ನಮ್ಮ ಕ್ಲಿನಿಕ್‌ ಸದ್ಬಳಕೆಯಾಗಲಿ: ಶಾಸಕ ಪ್ರಕಾಶ ಕೋಳಿವಾಡ

| Published : Jul 29 2025, 01:04 AM IST

ಸಾರಾಂಶ

ನಗರ ಪ್ರದೇಶದ ಬಡ ಜನರಿಗಾಗಿ ಅವರು ವಾಸಿಸುವ ಪ್ರದೇಶದಲ್ಲಿ ನಮ್ಮ ಕ್ಲಿನಿಕ್ ಯೋಜನೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು.

ರಾಣಿಬೆನ್ನೂರು: ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನನ್ನ ಅನುದಾನದಲ್ಲಿ ಎಟಿಎಂ(ಆಲ್ ಟೆಸ್ಟಿಂಗ್ ಮಷಿನ್) ಲ್ಯಾಬ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ನಗರದ ತಳವಾರ ಓಣಿ ಗಾಂಧಿ ಗಲ್ಲಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ನಗರಸಭೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಪ್ರಾರಂಭಿಸಲಾದ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಆರೋಗ್ಯಕ್ಕೆ ಸಂಬಂಧಿಸಿದಂತೆ ತನಿಖಾ ವರದಿಗಾಗಿ ನಗರಕ್ಕೆ ತೆರಳುವುದನ್ನು ತಪ್ಪಿಸಿ ಸ್ಥಳೀಯವಾಗಿಯೇ ಆ ಸೌಲಭ್ಯ ಒದಗಿಸುವ ಚಿಂತನೆಯಿಂದ ಎಟಿಎಂ ಪ್ರಾರಂಭಿಸುತ್ತಿದ್ದೆವೆ. ಇದಲ್ಲದೆ ನಗರ ಪ್ರದೇಶದ ಬಡ ಜನರಿಗಾಗಿ ಅವರು ವಾಸಿಸುವ ಪ್ರದೇಶದಲ್ಲಿ ನಮ್ಮ ಕ್ಲಿನಿಕ್ ಯೋಜನೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಆರ್ಥಿಕವಾಗಿ ದುರ್ಬಲವಾದವರಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯ ಸಿಗುವ ದೃಷ್ಟಿಯಂದ ಸರ್ಕಾರ ನಮ್ಮ ಕ್ಲಿನಿಕ್ ಪ್ರಾರಂಭಿಸಿದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ಆರೋಗ್ಯ ಸಿಗಲಿದೆ ಎಂದರು. ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರಡೆಣ್ಣನವರ, ಸದಸ್ಯರಾದ ಶಶಿಧರ ಬಸೇನಾಯಕ, ಮಲ್ಲಿಕಾರ್ಜುನ ಅಂಗಡಿ, ನಾಮಕರಣ ಸದಸ್ಯರಾದ ಚಂದ್ರಕಲಾ ಬಿಷ್ಟಣ್ಣನವರ, ಮಲ್ಲೇಶಪ್ಪ ಮದ್ಲೇರ, ಮಾಜಿ ಸದಸ್ಯ ಬಸವರಾಜ ಹುಚ್ಚಗೊಂಡರ, ನಾಗರಾಜ ಕುಸಗೂರ, ಚಂದ್ರಣ್ಣ ಬೇಡರ, ಬಸವರಾಜ ಹುಚ್ಚಗೊಂಡರ, ಸಾರ್ವಜನಿಕ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ. ರಾಜು ಶಿರೂರ, ದೇವೆಂದ್ರಪ್ಪ ಡಿ.ಎಸ್., ನಾಗರಾಜ ಕುಡಪಲಿ, ಡಾ. ವಿನಾಯಕ ಜೆ.ಕೆ., ಡಾ. ದೀಪಾ ಗುಂಡೇರ, ಡಾ. ದರ್ಶನ ಬಣಕಾರ, ಸಂಗಮೇಶ ಹನುಮಾಪುರ, ರಾಜೇಶ್ವರಿ ವಿಭೂತಿ, ಸಂತೋಷ ಡಿಎಂ. ಮತ್ತಿತರರಿದ್ದರು.