ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿಧಾನಸಭೆಯ ವಿಶೇಷ ಅಧಿವೇಷನದಲ್ಲಿ ಒಳಮೀಸಲಾತಿ ಪರವಾಗಿ ಶಾಸಕ ಪ್ರದೀಪ್ಈಶ್ವರ್ ಮಾತನಾಡಲು ಒತ್ತಾಯಿಸಿ ಕರ್ನಾಟಕ ಮಾದಿಗ ಮಹಾಸಭಾ - ದಲಿತ ಸಂಘಟನೆಗಳ ಒಕ್ಕೂಟ ಸೋಮವಾರ ನಗರದ ತಾಲೂಕು ಕಚೇರಿಯಲ್ಲಿರುವ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.ಈ ವೇಳೆ ದಸಂಸ ರಾಜ್ಯ ಸಂಚಾಲಕ ಬಿ.ಎನ್.ಗಂಗಾಧರಪ್ಪ ಮಾತನಾಡಿ, ನ್ಯಾ. ನಾಗಮೋಹನ್ ದಾಸ್ ವರದಿ ಸಲ್ಲಿಸಿದ ತರುವಾಯ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಆ.19ಕ್ಕೆ ಮುಂದೆ ಹಾಕಿರುವುದು ಒಳಮೀಸಲಾತಿ ವಿರೋಧಿಗಳಿಗೆ ಸರ್ಕಾರದ ಮೇಲೆ ದಬಾವಣೆ ಮಾಡಲು ಸಮಯಾವಾಕಾಶ ಕೊಟ್ಟಂತಾಗಿದೆ ಎಂದರು.
ಉಪಸಮಿತಿ ರಚಿಸುವ ಹುನ್ನಾರನ್ಯಾ. ನಾಗಮೋಹನ್ ದಾಸ್ ಆಯೋಗ ರಚನೆ ಬೇಡಿಕೆಯಾಗಿರಲಿಲ್ಲ. ಆಯೋಗದ ಕಾರ್ಯದಲ್ಲಿ ಒಂದೇ ಗುಂಪಿನ ಅಧಿಕಾರಿಗಳೇ ಕಾರ್ಯನಿರ್ವಹಿಸಿದ್ದಾರೆ. ಈಗ ಅದೇ ಜನ ವರದಿಯ ಬಗ್ಗೆ ತಕರಾರು ತೆಗೆದು ಸಂಪುಟ ಉಪಸಮಿತಿ ರಚಿಸುವ ಹುನ್ನಾರದ ಹಿಂದೆ ಸಕ್ರಿಯರಾಗಿದ್ದಾರೆ. ಇದು ಒಳ ಮೀಸಲಾತಿ ಕುರಿತಾದ ಕಾಂಗ್ರೆಸ್ಸಿನ ವಿಳಂಬ ನೀತಿ, ನಿಧಾನ ದ್ರೋಹದ ಮುಂದುವರಿದ ಭಾಗವಾಗಿದೆ ಎಂದರು.
ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಲ್ಲಿ ಆದಿಕರ್ನಾಟಕ ಜನಸಂಖ್ಯೆಯನ್ನು 1,47,199, ಆದಿದ್ರಾವಿಡ ಜನಸಂಖ್ಯೆಯನ್ನು 3,20,641 , ಆದಿ ಆಂಧ್ರ ಜನಸಂಖ್ಯೆಯನ್ನು 7,114 ಇದೆ ಎಂದು ಇದನ್ನು ''''ಇ'''' ಪ್ರವರ್ಗದಲ್ಲಿ ಗುರುತಿಸಲಾಗಿದೆ. ಈಗ ''''ಸಿ'''' ಗುಂಪಿನ್ನು ಇಡಿಯಾಗಿ ''''ಇ'''' ಗುಂಪಿಗೆ ಸೇರಿಸುವ ಹುನ್ನಾರ ನೆಡದಿದೆ. ''''ಇ'''' ಗುಂಪಿನಲ್ಲಿ ಮೂಲ ಜಾತಿಹೇಳದೆ ಆದಿದ್ರಾವಿಡ ಎಂದು ಗುರುತಿಸಿಕೊಂಡವರು 3,20,641 ಜನ ಇದ್ದಾರೆ ಎಂದರು.ಬಲಾಬಲ ಪ್ರದರ್ಶನ ಬೇಡ
