ಕವಿಗಳು ಸಮಾಜದ ಆಗು ಹೋಗುಗಳಿಗೆ ಸ್ಪಂದಿಸಲಿ: ರಾಘವೇಂದ್ರ ದಂಡಿನ್

| Published : Dec 24 2024, 12:46 AM IST

ಸಾರಾಂಶ

ನಾಡಿನ ನೆಲ, ಜಲ ಉಳಿಸುವ ಹೋರಾಟಗಳಿಗೆ ಕವಿಗಳು ಶುದ್ಧ ಅಂತಃಕರಣದಿಂದ ಕಾವ್ಯ ರಚಿಸುವ ಮೂಲಕ ನೈತಿಕ ಬೆಂಬಲ ನೀಡಬೇಕು.

107ನೇ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ, ಶಿಕ್ಷಕ

ಕನ್ನಡಪ್ರರ್ಭ ವಾರ್ತೆ ಗಂಗಾವತಿ

ನಗರದ ಕನ್ನಡ ಜಾಗೃತಿ ಸಮಿತಿಯ ಭುವನೇಶ್ವರಿ ಭವನದಲ್ಲಿ ಅರಳಿಹಳ್ಳಿಯ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ, ಕನ್ನಡ ಜಾಗೃತಿ ಸಮಿತಿ ಮತ್ತು ತುಂಗಭದ್ರಾ ಅಭಿಯಾನ ಸಹಯೋಗದಲ್ಲಿ ಕಾವ್ಯಲೋಕ ಸಂಘಟನೆ ಆಶ್ರಯದಲ್ಲಿ 107ನೇ ಕವಿಗೋಷ್ಠಿ ಜರುಗಿತು.

ಹಿರಿಯ ಸಾಹಿತಿ, ಶಿಕ್ಷಕ ರಾಘವೇಂದ್ರ ದಂಡಿನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿನ ಆಗು ಹೋಗುಗಳಿಗೆ ಕವಿಗಳು ಸ್ಪಂದಿಸಬೇಕು. ನಾಡಿನ ನೆಲ, ಜಲ ಉಳಿಸುವ ಹೋರಾಟಗಳಿಗೆ ಕವಿಗಳು ಶುದ್ಧ ಅಂತಃಕರಣದಿಂದ ಕಾವ್ಯ ರಚಿಸುವ ಮೂಲಕ ನೈತಿಕ ಬೆಂಬಲ ನೀಡಬೇಕು. ಕವನದ ವಿಷಯ, ವಸ್ತು, ಲಾಲಿತ್ಯ, ಶಬ್ದಗಳ ಬಳಕೆ ಮೊದಲಾದ ಅಗತ್ಯತೆ ಬಗ್ಗೆ ಕವಿಗಳು ಗಮನ ಹರಿಸಬೇಕು ಎಂದರು.

ನವದೆಹಲಿಯ ಸ್ವಾಭಿಮಾನ ಆಂದೋಲನ ಮುಖ್ಯಸ್ಥ ಬಸವರಾಜ ಪಾಟೀಲ ವೀರಾಪುರ, ನ್ಯಾಯವಾದಿ ತಿಪ್ಪೇರುದ್ರಸ್ವಾಮಿ, ಡಾ. ಶಿವಕುಮಾರ ಮಾಲಿಪಾಟೀಲ್, ಅಭಿಯಾನ ಪ್ರಮುಖ ಮಂಜು ಕಟ್ಟಿಮನಿ ಮಾತನಾಡಿದರು. ಪ್ರಾಂಶುಪಾಲ ಡಾ. ಶರಣಬಸಪ್ಪ ಕೋಲ್ಕಾರ್ ಜಲ ಸಂಕಲ ಪ್ರತಿಜ್ಞಾ ವಿಧಿ ಬೋಧಿಸಿದರು.

ಅರಳಿಹಳ್ಳಿಯ ರೇವಣಸಿದ್ದಯ್ಯ ತಾತ ಸಾನಿಧ್ಯ ವಹಿಸಿದ್ದರು. ಕಾವ್ಯಲೋಕ ಅಧ್ಯಕ್ಷ ಎಂ. ಪರಶುರಾಮ ಪ್ರಿಯ, ಆಶೀಶ್ ಕೃಷ್ಣ ಉಪಸ್ಥಿತರಿದ್ದರು. ತಾರಾ ಸಂತೋಷ ಮೇರವಾಡೆ ನಿರೂಪಿಸಿದರು.

ನಿರ್ಮಲ ತುಂಗಭದ್ರಾ ಶೀರ್ಷಿಕೆಯಡಿ ಆಯೋಜಿಸಿದ್ದ 107ನೇ ಕವಿಗೋಷ್ಠಿಯಲ್ಲಿ ಹಿರಿಯ ಕವಿ ಶರಣಪ್ಪ ಮೆಟ್ರಿ, ಶಾಮೀದ್ ಲಾಠಿ, ಭೀಮನಗೌಡ ಕೇಸರಹಟ್ಟಿ, ಮಹಾದೇವ ಮೋಟಿ ಹೊಸಳ್ಳಿ, ಸೋಮಶೇಖರ್ ಕಂಚಿ, ವಿರುಪಣ್ಣ ಢಣಾಪುರ, ಮಂಜುಳಾ ವೆಂಕಟಗಿರಿ, ಗೋಪಿನಾಥ್ ದಿನ್ನಿ, ಹುಸೇನ್ ಸಾಬ್ ಗುಂಡೂರು ಸೇರಿದಂತೆ ಕವಿಗಳು ಭಾಗವಹಿಸಿದ್ದರು.