ಪೋಷಣ್ ಮಾಸ ಆಚರಣೆ ಸೀಮಿತಗೊಳಿಸದೇ ಪ್ರತಿ ತಿಂಗಳು ನಡೆಯಲಿ: ಡಾ.ಅನುರಾಧ

| Published : Sep 03 2024, 01:33 AM IST

ಪೋಷಣ್ ಮಾಸ ಆಚರಣೆ ಸೀಮಿತಗೊಳಿಸದೇ ಪ್ರತಿ ತಿಂಗಳು ನಡೆಯಲಿ: ಡಾ.ಅನುರಾಧ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಣ್ ಮಾಸಾಚರಣೆ ಕೇವಲ ಒಂದು ತಿಂಗಳಿಗೆ ಸೀಮಿತವಾಗದೇ, ಪ್ರತಿ ತಿಂಗಳು ನಡೆಯುವಂತಾಗಬೇಕು. ಕಿಶೋರಿಯರು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ಅವಶ್ಯ ಎಂದು ಆಯುಷ್ ಅಧಿಕಾರಿ ಡಾ.ಅನುರಾಧ ಹೇಳಿದ್ದಾರೆ.

- ದಾವಣಗೆರೆ ತಾಲೂಕುಮಟ್ಟದ ಪೋಷಣ್ ಮಾಸ ಕಾರ್ಯಕ್ರಮ

- - - ದಾವಣಗೆರೆ: ಪೋಷಣ್ ಮಾಸಾಚರಣೆ ಕೇವಲ ಒಂದು ತಿಂಗಳಿಗೆ ಸೀಮಿತವಾಗದೇ, ಪ್ರತಿ ತಿಂಗಳು ನಡೆಯುವಂತಾಗಬೇಕು. ಕಿಶೋರಿಯರು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ಅವಶ್ಯ ಎಂದು ಆಯುಷ್ ಅಧಿಕಾರಿ ಡಾ.ಅನುರಾಧ ಹೇಳಿದರು.

ಶನಿವಾರ ನಗರದ ತರಳಬಾಳು ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಹಯೋಗದಲ್ಲಿ ನಡೆದ ತಾಲೂಕುಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳವನೂರು ಗ್ರಾಪಂ ಪಿಡಿಒ ರೇವತಿ ಮಾತನಾಡಿ, ಪ್ರತಿಯೊಬ್ಬರೂ ಕೂಡ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಹದಡಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಬಸವರಾಜ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ಸಹಾಯಕ ಆಯೋಜನಾಧಿಕಾರಿ ನೇತ್ರಾವತಿ, ಜಿಲ್ಲಾ ರಕ್ಷಣಾ ಘಟಕದ ಹಾಲೇಶ, ತಾಪಂ ಮಾಜಿ ಸದಸ್ಯ ಮಂಜುನಾಥ, ಬೆಳವನೂರು ಗ್ರಾಪಂ ಸದಸ್ಯೆ ರುದ್ರಮ್ಮ, ಮಾಜಿ ಅಧ್ಯಕ್ಷ ಹನುಮಂತಪ್ಪ, ವಿಜಯಕುಮಾರ, ಕೆ.ಎಸ್.ತಿಪ್ಪೇಸ್ವಾಮಿ, ರಮ್ಯ, ವರುಣ, ಡಾ.ಜಗದೀಶ, ಸುನೀತಾ, ಗ್ರಾಮದ ಮುಖಂಡರು, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ, ಶಾಲೆ ಮುಖ್ಯೋಪಾಧ್ಯಾಯ ಹನುಮಂತಪ್ಪ ಹಾಗೂ ಇತರರು ಇದ್ದರು.

ಸುಪೋಷಿತ ಕಿಶೋರಿ ಸಶಕ್ತ ನಾರಿ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಿತು. ತಾಯಿ ಹೆಸರಿನಲ್ಲಿ ಸಸಿ ನೆಡುವುದು, ಸೀಮಂತ, ಅನ್ನಪ್ರಾಶನ ಕಾರ್ಯಕ್ರಮಗಳು ಜರುಗಿದವು.

- - - -1ಕೆಡಿವಿಜಿ34ಃ:

ದಾವಣಗೆರೆಯಲ್ಲಿ ನಡೆದ ತಾಲೂಕುಮಟ್ಟದ ಪೋಷಣ್ ಮಾಸ ಕಾರ್ಯಕ್ರಮವನ್ನು ಆಯುಷ್ ಅಧಿಕಾರಿ ಡಾ.ಅನುರಾಧ ಉದ್ಘಾಟಿಸಿದರು.