ಹೊಳಲ್ಕೆರೆಯಲ್ಲಿ ನಡೆದ ಗಣ ರಾಜ್ಯೋತ್ರವದ ಪ್ರಯುಕ್ತ ಶಾಸಕ ಡಾ.ಎಂ.ಚಂದ್ರಪ್ಪ ಶಾಲೆಗಳಿಗೆ ಬಸ್‌ ವಿತರಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಹಳ್ಳಿಗಾಡಿನಿಂದ ಬರುವ ಬಡ ಮಕ್ಕಳಿಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ತಾಲೂಕಿನಾದ್ಯಂತ 13 ಕರ್ನಾಟಕ ಪಬ್ಬಿಕ್‌ ಶಾಲೆಗಳನ್ನು ನೀಡಿರುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಶಾಸಕ ಡಾ.ಎಂ.ಚಂದ್ರಪ್ಪ, ಕಾಶಿಪುರ, ಗುಂಡೇರಿ, ತಾಳಿಕಟ್ಟೆ, ರಾಮಗಿರಿ, ಹಿರೆಎಮ್ಮಿಗನೂರು, ಹಿರೇ ಕಂದವಾಡಿ , ಉಪರಿಗೇನಹಳ್ಳಿ, ಕೋಗುಂಟೆ, ಹುಲ್ಲೇಹಾಳ್‌ ಸೇರಿ 13 ಕಡೆ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ನೀಡಿದ್ದು ರಾಜ್ಯದಲ್ಲಿ ಯಾವ ಶಾಸಕ, ಮಂತ್ರಿಯೂ ಇಂತಹ ಅದ್ಭುತವಾದ ಕೆಲಸಕ್ಕೆ ಕೈಹಾಕಿಲ್ಲ ಬ್ರಿಟೀಷರ ಕಾಲದ ಆಸ್ಪತ್ರೆಗಳನ್ನು ಕೆಡವಿ ಗುಣಮಟ್ಟದ ಹೈಟೆಕ್‌ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆ. ರೈತರಿಗೆ ನೀರು, ವಿದ್ಯುತ್‌ಗೆ ಮೊದಲು ಅಧ್ಯತೆ, ರಸ್ತೆ ಶಾಲಾ-ಕಾಲೇಜು ಹಾಗು ಪಾಲಿಟೆಕ್ನಿಕ್‌, ಐಟಿಐ, ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ ನ್ಯಾಯಾಧೀಶರಿಗೆ, ವಸತಿ ಗೃಹಗಳನ್ನು ಕಟ್ಟಿಸಿದ್ದೇನೆಂದು ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನೂ ಹೊಸದಾಗಿ ಶಾಲೆಗಳನ್ನು ಕಟ್ಟಿಸುತ್ತೆನೆ ಭರಮ ಸಾಗರದಲ್ಲಿ ಹತ್ತು ವರ್ಷಗಳ ಕಾಲ ಶಾಸಕನಾಗಿದ್ದು , ಸಾರ್ಚಜನಿಕರ ಬದುಕನ್ನು ಹತ್ತಿರದಿಂದ ಕಂಡವನು ಈಗ ಹೊಳಲ್ಕೆರೆ ಕ್ಷೇತ್ರಕ್ಕೆ ಶಾಸಕನಾಗಿದ್ದೆನೆ. ಆರೋಗ್ಯ ಶಿಕ್ಷಣ ಮತ್ತು ಸಾರ್ವಜನಿಕರಿಗೆ ಆಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೇನೆ ಎಂದರು.

ಕೆಲವು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಇಂಗ್ಲಿಷ್ ಮಾಧ್ಯಮ ಫ್ರಾರಂಬಿಸಿದ್ದು ವಿದ್ಯಾರ್ಥಿಗಳನ್ನು ಕರೆ ತರಲು ಎಂ.ಎಂ.ಸರ್ಕಾರಿ ಫ್ರೌಢಶಾಲೆ. ಎನ್‌ಇಎಸ್‌ ಶಾಲೆ ಸೇರಿ ಗುಂಡೇರಿ, ತಾಳಿಕಟ್ಟೆ, ರಾಮಗಿರಿ, ಭರಮ ಸಾಗರ, ಹುಲೇಹಾಳ್‌ ಶಾಲೆಗಳು ಸೇರಿದಂತೆ ಮೊದಲು 5 ಬಸ್‌ ನೀಡಿದ್ದು ಒಟ್ಟು 13 ಬಸ್‌ ವಿತರಿಸಿದ್ದೆನೆ. ಪಟ್ಟಣದ ಪುರಸಭೆಗೆ 2 ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ವಾಹನಗಳು ಹಾಗೂ ಆರೋಗ್ಯ ಸೇತು ಸಂಚಾರಿ ವಾಹನಕ್ಕೆ ಚಾಲನೆ ನೀಡಿದರು.

ತಹಸೀಲ್ದಾರ್‌ ವಿಜಯ ಕುಮಾರ್‌ ಧ್ವಜಾರೋಹಣ ನೆರವೇರಿಸಿದರು. ತಾಪಂ ಇಒ ಶಿವಪ್ರಕಾಶ್‌, ಬಿಇಒ ಎಚ್‌. ಶ್ರೀನಿವಾಸ್‌, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ಕಸಾಪ ಅಧ್ಯಕ್ಷ ಶಿವಮೂರ್ತಿ, ಸಿಪಿಐ ಶ್ರೀಶೈಲ ಜಿ.ಚೌಗುಲಾ, ಮುಖ್ಯಾಧಿಕಾರಿ ಡಿ.ಉಮೇಶ್‌, ದೈಹಿಕ ಶಿಕ್ಷಣ ಪರಿವೀಕ್ಷಕ ಶೇರ್‌ಅಲಿ, ಡಿ.ಸಿ.ಮೋಹನ್‌, ಬಿಜೆಪಿ ಮಂಡಲ ಅಧಕ್ಷ ಕುಮಾರಣ್ಣ ಹಾಗೂ ವಿವಿದ ಇಲಾಖೆ ಅಧಿಕಾರಿಗಳು ವಿವಿಧ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.