ಇವರಲ್ಲಿ ಬಹುತೇಕ ಜನ ಪೌರಕಾರ್ಮಿಕ ವೃತ್ತಿಯಲ್ಲಿ ಇದ್ದು. ಮಾದಿಗ ಸಂಬಂಧಿತ ಜಾತಿಗಳವರಾಗಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಸರ್ಕಾರದ ವಿಳಂಬ ನೀತಿಯ ಸಮಾಯಾವಕಾಶ ಬಳಸಿಕೊಂಡು ನಮ್ಮ ಸೋದರ ಗುಂಪಿನವರು ಬಲಾಬಲಾ ಪ್ರದರ್ಶನಕ್ಕೆ ಇಳಿದಿರುವು ಒಳ್ಳೆಯ ಬೆಳವಣಿಗೆಯಲ್ಲ, ಸರ್ಕಾರದಲ್ಲಿ ಪ್ರಭಾವಿ ಸಚಿವರೂ ತಮ್ಮವರೇ ಇದ್ದರೂ ಆನಗತ್ಯವಾಗಿ ಬೀದಿಗಿಳಿದು ದ್ವೇಷ ಬಾಷಣ ಮಾಡುವುದು ಪರಸ್ಪರ ಅಂತರ ಹೆಚ್ಚು ಮಾಡುತ್ತದೆ ಎಂದುಎಚ್ಚರಿಸಿರು.ಸಿದ್ದರಾಮಯ್ಯನವರು 2013 ರಿಂದ 2018ರ ವರೆಗೆ ಮುಖ್ಯಮಂತ್ರಿ ಆದಾಗಲೂ ಇದೇ ವಿಳಂಬ ದ್ರೋಹದ ಚಾಳಿ ನಡೆಸಿದ್ದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ನಮ್ಮ ನೇರ ಆರೋಪವೆಂದರೆ ಸಿದ್ದರಾಮಯ್ಯನವರು ಮೂವರು ಸಚಿವರ ಕೈಗೊಂಬೆಯಾಗಿದ್ದಾರೆ ಎಂಬುದು ಸಿದ್ದರಾಮಯ್ಯನವರು ಸ್ವತಂತ್ರವಾಗಿ ಒಂದು ಸಚಿವ ಸಂಪುಟ ಸಭೆ ನೆಡೆಸುವಷ್ಟೂ ಧೈರ್ಯ ಉಳಿಸಿಕೊಂಡಿಲ್ಲ. ಯಾರದೋ ಆಣತಿಗೆ ತಕ್ಕಂತೆ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳುತ್ತಿರುವುದನ್ನು ನೋಡಿದರೆ ನ್ಯಾ ನಾಗಮೋಹನ್ ದಾಸ್ ವರದಿಗೂ, ನ್ಯಾ. ಕಾಂತರಾಜ್ ವರದಿಗೆ ಆದ ಗತಿಯೇ ಆಗುತ್ತದೆಯೇನೊ ಎಂಬ ಆತಂಕ ನಮ್ಮದು ಎಂದರು.
ಮಾಧುಸ್ವಾಮಿ ವರದಿ ಜಾರಿ ಮಾಡಿಈ ಗಿನ ಪರಿಸ್ಥಿತಿ ನೋಡಿದರೆ ರಾಜ್ಯ ಸರ್ಕಾರ ಮಾಧುಸ್ವಾಮಿ ವರದಿಯನ್ನೇ ಜಾರಿ ಮಾಡುವುದು ಒಳ್ಳೆಯದು. ಇಲ್ಲವಾದರೆ ಎಲ್ಲ ಆಯೋಗಗಳು ಹೇಳುವಂತೆ ಮಾದಿಗರಿಗೆ ಶೇ 67 ರಷ್ಟು ಪ್ರತ್ಯೇಕ ಮೀಸಲಾತಿ ಕೊಟ್ಟು ಉಳಿದಿದ್ದನ್ನು ನಿಧಾನಗತಿಯಲ್ಲಿ ಮಾಡಬಹುದಾಗಿದೆ ಈ ಕುರಿತು ಶಾಸಕ ರಾದ ಪ್ರದೀಪ್ಈಶ್ವರ್ ವಿಶೇಷ ಅಧಿವೇಷನದಲ್ಲಿ ಒಳಮೀಸಲಾತಿ ಪರವಾಗಿ ಮಾತನಾಡ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕರ ಆಪ್ತ ಸಹಾಯಕ ಮಂಜುನಾಥ್ ಮನವಿಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಭಾಗ್ಯಮ್ಮ, ನಾಗೇಶ್, ನಾಗರಾಜು,ಮುನಿಯಪ್ಪ, ಮತ್ತಿತರರು ಇದ್ದರು.