಮ ಜಿಲ್ಲೆಯ ಸಮಸ್ಯೆಗಳಿಗೆ ಬೇಗ. ಪರಿಹರಿಸಬಹುದು ಎಂದರು.

ಕರ್ನಾಟಕ ಗಡಿಭಾಗವಾದ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೂತನ ಕಾರ್ಯಾಲಯ ಉದ್ಘಾಟನೆಯಾಗಿದೆ. ಅಧಿಕಾರಸ್ಥರು, ಜನಪ್ರತಿನಿಧಿಗಳು ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯಕ್ಕೊಳಗಾಗಿದ್ದು ಇಲ್ಲಿ ಬರಲು ಹಿಂಜರಿಯುತ್ತಾರೆ. ಇದು ಅದ್ಭುತ ಇತಹಾಸ ಇರುವ ಜಿಲ್ಲೆಯಾಗಿದೆ. ಕನ್ನಡದ ತಾಯಿಬೇರು ಜಾನಪದ. ಅಂತಹ ಜಾನಪದದ ಮೂಲವೇ ಚಾಮರಾಜನಗರ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ ಎಂದರು.ರಾಜಕಾರಣಿಗಳು ಮೂಢನಂಬಿಕೆಗಳಿಗೆ ಒಳಗಾಗದೆ ಚಾಮರಾಜನಗರ ಅಭಿವೃದ್ಧಿಗೆ ವಿಶೇಷವಾದ ಒಂದಿಷ್ಟು ಆರ್ಥಿಕ ಯೋಜನೆಗಳನ್ನು ಘೋಷಣೆ ಮಾಡಿ ಹೆಚ್ಚು ಈ ಕಡೆ ಉದ್ಯಮಗಳನ್ನು ತಂದು ಇಲ್ಲಿಯ ಕನ್ನಡದ ಮಕ್ಕಳಿಗೆ ಉದ್ಯೋಗ ಕೊಡಬೇಕು. ನೀರಾವರಿ ಯೋಜನೆಗಳು, ಮೂಲಭೂತ ಸೌಕರ್ಯಗಳು, ಜಿಲ್ಲಾ ಕೇಂದ್ರದಲ್ಲಿ ಅಗತ್ಯವಾಗಿ ಆಗಬೇಕಾದ ಸವಲತ್ತುಗಳು, ಅದನ್ನು ರಾಜ್ಯ ಸರ್ಕಾರ ಮಾಡಬೇಕಾಗುತ್ತದೆ. ಸಿದ್ದರಾಮಯ್ಯ ಮೂಢನಂಬಿಕೆಯಿಂದ ಹೊರವಿರುವ ಮುಖ್ಯಮಂತ್ರಿಯಾಗಿದ್ದಾರೆ. ಅನೇಕ ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗೆ ಹೆಚ್ಚು ಒತ್ತು ಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷ ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಂಜು ಎಂ.ಎನ್.ನಾಯಕ ಹಾಜರಿದ್ದರು.